ಹಣ ಎಣಿಸಿಲ್ಲ ಅಂದ್ರೆ ಎಲ್ಲಾ ಕಳೆದುಕೊಂಡು ಬಿಟ್ಟೆ ಅನಿಸುತ್ತದೆ: ವಿನೋದ್ ರಾಜ್
ಲೀಲಾವತಿ ಅಮ್ಮ ಅವರಿಗೆ ಮೊಮ್ಮಗನ ಮದುವೆ ಮಾಡಬೇಕು ಅನ್ನೋ ಆಸೆ ಜಾಸ್ತಿ ಇತ್ತು ಎಂದು ಹೇಳಿದ ವಿನೋದ್ ರಾಜ್.
ಡಿಸೆಂಬರ್ 8ರಂದು ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಅಗಲಿದರು. ಅಮ್ಮ ಮಗ ಅಂದ್ರೆ ಲೀಲಾವತಿ ಮತ್ತು ವಿನೋದ್ ರಾಜ್ ಎನ್ನುತ್ತಿದ್ದವರು. ಈಗ ತಾಯಿಯ ನೆನಪಿನಲ್ಲಿ ವಿನೋದ್ ರಾಜ್ ದಿನ ಕಳೆಯುತ್ತಿದ್ದಾರೆ. ಲೀಲಾವತಿ ಅವರಿಗೆ ಮೊಮ್ಮಗನ ಮದುವೆ ಮಾಡಬೇಕು ಅನ್ನೋ ಆಸೆ ತುಂಬಾ ಇತ್ತಂತೆ. ಇದರ ಬಗ್ಗೆ ವಿನೋದ್ ರಾಜ್ ಮಾತುಗಳನ್ನು ಹಂಚಿಕೊಂಡಿದ್ದಾರೆ.
'ಮಗ ಐಟಿ ಕೆಲಸ ಮಾಡುತ್ತಿರುವುದು ಖುಷಿ ಇದೆ ಅದರ ಬಗ್ಗೆ ನಾವು ಏನು ಹೇಳುವುದು. ನಮಗೆ ಕೈಯಲ್ಲಿರುವ ಮೊಬೈಲ್ ಸರಿಯಾಗಿ ಗೊತ್ತಿಲ್ಲ. ಈಗ ಇರುವ ವಾಟ್ಸಪ್‌ನಲ್ಲಿ ನನ್ನ ಗಾಡಿ ಸ್ಪೇರ್ ಪಾರ್ಟ್ ಮತ್ತು ಮಾತ್ರೆಗಳ ಬಗ್ಗೆ ತಿಳಿದುಕೊಳ್ಳಲು ಕಳುಹಿಸಕೊಳ್ಳಲು ಇಟ್ಟುಕೊಂಡಿರುವುದು. ಇನ್ನು ಶೇರ್ ಇಟ್ ಗೊತ್ತಿಲ್ಲ ಹೀಟ್ ಇಟ್ ಗೊತ್ತಿಲ್ಲ. ಮೊನ್ನೆ ಬ್ಯಾಂಕ್‌ನಲ್ಲಿ ಕೇಳಿದರು ಟಾಪ್ 10 ಡೆಪಾಸಿಟರ್ ಲಿಸ್ಟ್‌ನಲ್ಲಿ ಅಮ್ಮನ ಹೆಸರಿದೆ ನಿಮ್ಮ ಇಮೇಲ್ ಐಡಿ ಕೊಡಿ ಎಂದು ...ಯಾವ ಫೀಮೇಲ್ ಐಡಿನೂ ಇಲ್ಲ ಹೋಗಯ್ಯ ನಮ್ಮ ಮಾನ ಮರ್ಯಾದೆ ಕಳೆಯ ಬೇಡಿ ಎಂದು ಹೊರ ಬಂದೆ. ಬ್ಯಾಂಕಿನಲ್ಲಿ ಇರುವವರು ಬಿದ್ದು ಬಿದ್ದು ನಗುತ್ತಾರೆ. ಟೆಕ್ನಾಲಜಿ ಬಗ್ಗೆ ನಮಗೆ ಗೊತ್ತಿಲ್ಲ. ಪ್ರಧಾನ ಮಂತ್ರಿಗಳು ನಮ್ಮಿಂದ ಬೇಸರ ಮಾಡಿಕೊಳ್ಳಬಹುದು ಏಕೆಂದರೆ ನಮ್ಮ ತಲೆಯಲ್ಲಿ ಸಾಫ್ಟ್‌ವೇರ್ ಅಪ್ಡೇಟ್ ಆಗಿಲ್ಲ. ನಂದು ಆಂಟಿಕ್ ಕಾಲ್ ಆಗಿಬಿಟ್ಟಿದೆ. ಎಲ್ಲರೂ ಗೂಗಲ್ ಪೇ ಫೋನ್ ಪೇ ಬಳಸುತ್ತಾರೆ ನಾನು ಮಾತ್ರ ಪರ್ಸ್ ಪೇ ಕ್ಯಾಶ್ ಪೇ ಮಾಡುತ್ತಿರುವೆ. ಓಪನ್ ಆಗಿ ಹೇಳುತ್ತೀನಿ ಟಿಡಿಎಸ್ 10% ಕಟ್ಟಿನೇ ನಾನು ಹಣ ತೆಗೆದುಕೊಂಡು ಬರುವುದು. ಕೈಯಲ್ಲಿ ಹಣ ಎಣಿಸಿ ಅಭ್ಯಾಸ ಆಗಿಬಿಟ್ಟಿದೆ ...ಎಣಿಸಿಲ್ಲ ಅಂದ್ರೆ ಎಲ್ಲಾ ಕಳೆದುಕೊಂಡು ಬಿಟ್ಟಿರುವೆ ಅನಿಸುತ್ತದೆ. ಫೋನ್ ಮೂಲಕ ಹಣ ಕಟ್ಟಿದರೆ ಕೈಯಲ್ಲಿ ಕಾಸು ಇಲ್ಲ ಅನಿಸುತ್ತದೆ' ಎಂದು ವಿನೋದ್ ರಾಜ್ ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
'ಯಾರೂ ಇಲ್ಲ, ನೀವೇ ಬಂಧುಬಳಗ..' ತಾಯಿಯ ನಿಧನದ ಬಳಿಕ ವಿನೋದ್ ರಾಜ್ ಕಣ್ಣೀರು
'ಲೀಲಾವತಿ ಅಮ್ಮ ಅವರಿಗೆ ಮೊಮ್ಮಗನ ಮದುವೆ ಮಾಡಬೇಕು ಅನ್ನೋ ಆಸೆ ಜಾಸ್ತಿ ಇತ್ತು. ಆದರೆ ಅವನ ವಿದ್ಯಾಭ್ಯಾಸಕ್ಕೆ ತಡೆದು ಮದುವೆ ಮಾಡುವ ಅಗತ್ಯ ಏನಿದೆ? ಒಳ್ಳೆ ವಿದ್ಯಾವಂತ ಆಗಬೇಕು ಗುಣವಂತ ಆಗಬೇಕು ಅನ್ನೋದು ನಮ್ಮ ಆಸೆ. ನನ್ನ ಮಗನಿಗೆ ಸದಾ ಹೇಳುತ್ತೀನಿ ಕರ್ನಾಟಕದಲ್ಲಿ ಇಷ್ಟು ಜನ ಇದ್ದಾರೆ ನಿನ್ನನ್ನು ನೋಡುತ್ತಿದ್ದಾರೆ. ಜೀವನದಲ್ಲಿ ನಾನು ಸ್ವಲ್ಪ ಎಡವಿರಬಹುದು ನೀನು ಒಂದು ಚೂರು ಎಡವಬಾರದು ಅವಾಗ ನೀನು ಸರಿಯಾದ ಮೊಮ್ಮಗನಾಗುತ್ತೀಯಾ. ತಂದೆಗೆ ಮಗ ಅನ್ನೋ ಯೋಚನೆಗಿಂತ ಅಜ್ಜಿ ಮೊಮ್ಮಗ ನೀನು ನಿನ್ನನ್ನು ಗಮನಿಸುತ್ತಿರುತ್ತಾರೆ. ಜೀನವದಲ್ಲಿ ಅಜ್ಜಿ ತರನೇ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳುತ್ತಿರುತ್ತೀನೆ' ಎಂದಿದ್ದಾರೆ ವಿನೋದ್ ರಾಜ್.
ಬೆಳ್ತಂಗಡಿ ಬೆಡಗಿಗೆ ಡಾ.ರಾಜ್ ಅಂದ್ರೆ ಬೆಟ್ಟದಷ್ಟು ಪ್ರೀತಿ ಅಭಿಮಾನ!