ಕೊನೆಗೂ ಶಂಕರ್ ನಾಗ್ ಮಗಳು ಸಿಕ್ಕೇ ಬಿಟ್ರು; ಎಲ್ಲಿದ್ದಾರೆ, ಹೇಗಿದ್ದಾರೆ?

ಕನ್ನಡದ ಮಹಾನ್ ಕಲಾವಿದರಾದ ದಿ.ಶಂಕರ್ ನಾಗ್ ಮತ್ತು ಅರುಂಧತಿ ನಾಗ್ ಮಗಳು ಕಾವ್ಯಾ ಏನು ಮಾಡುತ್ತಿದ್ದಾರೆ ಅನ್ನೋ ಕುತೂಹಲ ಶಂಕರ್‌ನಾಗ್ ಅಭಿಮಾನಿಗಳಿಗಂತೂ ಇರುತ್ತೆ. ಇಲ್ಲಿದೆ ಮಾಹಿತಿ

legendary actor shankarnag daughter kavya nag owner of vergin coconut oil company

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಆಟೋ ನೋಡಿದರೆ, ಸ್ಯಾಂಡಲ್‌ವುಡ್‌ನ ದಿಗ್ಗಜರನ್ನು ನೆನಪಿಸಿಕೊಳ್ಳುವಾಗ, ಅಷ್ಟೇ ಯಾಕೆ ನಮ್ಮ ಮೆಟ್ರೋ ಉದ್ಘಾಟನೆಯಾಗುವಾಗಲೂ ಕನ್ನಡಿಗರು ನೆನಪಿಸುಕೊಳ್ಳುವ ನಟನೆಂದರೆ ಶಂಕರ್‌ನಾಗ್. ಚಿತ್ರದುರ್ಗದಲ್ಲಿ ಅಪಘಾತವಾಗಿ ಕೊನೆಯುಸಿರೆಳೆದ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ಅವರ ಸ್ಥಾನವನ್ನು ತುಂಬಲು ಇವತ್ತಿಗೂ ಅಸಾಧ್ಯ. ದೂರದೃಷ್ಟಿ ಜೊತೆ ನಾಟಕ, ನಟನೆ, ನಿರ್ದೇಶನಕ್ಕೂ ತಾವು ಸೈ ಎಂದು ಚಿಕ್ಕ ವಯಸ್ಸಿನಲ್ಲಿಯೇ ಪ್ರೂವ್ ಮಾಡಿದ ಈ ನಟನ ಪತ್ನಿ ಅರುಂಧತಿ ನಾಗ್, ನಾಟಕಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ, ಮಗಳು ಕಾವ್ಯಾ ಬಗ್ಗೆ ಎಲ್ಲಿಯೂ ವಿಷಯ ಸಿಗೋಲ್ಲ. ವಿದೇಶದಿಂದ ಮರಳಿದ ಮೇಲೆ ಸದ್ಯ ಬೆಂಗಳೂರಿನಲ್ಲಿ ವಾಸ ಇರುವ ಕಾವ್ಯಾನಾಗ್ ಈಗೇನು ಮಾಡುತ್ತಿದ್ದಾರೆ ಎಂಬುದು ಬಹುತೇಕರ ಕುತೂಹಲ. ಅದಕ್ಕಿಲ್ಲಿದೆ ಉತ್ತರ.

ಬಾಲ್ಯದ ಗೆಳೆಯನನ್ನು ವರಿಸಿದ ಕಾವ್ಯಾನಾಗ್‌
ವಿದ್ಯಾಭ್ಯಾಸ ಮುಗಿದ ಮೇಲೆ ಕಾವ್ಯಾ ನಾಗ್‌ ಅವರು ಆಯ್ಕೆ ಮಾಡಿಕೊಂಡಿದ್ದು ವಕೀಲಿಕೆ. ಇದರ ಜತೆಗೆ ಎನ್‌ಜಿಓವೊಂದರಲ್ಲಿ ಕೆಲಸ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅಂದಹಾಗೆ ವಕೀಲ ವೃತ್ತಿ ಮಾಡುತ್ತಿರುವಾಗಲೇ ಬಾಲ್ಯದ ಗೆಳೆಯನ್ನು ವರಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 2010ರಲ್ಲಿ ತಮ್ಮ ಬಾಲ್ಯದ ಗೆಳೆಯ ಸಲಿಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ವೈರಲ್ ಆಗ್ತಿದೆ ಪುನೀತ್, ಶಂಕರ್‌ನಾಗ್‌ ಅಭಿಮಾನಿಯ ಲಕ್ಸುರಿ ಆಟೋ

ಈಗೇನು ಮಾಡುತ್ತಿದ್ದಾರೆ?
ಹುಣಸೂರಿನ ತಮ್ಮ ತಂದೆ ಜಮೀನಿನಲ್ಲಿ ಕೋಕೋನೆಸ್ ಅನ್ನುವ ಕಂಪನಿ ತೆರೆದಿರುವ ಕಾವ್ಯಾನಾಗ್, ಕೆಮಿಕಲ್‌ ಮುಕ್ತ ಸೋಪ್ ಹಾಗೂ ಆಯಿಲ್ ಉತ್ಪಾದಿಸಿ, ಮಾರುತ್ತಿದ್ದಾರೆ. ಕೋಕೋನೆಸ್‌ ಸಂಸ್ಥೆ ಮೂಲಕ ತಯಾರಾಗುತ್ತಿರುವ ಪರಿಶುದ್ಧ ತೆಂಗಿನೆಣ್ಣೆ ಅಥವಾ ವರ್ಜಿನ್ ಆಯಿಲ್ ಬೆಂಗಳೂರಿನ ಆರ್ಗ್ಯಾನಿಕ್ ಶಾಪ್‌ಗಳಲ್ಲಿ, ಕೋಕೋನೆಸ್ ವೆಬ್‌ಸೈಟ್, ಅಮೆಜಾನ್‌ನಂಥ ಆನ್‌ಲೈನ್ ತಾಣಗಳಲ್ಲಿ ದೊರೆಯುತ್ತದೆ. ಬೆಂಗಳೂರು ಹೊರವಲಯದಲ್ಲಿ ಇವರ ಕೋಕೋನೆಸ್ ತೆಂಗಿನ ಹಾಲು ಉತ್ಪಾದಕ ಘಟಕವಿದೆ. 

ಆರ್ಗಾನಿಕ್‌ ಎಣ್ಣೆ ತಯಾರಿ ಯೋಚನೆ ಬಂದಿದ್ದು ಹೇಗೆ?
ಕಾವ್ಯಾನಾಗ್‌ ಅವರು ಓದಿದ್ದು ವೈಲ್ಡ್‌ಲೈಫ್ ಬಯಾಲಜಿ (Wildlife Biology). ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಈ ಹಿನ್ನೆಯಲ್ಲಿ ಹುಟ್ಟಿಕೊಂಡ ಯೋಚನೆಯೇ ವರ್ಜಿನ್‌ ಆಯಿಲ್‌. 'ನಮ್ಮ ನೆಲದಲ್ಲಿ ತೆಂಗು ಹೇರಳವಾಗಿದೆ. ಆದರೆ, ಅದನ್ನು ಸರಿಯಾಗಿ ಬಳಸುವಲ್ಲಿ ಸೋಲುತ್ತಿದ್ದೇವೆ. ನಮ್ಮ ಪರಂಪರೆಯ ಜ್ಞಾನವನ್ನು ಮೂಲೆಗುಂಪು ಮಾಡಿ, ವಿದೇಶಿ ಉತ್ಪನ್ನಗಳ ಹಿಂದೆ ಹೋಗುತ್ತಿದ್ದೇವೆ. ನಮ್ಮ ನೆಲದ ಸಂಪತ್ತು ಹಾಗೂ ಜ್ಞಾನವನ್ನು ಮುಂದುವರಿಸಬೇಕು. ಅದು ಜನಕ್ಕೆ ಬಳಕೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಕೋಕೋನೆಸ್‌ ಸಂಸ್ಥೆ ಆರಂಭಿಸಿದೆ, ಎನ್ನುತ್ತಾರೆ ಕಾವ್ಯಾ.

ವರ್ಜಿನ್‌ ಆಯಿಲ್‌ ಉತ್ಪನ್ನಗಳೇ ಏಕೆ?
ಈ ಪ್ರಶ್ನೆಗೆ ಕಾವ್ಯಾನಾಗ್‌ ಯೋಚನೆ ದೂರದ ಫಿಲಿಫೈನ್ಸ್‌ ಜೊತೆ ಸೇರಿಕೊಂಡಿದೆ. ಹೌದು, ಕಾವ್ಯಾಗೆ ಈ ಪರಿಶುದ್ಧ ತೆಂಗಿನ ಎಣ್ಣೆ ಬಗ್ಗೆ ಗೊತ್ತೇ ಇರಲಿಲ್ಲವಂತೆ. ಈ ಬಗ್ಗೆ ಸರ್ಚ್ ಮಾಡಿದಾಗ, ದೂರ ಫಿಲಿಫೈನ್ಸ್‌ನಲ್ಲಿ ಸಿಗುತ್ತೆ ಅನ್ನೋದು ಗೊತ್ತಾಗಿದೆ. 2000 ವರ್ಷಗಳ ಹಿಂದೆಯಿಂದಲೂ ಭಾರತದಲ್ಲಿ ಈ ತೆಂಗಿನಕಾಯಿ ಹಾಲನ್ನು ಬಳಸುತ್ತಿದ್ದಾರೆ. ಆದರೆ, ನಮ್ಮದೇ ನೆಲದಲ್ಲಿ ಇದರ ಉಪ ಉತ್ಪನ್ನಗಳು ಸಿಗುತ್ತಿಲ್ಲವೆಂಬ ವಿಷಯ ಕಾವ್ಯಾ ಅವರಿಗೆ ಏನೋ ಒಂದು ಹೊಸತು ಮಾಡಬೇಕೆಂಬ ಆಶಯ ಹುಟ್ಟಿಸಿದೆ. ನಮ್ಮ ನೆಲದ ಆರೋಗ್ಯಕರ ಪರಂಪರೆಯ (Healthy Legacy) ಬಗ್ಗೆ ತಿಳಿ ಹೇಳಬೇಕು ಎನ್ನುವ ಉದ್ದೇಶದಿಂದ ವರ್ಜಿನ್ ಎಣ್ಣೆ ಉತ್ಪಾದಿಸುವ ಯೋಚನೆ ಬಂತಂತೆ.

ಹುಟ್ಟು ಹಬ್ಬದಂದೇ ಪ್ರೀತಿಸಿದವಳ ಕೈಹಿಡಿದ ಶಂಕರ್ ನಾಗ್!

ವರ್ಜಿನ್ ಆಯಿಲ್ ಎಂದರೇನು? 
ಈಗ ನಾವು ಅಡುಗೆಗೆ, ಕೂದಲಿಗೆ ಬಳಸೋದು ಕೊಬ್ಬರಿ ಎಣ್ಣೆ. ತೆಂಗಿನ ಹಾಲಿನಿಂದ ತಯಾರಾಗೋದು ತೆಂಗಿನ ಎಣ್ಣೆ. ತೆಂಗಿನ ಕಾಯಿಯನ್ನು ತುರಿದು, ಸಂಸ್ಕರಿಸಿ ತೆಂಗಿನ ಹಾಲಿನ ಎಣ್ಣೆ ತಯಾರಿಸುತ್ತಾರೆ. ಇದರಲ್ಲಿ ಅಪಾರ ಔಷಧೀಯ ಗುಣಗಳಿವೆ. ಸೋರಿಯಾಸಿಸ್, ಎಕ್ಸಿಮಾದಂಥ ಸಮಸ್ಯೆಗೂ ಈ ಎಣ್ಣೆ ರಾಮಬಾಣ. ಹಾಸಿಗೆ ಹಿಡಿದ ರೋಗಿಗಳಿಗೆ ಮಲಗಿದ್ದಲ್ಲೇ ಮಲಗಿ ಮೈಯಲ್ಲಿ ಹುಣ್ಣುಗಳಾದರೆ ಈ ಎಣ್ಣೆ ಗುಣಪಡಿಸುತ್ತದೆ. 

ಕೋಕೋನೆಸ್ ಶುರುವಾಗಿದ್ದೇಗೆ?
ತೆಂಗಿನ ಎಣ್ಣೆ ಉತ್ಪಾದಿಸುವ ನಿಟ್ಟಿನಲ್ಲಿ ಕೋಕನಟ್ ಡೆವಲಪ್‌ಮೆಂಟ್ ಬೋರ್ಡ್‌ಗೆ ಹೋಗಿ ಅವರಿಂದ ಮಾಹಿತಿ ಪಡೆದುಕೊಂಡು, ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಕಾವ್ಯಾ ಅವರೇ ತಮ್ಮ ತೋಟದಲ್ಲಿ ಪ್ರಾಯೋಗಿಕವಾಗಿ ತೆಂಗಿನ ಎಣ್ಣೆ ಉತ್ಪಾದನೆ ಶುರು ಮಾಡಿದರು. ಈಗ ಕೋಕೋನೆಸ್‌ನ ದೊಡ್ಡ ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ. ತೆಂಗಿನ ಎಣ್ಣೆಯಲ್ಲದೇ ತೆಂಗಿನ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿದ್ದಾರೆ. 

ಅಪ್ಪ-ಅಮ್ಮನಂತೆ ನಟನೆ ಬಿಟ್ಟು, ತಮ್ಮದೇ ಉದ್ಯಮ ಆರಂಭಿಸಿದ ಕಾವ್ಯಾಗೆ ಶುಭವಾಗಲಿ.

'ಶಂಕರ್ ನಾಗ್ ಇಡ್ಲಿ ಮಾರ್ತಿದ್ದರು' ಅಂದಿನ ಸತ್ಯ ಬಿಚ್ಚಿಟ್ಟ ಜೈಜಗದೀಶ್
 

Latest Videos
Follow Us:
Download App:
  • android
  • ios