ಯಜಮಾನ, ಅಸುರ ಸಿನಿಮಾ ಟಿಕೆಟ್ ಬ್ಲಾಕ್‌ನಲ್ಲಿ ಮಾರಿದ್ದೆ: ರವಿ ಡಿ ಚನ್ನಣ್ಣನವರ್
- ಡಾರ್ಲಿಂಗ್ ಕೃಷ್ಣ ಚಿತ್ರಕ್ಕೆ ದಿಲ್‌ಪಸಂದ್ ನಾಮಕರಣ
- ಟೈಮಿಂಗ್‌ನಿಂದ ನಗೆಯುಕ್ಕಿಸುವ ಸಿನಿಮಾ ಇದು: ಡಾರ್ಲಿಂಗ್ ಕೃಷ್ಣ
‘ದಿಲ್‌ಪಸಂದ್ ರೊಮ್ಯಾಂಟಿಕ್ ಡ್ರಾಮಾ ಆದರೂ ಚಿತ್ರದ ಕತೆ ಕೇಳಿದಾಗ ಮುಖದ ತುಂಬ ನಗು ಆವರಿಸಿತ್ತು’ ಅಂದರು ಡಾರ್ಲಿಂಗ್ ಕೃಷ್ಣ. ಶಿವ ತೇಜಸ್ ನಿರ್ದೇಶನದ ದಿಲ್‌ಪಸಂದ್ ಚಿತ್ರದ ಟೈಟಲ್ ಲಾಂಚ್ ಪ್ರಯುಕ್ತ ಸುದ್ದಿಗೋಷ್ಠಿ ಕರೆಯಲಾಗಿತ್ತು.
‘ಇದು ಟೈಮಿಂಗ್‌ನಿಂದ ನಗೆಯುಕ್ಕಿಸುವ ಚಿತ್ರ. ಈ ಇಂಟರೆಸ್ಟಿಂಗ್ ಕತೆಯನ್ನು ಚಿತ್ರಕ್ಕಿಳಿಸುವುದು ಚಾಲೆಂಜ್. ರವಿ ಚನ್ನಣ್ಣನವರ್ ಪೊಲೀಸ್ ವೃತ್ತಿಯಲ್ಲಿಲ್ಲದಿದ್ದರೆ ಕಲಾವಿದರಾಗುತ್ತಿದ್ದರು. ನಾನು ಪೊಲೀಸ್ ಆಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದರೆ ನಂಗೆ ಓದುವಾಗ ನಿದ್ದೆ ಬರ್ತಿತ್ತು. ನಟನೆ ಸುಲಭ ಅಂತ ಈ ಫೀಲ್ಡ್ ಅನ್ನು ಆರಿಸಿಕೊಂಡೆ. ಸಿನಿಮಾ, ಲವ್ ಅಂತ ಓಡಾಡ್ಕೊಂಡಿದ್ದೆ. ಮಿಲನಾ ಬಂದ ಬಳಿಕ ಬದುಕೇ ಬದಲಾಗಿ ಹೋಯ್ತು’ ಎಂದು ನಗೆಯುಕ್ಕಿಸಿದರು.
ಡಾರ್ಲಿಂಗ್ ಕೃಷ್ಣ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ
ನಿರ್ದೇಶಕ ಶಿವ ತೇಜಸ್, ‘ಸಿನಿಮಾ ದಿಲ್‌ಪಸಂದ್‌ನಂತೆ ಸ್ವೀಟಾಗಿದೆ. ಲಾಕ್‌ಡೌನ್‌ನಲ್ಲಿ ಈ ಕತೆ ತಲೆಗೆ ಬಂದಾಗ, ಟೈಟಲ್ಲೂ ಹೊಳೆದಿತ್ತು. ಅದೇ ಈಗ ಫೈನಲ್ ಆಗಿದೆ’ ಎಂದರು. ನಾಯಕಿಯರಾದ ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ, ಡಿಓಪಿ ಶೇಖರಚಂದ್ರ ಇದ್ದರು. ನಿರ್ಮಾಪಕ ಸುಮನ್ ಕ್ರಾಂತಿ, ‘ಪ್ರಜ್ವಲ್ ದೇವರಾಜ್ ಜೊತೆ ಹೊಸ ಸಿನಿಮಾದ ಕೆಲಸದಲ್ಲಿದ್ದೆ. ಈ ಕತೆ ಕೇಳಿ ಆ ಕೆಲಸಕ್ಕೆ ಬ್ರೇಕ್ ಕೊಟ್ಟು ಈ ಪ್ರಾಜೆಕ್ಟ್ ಅನ್ನೇ ಮೊದಲು ಕೈಗೆತ್ತಿಕೊಂಡೆ’ ಅಂದರು.
ಬ್ಲಾಕ್‌ನಲ್ಲಿ ಟಿಕೆಟ್ ಮಾರುತ್ತಿದ್ದೆ: ರವಿ ಚನ್ನಣ್ಣನವರ್
‘ದಿಲ್‌ಪಸಂದ್’ ಚಿತ್ರದ ಟೈಟಲ್ ಲಾಂಚ್ ಮಾಡಿ ಮಾತನಾಡಿದ ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ‘ಪಿಯುಸಿ ಓದುತ್ತಿದ್ದ ಸಮಯ ಗದಗದಲ್ಲಿ ಬ್ಲಾ ್ಯಕ್‌ನಲ್ಲಿ ಸಿನಿಮಾ ಟಿಕೆಟ್ ಮಾರುತ್ತಿದ್ದೆ. ಯಜಮಾನ, ಅಸುರ, ಅಂಜಲಿ ಗೀತಾಂಜಲಿ ಮೊದಲಾದ ಸಿನಿಮಾಗಳ ಟಿಕೇಟನ್ನು ಬ್ಲಾ ್ಯಕ್‌ನಲ್ಲಿ ಮಾರಿದ್ದೀನಿ. ಇಂದಿಗೂ ಸಿನಿಮಾದ ಬಗ್ಗೆ ಆಸಕ್ತಿ ಇದೆ. ಹೆಂಡತಿಯ ಒತ್ತಾಯಕ್ಕೆ ಡಾರ್ಲಿಂಗ್ ಕೃಷ್ಣ, ಮಿಲನಾ ನಟನೆಯ ‘ಲವ್ ಮಾಕ್‌ಟೇಲ್’ ನೋಡಿದ್ದೆ. ಚಿತ್ರ ಬಹಳ ಚೆನ್ನಾಗಿದೆ. ಈ ಅದೇ ಥರ ಗೆಲ್ಲಲಿ’ ಎಂದು ಹಾರೈಸಿದರು.