ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ‌ ವಾಣಿಜ್ಯ ಮಂಡಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದಾರೆ. ಈ ವೇಳೆ ಮನವಿ ಪತ್ರದ ಮುಖೇನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಡಿ.ಕೆ.ಶಿವಕುಮಾರ್‌ ಆಹ್ವಾನಿಸಿದರು.

ಬೆಂಗಳೂರು (ಡಿ.30): ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ‌ ವಾಣಿಜ್ಯ ಮಂಡಳಿಗೆ (Karnataka Film Chamber Of Commerce) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಭೇಟಿ ನೀಡಿದ್ದಾರೆ. ಈ ವೇಳೆ ಮನವಿ ಪತ್ರದ ಮುಖೇನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಡಿ.ಕೆ.ಶಿವಕುಮಾರ್‌ ಆಹ್ವಾನಿಸಿದರು. ಬಳಿಕ ಮಾತನಾಡಿದ ಅವರು, ನಾನಿವತ್ತು ಬಂದ್ ಉದ್ದೇಶ ಹಾಗೂ ರಾಜ್ಯದ ಉದ್ದೇಶಕ್ಕೊಸ್ಕರ ಬಂದಿದ್ದೇನೆ ಹೊರತು ರಾಜಕಾರಣ ನನಗೆ ಮುಖ್ಯ ಅಲ್ಲ ಎಂದಿದ್ದಾರೆ. ಎಲ್ಲಾ ಪಕ್ಷಗಳೂ ಹೋರಾಟ ಮಾಡಲಿ, ನಾನೀಗ ಹೋರಾಟ ಮಾಡಲು ಸಿದ್ಧನಿದ್ದೇನೆ.

ಕನ್ನಡದ ಬಾವುಟ (Karnataka Flag) ಇಟ್ಟು ಪಾದ ಯಾತ್ರೆ ಮಾಡಿ ಹೋರಾಟ ಮಾಡಬೇಕಿದ್ದು, ಈಗ ಅಪ್ರೂವಲ್ ಆಗಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗೊತ್ತಿದೆ. ಎಲ್ಲದರಲ್ಲೂ ರಾಜಕಾರಣ ಮಾತನಾಡುತ್ತಾರೆ. ಅದಕ್ಕೆಲ್ಲ ನಾನು ತಲೆ ಕೆಡಿಸ್ಕೊಳ್ಳೋಕೆ‌ ಹೋಗಲ್ಲ. ವಾಣಿಜ್ಯ ಮಂಡಳಿ ನೆಲ ಜಲದ ವಿಚಾರ ಬಂದಾಗ ವಾಣಿಜ್ಯ ಮಂಡಳಿಯವರೇ ಸಹಕಾರ ನೀಡಿದ್ದಿರೀ. ಹತ್ತು ದಿನ ಮೇಕೆದಾಟುಗಾಗಿ ಪಾದಯಾತ್ರೆ ಮುಖಾಂತರ ಹೋರಾಟ ಮಾಡ್ತಿದ್ದೇವೆ. ರಿಜಿಸ್ಟ್ರೇಶನ್ ಕೂಡ ಮಾಡ್ಕೊಳ್ಳೊಕೆ ಅವಕಾಶ ಇದೆ ಎಂದು ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Karnataka Politics: ನನ್ನ ವಿರುದ್ಧ ಬಿಜೆಪಿ, ಜೆಡಿಎಸ್‌ ಷಡ್ಯಂತ್ರ: ಡಿ.ಕೆ. ಶಿವಕುಮಾರ್‌

ಮೇಕೇದಾಟು ಯೋಜನೆಗೆ ಕನ್ನಡ ಚಿತ್ರರಂಗದ ಬೆಂಬಲ ನೀಡಲಾಗುತ್ತೆ ಎಂದು ಸಾರಾ ಗೋವಿಂದು (Sa Ra Govindu) ತಿಳಿಸಿದ್ದಾರೆ. ಈ ವೇಳೆ ವಾಣಿಜ್ಯ ಮಂಡಳಿಗೆ ಬಂದ ಮೇಲೆ ಎಲ್ಲ‌ ಕಲಾವಿದರು ಹೋರಾಟಕ್ಕೆ ಬರ್ತಾರೆ. ವಾಣಿಜ್ಯ ಮಂಡಳಿ ಒಂದು ಕೋರ್ಟ್ ಇದ್ದ ಹಾಗೆ, ಸುದೀಪ್ (Sudeep), ಶಿವಣ್ಣ (ShivaRajkumar), ಯಶ್ (Yash) ಸೇರಿದಂತೆ ಎಲ್ಲ ಕಲಾವಿದರಿಗೂ ಮನವಿ ಮಾಡುತ್ತೇನೆ. ಎಲ್ಲರೂ ಬಂದು ಬೆಂಬಲ ವ್ಯಕ್ತಪಡಿಸಿ. ಇದು ನಿಮ್ಮ ಧರ್ಮ, ನಾಡಿನ ಒಳಿತಿಗಾಗಿ ಇವರೆಲ್ಲಾ ಬೆಂಬಲ ಕೊಟ್ಟುಕೊಂಡು ಬಂದಿದ್ದಾರೆ. ಅವರೆಲ್ಲಾ ಹೋರಾಟದಲ್ಲಿ ಭಾಗಿ ಆಗಿದ್ದಾರೆ ಎಂಬ ನಂಬಿಕೆ ಇದೆ. ನಾನು ಕೂಡ ಎಲ್ಲರಿಗೂ ಕರೆ ಮಾಡಿ ಹೋರಾಟಕ್ಕೆ ಕರೆಯುತ್ತೇನೆ ಎಂದು ಸಾರಾ ಗೋವಿಂದು ಹೇಳಿದ್ದಾರೆ.

ಇನ್ನು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ ಮೇಕೆದಾಟಿನಿಂದ ಬೆಂಗಳೂರಿಗೆ (Bengaluru) ಪಾದಯಾತ್ರೆ ಹಮ್ಮಿಕೊಂಡಿದ್ದು, ಇದೊಂದು ಪಕ್ಷಾತೀತ ಹೋರಾಟವಾಗಿದೆ. ನಾಯಕತ್ವ ಮಾತ್ರ ಕಾಂಗ್ರೆಸ್‌ನದ್ದಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ನಡೆಸುತ್ತಿರುವ ಪಾದಯಾತ್ರೆ ಪಕ್ಷಾತೀತ ಹೋರಾಟವಾಗಿದ್ದು, ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು (HD Kumaraswamy) ಪಾಲ್ಗೊಳ್ಳಬಹುದು ಎಂದು ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ.

Karnataka Bandh: ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್, ಸಾರಾ ಗೋವಿಂದು ಜೀಪ್ ರ್ಯಾಲಿ

ವರುಣಾ ನಾಲಾ ಚಳವಳಿಯ ಚಡ್ಡಿ ಮೆರವಣಿಗೆ ಮಾದರಿಯಲ್ಲೇ ಇದೊಂದು ಐತಿಹಾಸಿಕ ಹೋರಾಟ. ಯೋಜನೆ ಜಾರಿ ವಿಷಯದಲ್ಲಿ ಅದೇ ಕಿಚ್ಚನ್ನು ಬಿಜೆಪಿ ಸರ್ಕಾರದ (BJP Government) ವಿರುದ್ಧ ತೋರ್ಪಡಿಸಬೇಕು. ಸ್ವಾತಂತ್ರ್ಯ ಹೋರಾಟದಂತೆ ಮೇಕೆದಾಟು ಹೋರಾಟದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ನೀಡಲಾಗುವುದು. ಹೋರಾಟದಲ್ಲಿ ಪಾಲ್ಗೊಂಡವರೆಲ್ಲರೂ ಇತಿಹಾಸ ಸೇರುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಮೇಕೆದಾಟು ಪ್ರದೇಶದಿಂದ ಫ್ರೀಡಂಪಾರ್ಕ್​ವರೆಗೆ ಪಾದಯಾತ್ರೆ ನಡೆಯಲಿದೆ.