ಅದೇನೂ ವೈಯಕ್ತಿಕವಾಗಿ ಅವರಿಬ್ಬರ ಭೇಟಿ ಆಗಿರಲಿಲ್ಲ. ಯಾವುದೋ ಒಂದು ಫಂಕ್ಷನ್‌ನಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು. ಆದರೆ ಅ ಟೈಮ್‌ ಭಿನ್ನವಾಗಿತ್ತು, ರೋಚಕವಾಗಿತ್ತು. ಬಹುಶಃ ಇಬ್ಬರಲ್ಲೂ ಸ್ವಲ್ಪ ಅಳುಕು ಇತ್ತು.. ಆ ಬಗ್ಗೆ ವಿವರ ಇಲ್ಲಿದೆ ನೋಡಿ.. 

ಅದೊಂದು ದಿನ ಪತ್ರಕರ್ತೆ, ರವಿ ಬೆಳಗೆರೆ ಮಗಳು ಹಾಗೂ ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆಯವರು ಹಾಗೂ ನಟ ಶಿವರಾಜ್‌ಕುಮಾರ್ ಒಂದು ಕಡೆ ಭೇಟಿಯಾಗಿದ್ದಾರೆ. ಆ ಕ್ಷಣ ಹೇಗಿತ್ತು..? ಅದೇನೂ ವೈಯಕ್ತಿಕವಾಗಿ ಅವರಿಬ್ಬರ ಭೇಟಿ ಆಗಿರಲಿಲ್ಲ. ಯಾವುದೋ ಒಂದು ಫಂಕ್ಷನ್‌ನಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು. ಆದರೆ ಅ ಟೈಮ್‌ ಭಿನ್ನವಾಗಿತ್ತು, ರೋಚಕವಾಗಿತ್ತು. ಬಹುಶಃ ಇಬ್ಬರಲ್ಲೂ ಸ್ವಲ್ಪ ಅಳುಕು ಇತ್ತು.. ಆ ಬಗ್ಗೆ ವಿವರ ಇಲ್ಲಿದೆ ನೋಡಿ.. 

'ರಾಜ್ ಲೀಲಾ ವಿನೋದ್' ಪುಸ್ತಕದ ಬಗ್ಗೆ, ಅದರಲ್ಲಿರುವ ಕಂಟೆಂಟ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಈ ಪುಸ್ತಕದಲ್ಲಿ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆಯವರು ನಟಸಾರ್ವಭೌಮ ಡಾ ರಾಜ್‌ಕುಮಾರ್ ಹಾಗೂ ಹಿರಿಯ ನಟ ಡಾ ಲೀಲಾವತಿ ಅವರ ಸಂಬಂಧದ ಬಗ್ಗೆ ಬರೆದಿದ್ದರು. ಆ ಬಗ್ಗೆ ಕರುನಾಡಿನಲ್ಲಿ ಇರುವ ಸುದ್ದಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಆ ಪುಸ್ತಕ ಪ್ರಕಟಣೆ ಆಗಿ, ಅದರ ಬಗ್ಗೆ ಬಹಳಷ್ಟು ಚರ್ಚೆಗಳೂ ಆಗಿರುವ ಸಂಗತಿ ಈಗ ಹೊಸದೇನೂ ಅಲ್ಲ. ಆದರೆ, ಇಲ್ಲೊಂದು ರಹಸ್ಯವಾದ ಕುತೂಹಲಕಾರಿಯಾದ ಸಂಗತಿ ಒಂದಿದೆ. 

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ಅದೇನು ಅಂದ್ರೆ.. ರಾಜ್‌ ಲೀಲಾ ವಿನೋದ ಪುಸ್ತಕ ಬಿಡುಗಡೆ ಆದ ಬಳಿಕ ಸ್ವತಃ ಪತ್ರಕರ್ತೆ ಹಾಗೂ ಭಾವನಾ ಬೆಳಗೆರೆ (ರವಿ ಬೆಳಗೆರೆ ಮಗಳು ಹಾಘು ನಟ ಶ್ರೀನಗರ ಕಿಟ್ಟಿ ಪತ್ನಿ) ಅವರು ನೇರವಾಗಿ ನಟ ಶಿವರಾಜ್‌ಕುಮಾರ್ ಅವರನ್ನೂ ಭೇಟಿಯಾಗುವ ಸಂದರ್ಭ ಒದಗಿ ಬಂದಿತ್ತು. ಪುಸ್ತಕ ಬಿಡುಗಡೆಯಾಗಿ, ಅದು ಹಾಟ್ ಟಾಪಿಕ್ ಆಗಿದ್ದ ಟೈಮ್ ಅದು.. ಸೋ, ಸಹಜವಾಗಿಯೇ ಭಾವನಾ ಅವರ ಮನದಲ್ಲಿ ಒಂದು ಪ್ರಶ್ನೆ, ಗೊಂದಲ ಇದ್ದೇ ಇತ್ತು. ಆ ಬಗ್ಗೆ ಭಾವನಾ ಬೆಳಗೆರೆ ಅವರೇ ಒಮ್ಮೆ ಹೀಗೆ ಹೇಳಿದ್ದಾರೆ, ನೋಡಿ.. 

'ಎಲ್ಲಿ ಏನು ಅಂದ್ಕೋತಾರೋ, ಈ ಪುಸ್ತಕ ಬಿಡುಗಡೆ ಆದ್ಮೇಲೆ ಭೇಟಿಯಾಗ್ತಾ ಇದೀವಿ, ಅದೇನು ಮಾತಾಡ್ಬಿಡ್ತಾರೋ ಶಿವಣ್ಣ ಎಂಬ ಯೋಚನೆಯಲ್ಲಿ ಇದ್ರಂತೆ ಭಾವನಾ ಬೆಳಗೆರೆ. ಆದರೆ, ಭೇಟಿಯಾದ ಶಿವಣ್ಣ ಅವರು 'ನೋಡಿ, ನೀವು ಶ್ರೀನಗರ ಕಿಟ್ಟಿ ಅವ್ರ ವೈಫ್.. ನಂಗೆ ನೀವು ಅವ್ರ ಮಗಳು, ಇವ್ರ ಮಗಳು, ರವಿ ಬೆಳಗೆರೆಯವರ ಮಗಳು ಅಥವಾ ಮೊಮ್ಮಗಳೂ ಅನ್ನೋದು ಮ್ಯಾಟರ್ ಅಲ್ಲ. ಆದ್ರೆ, ಹೇಗೆ ನೀವು ನಿಮ್ಮ ಗಂಡನ ವೃತ್ತಿ ಬೇರೆ, ನಮ್ಮ ತಂದೆಯವರ ವೃತ್ತಿ ಬೇರೆ ಅಂತಿರೋ, ಅದೇ ರೀತಿಯಾಗಿ ನಾನೂ ಕೂಡ ಅದನ್ನು ಪರಿಗಣಿಸ್ತೀನಿ.

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

ಆರಾಮ್ ಆಗಿ ಇರಿ.. ತೊಂದ್ರೆ ತಗೋಬೇಡಿ.. ನಮ್ಮ ಬಾಂಧವ್ಯ ಮುಂದೆ ಕೂಡ ಹೀಗೆ ಇರುತ್ತೆ.. ಅಂತ ಹೇಳಿದ್ರಂತೆ ಶಿವರಾಜ್‌ಕುಮಾರ್. ಆ ವಿಷಯದಲ್ಲಿ ನಟ ಹಾಗೂ ಡಾ ರಾಜ್‌ಕುಮಾರ್ ಅವ್ರ ಮಗನಾಗಿರುವ ಶಿವಣ್ಣರ ಕೂಲ್ ಆಟಿಟ್ಯೂಡ್ ನೋಡಿ ಭಾವನಾ ಬೆಳಗೆರೆಯವರು ಅಚ್ಚರಿಗೆ ಒಳಗಾದರಂತೆ. 

ಎಲ್ಲರಿಗೂ ತಿಳಿದಿರುವಂತೆ, ರವಿ ಬೆಳಗೆರೆಯವರು ಈ ನಾಡು ಕಂಡ ಶ್ರೇಷ್ಠ ಬರಹಗಾರರು. ಇನ್ನು ಡಾ ರಾಜ್‌ಕುಮಾರ್ ಅವರು ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದ ಹಾಗೂ ಮೇರುನಟ. ಒಬ್ಬರ ಬಗ್ಗೆ ಇನ್ನೊಬ್ಬರು ಬರೆದಾಗ ಸಹಜವಾಗಿ ಅದರಲ್ಲಿ ಸತ್ಯ-ಸುಳ್ಳು ಎನ್ನುವ ಚರ್ಚೆಗಿಂತ ಮಾತುಕತೆಗಳಂತೂ ನಡೆದಿರುತ್ತೆ.

Shilpa: 'ಜನುಮದ ಜೋಡಿ'ಯ ಶಿಲ್ಪಾ ನೆನಪಿದ್ಯಾ? ಈಗವರು ಅಲ್ಲಿದ್ದಾರೆ, ಆ ಕೆಲಸ ಮಾಡ್ತಿದ್ದಾರೆ!

ಆದರೆ, ಈ ಇಬ್ಬರು, ಅಂದರೆ.. ಡಾ ರಾಜ್‌ಕುಮಾರ್ ಮಗ ಶಿವರಾಜ್‌ಕುಮಾರ್ ಹಾಗೂ ರವಿ ಬೆಳಗೆರೆಯವರ ಮಗಳು ಭಾವನಾ ಇಬ್ಬರೂ ಒಂದು ಕಡೆ ಭೇಟಿಯಾದಾಗ, ಸಹಜವಾಗಿಯೂ ಅವರಿಬ್ಬರಲ್ಲೂ ಒಂದು ಅಳುಕು ಇದ್ದೇ ಇರುತ್ತೆ. ಅದನ್ನು ಭಾವನಾ ಬೆಳಗೆರೆಯವರು ಹಂಚಿಕೊಂಡಿದ್ದಾರೆ.