Asianet Suvarna News Asianet Suvarna News

ಕೋಟಿಗೊಬ್ಬ 3' ಬಿಡುಗಡೆಗೆ ತೊಂದರೆ: ದೂರು ದಾಖಲಿಸಿದ ನಿರ್ಮಾಪಕ ಸೂರಪ್ಪ ಬಾಬು

-ಗುರುವಾರ ಬಿಡುಗಡೆಯಾಗಬೇಕಿದ್ದ ಚಿತ್ರ ಶುಕ್ರವಾರ ರಿಲೀಸ್
-ವಿತರಕರ ವಿರುದ್ಧ ಕಾನೂನು ಕ್ರಮ
-ಸಿನಿಮಾ ಪ್ರದರ್ಶಕರಿಂದ  ಕಲೆಕ್ಷನ್‌ನಲ್ಲಿ ಮೋಸ

Kotigobba 3 producer Soorappa babu files complaint against distributors
Author
Bangalore, First Published Oct 16, 2021, 11:18 AM IST

ಬೆಂಗಳೂರು (ಅ.16): ಸ್ಯಾಂಡಲ್‌ವುಡ್ (Sandalwood) ಬಾದ್‌ಷಾ ಕಿಚ್ಚ ಸುದೀಪ (Kiccha Sudeep) ಅಭಿನಯದ 'ಕೋಟಿಗೊಬ್ಬ 3' (Kottigobba 3) ಚಿತ್ರ ದಸರಾ ಹಬ್ಬದ ಪ್ರಯುಕ್ತ ಗುರುವಾರ ತೆರೆ ಮೇಲೆ ಬರಲು ಸಜ್ಜಾಗಿತ್ತು. ಆದರೆ ಕಾರಣಾಂತರಗಳಿಂದ ಶುಕ್ರವಾರ ಬಿಡುಗಡೆಯಾಗಿ, ಎಲ್ಲ ಚಿತ್ರಮಂದಿರಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು (Soorappa Babu) ಚಿತ್ರ ಬಿಡುಗಡೆಗೆ ತೊಂದರೆ‌ ಕೊಟ್ಟವರ ಮೇಲೆ ಪ್ರಕರಣವನ್ನು (Case) ದಾಖಲಿಸಿದ್ದಾರೆ. ಹೌದು! 'ಕೋಟಿಗೊಬ್ಬ 3' ಚಿತ್ರ ರಾಜಾದ್ಯಂತ ಗುರುವಾರ ಬಿಡುಗಡೆಯಾಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನಿರ್ಮಾಪಕ ಸೂರಪ್ಪ ಬಾಬು ಹೇಳಿಕೆಯೊಂದನ್ನು ನೀಡಿದ್ದಾರೆ. 

"

ಚಿತ್ರ ವಿಮರ್ಶೆ: ಕೋಟಿಗೊಬ್ಬ 3

'ಕೋಟಿಗೊಬ್ಬ 3' ಚಿತ್ರದ ವಿತರಣೆ ಹಕ್ಕನ್ನು ಮೈಸೂರು (Mysore), ಮಂಡ್ಯ (Mandya), ಹಾಸನ (Hassan), ಕೊಡಗು (Kodagu), ಚಾಮರಾಜನಗರ (Chamarajanagara)ದಲ್ಲಿ ಮೆಹಲ್ ಫಿಲ್ಮ್ಸ್ ಮಾಲೀಕರಾದ ಗೌತಮ್ ಚಂದ್ ಹಾಗೂ ಚಿತ್ರದುರ್ಗ (Chitradurga), ದಾವಣಗೆರೆ (Davanagere), ಬಳ್ಳಾರಿ (Bellary) ವಿತರಕಣೆ ಹಕ್ಕನ್ನು ಎಂ.ಡಿ. ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲೀಕರಾದ ಕುಮಾರ್ ಅವರು ಪಡೆದಿದ್ದರು. ವಿತರಣೆ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಹಣವನ್ನು ಮಾತ್ರ ನಾನು ಪಡೆದಿದ್ದೆ. ಚಿತ್ರ ಬಿಡುಗಡೆಯ ಒಂದು ದಿನ ಮೊದಲು 13-10-2021 ರಂದು ಚಿತ್ರದ ನಿರ್ಮಾಪಕನಾದ ನನಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿತ್ತು, ಆದರೆ ಚಿತ್ರದುರ್ಗ, ದಾವಣಗೆರೆ, ಹಾಗೂ ಬಳ್ಳಾರಿ ವಿತರಣೆ ಹಕ್ಕು ಪಡೆದ ಎಂ.ಡಿ ಜಾಫರ್ (M.D.Jafer) ಮತ್ತು ಕುಮಾರ್ ಫಿಲ್ಮ್ ಮಾಲೀಕ ಕುಮಾರ್ (Kumar) ಅವರು ಕೊನೆ ಕ್ಷಣದವರೆಗೂ ಹಣ ಕೊಡದೇ ನಮ್ಮ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಿದ್ದು, ಫೋನ್ ಕರೆ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಕೊಡದೇ ತೊಂದರೆ ಮಾಡಿದ್ದಾರೆ. 

Kotigobba 3 producer Soorappa babu files complaint against distributors

ಇದರಿಂದ ನಮ್ಮ ಚಿತ್ರವನ್ನು ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8 ರಿಂದ 10 ಕೋಟಿ ರೂ. ನಷ್ಟವಾಯಿತಲ್ಲದೇ, ಮಾರನೇ ದಿನ ಚಿತ್ರವನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಒದಗಿ ಬಂತು. ಇನ್ನು ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೇ ವಂಚಿಸಿದ್ದು, ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಮುಖ್ಯವಾಗಿ ನನಗೆ ಹಾಗೂ ಚಿತ್ರದ ನಟ ಸುದೀಪ್ ಅವರಿಗೆ ಅಪಖ್ಯಾತಿ ತರಲು ಈ ವಿತರಕರು ಸಂಚು ಮಾಡಿರುವುದರಿಂದ ವಿತರಕರ ಮೇಲೆ ಮಾನನಷ್ಟ ಮೊಕದ್ದಮೆಯೂ ‌ಸೇರಿದಂತೆ ಕಾನೂನು ಕ್ರಮ ಜರುಗಿಸುತ್ತೇವೆ. ಎಂದು ಸೂರಪ್ಪ ಬಾಬು ಹೇಳಿದ್ದಾರೆ.

ಭೂಮಿಕ ಥಿಯೇಟರ್‌; ಕೋಟಿಗೊಬ್ಬ 3 ಚಿತ್ರದ 7 ಶೋ ಇಲ್ಲವೆಂದು ಅಭಿಮಾನಿಗಳ ಆಕ್ರೋಶ!
 
ಕೆಲ ಸಿನಿಮಾ ಪ್ರದರ್ಶಕರಿಂದ  ಕಲೆಕ್ಷನ್‌ನಲ್ಲಿ ಮೋಸ
ಕಿಚ್ಚ ಸುದೀಪ ಅಭಿನಯದ 'ಕೋಟಿಗೊಬ್ಬ 3' ಚಿತ್ರ ರಾಜಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹೊತ್ತಲೇ ಕೆಲ ಸಿನಿಮಾ ಪ್ರದರ್ಶಕರಿಂದ ಚಿತ್ರದ ಕಲೆಕ್ಷನಲ್ಲಿ ಮೋಸವಾಗಿದೆ (Cheating) ಎಂದು ನಿರ್ಮಾಪಕ ಸೂರಪ್ಪ ಬಾಬು ದೂರಿದ್ದಾರೆ. 'ಕೋಟಿಗೊಬ್ಬ 3' ಚಿತ್ರ ಜಗಳೂರಿನ 'ಭಾರತ್' (Bharat) ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ಚಿತ್ರಮಂದಿರದ ಮಾಲೀಕರು ಪ್ರತಿ ಪ್ರದರ್ಶನದ ಸುಳ್ಳು ಲೆಕ್ಕ ಕೊಟ್ಟಿದ್ದಾರೆ. ನಿನ್ನೆ (ಶುಕ್ರವಾರ) ಬೆಳಗಿನ ಪ್ರದರ್ಶನ ಮತ್ತು ಮಧ್ಯಾಹ್ನದ ಪ್ರದರ್ಶನ ಸಮಯದಲ್ಲಿ 200 ಸೀಟಿನ ಸುಳ್ಳು ಲೆಕ್ಕ ಕೊಟ್ಟು ನಮಗೆ ಮೋಸ ಮಾಡಿದ್ದಾರೆ. ನಾವು ರಾಜ್ಯದ ಪ್ರತಿ ಚಿತ್ರಮಂದಿರದಲ್ಲೂ ತಮ್ಮ ಪ್ರತಿನಿಧಿಗಳನ್ನು, ಪರೀವೀಕ್ಷಕರನ್ನು ನೇಮಿಸಿದ್ದು, ಪರೀಕ್ಷಿಸುತ್ತಿರುವಾಗ ಮೋಸದ ಬಗ್ಗೆ ತಿಳಿದು ಬಂದಿದೆ. ನಮಗೆ 200 ಸೀಟಿನ ಲೆಕ್ಕ ಕೊಟ್ಟು, 300 ಜನರಿಗೆ ಪ್ರತಿ ಪ್ರದರ್ಶನದಲ್ಲಿ ಚಿತ್ರಮಂದಿರದವರು ಸಿನಿಮಾ ತೋರಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದು, ಕಾನೂನು ಕ್ರಮ (Legal action) ಕೈಗೊಳ್ಳುವುದಾಗಿ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

"

Follow Us:
Download App:
  • android
  • ios