‘ಜಿಂಕೆ ಮರೀನಾ, ಜಿಂಕೆ ಮರೀನಾ.. ಜಿಂಕೆ ಜಿಂಕೆ ಮರೀನಾ..’ ಅನ್ನೋ ಹಾಡು ಹತ್ತು ಹನ್ನೆರಡು ವರ್ಷಗಳ ಕೆಳಗೆ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು. ನಿರೂಪಕಿಯಾಗಿದ್ದ ಸಾಮಾನ್ಯ ಹುಡುಗಿ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಈ ಹಾಡಿನ ಮೂಲಕವೇ ಸಖತ್ ಫೇಮಸ್ ಆಗೋದ್ಲು. ಈ ಸಿನಿಮಾಕ್ಕೂ ಮೊದಲು ಈಕೆ ಶ್ವೇತಾ. ಆರಂಭದಲ್ಲಿ ಉದಯ ಟಿವಿಯಲ್ಲಿ ನಿರೂಪಣೆ ಮಾಡುತ್ತಿದ್ದವಳು, ಆ ಬಳಿಕ ಸುವರ್ಣ ಮನರಂಜನಾ ಚಾನೆಲ್ ನಲ್ಲಿ ನಿರೂಪಣೆಗೆ ಮುಂದಾದ್ಲು.

ಇದೇ ಟೈಮ್ ನಲ್ಲಿ ಬಂದಿದ್ದು ಸಿನಿಮಾ ಆಫರ್. ಅದು ’ನಂದ ಲವ್ಸ್ ನಂದಿತಾ’. ಆಗಿನ್ನೂ ಯೋಗಿ ‘ದುನಿಯಾ’ ಸಿನಿಮಾದ ಲೂಸ್ ಮಾದನಾಗಿ ಅಂದರೆ ಒಬ್ಬ ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ಅಷ್ಟೇ ಗುರುತಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಅಭಿನಯ ಜಗತ್ತಿಗೇ ಗೊತ್ತಾಯ್ತು. ಅವರು ಪೂರ್ಣ ಪ್ರಮಾಣದ ನಾಯಕನಾಗಿ ಗುರುತಿಸಿಕೊಂಡರು.

ಪರ್ಪಲ್ ಸೀರೆಯುಟ್ಟು ಸಪ್ಪೆ ಮೋರೆ ಹಾಕಿದ ಡಿಂಪಲ್ ಕ್ವೀನ್ ...

ಜೊತೆಗೆ ಅಲ್ಲಿಯವರೆಗೆ ಶ್ವೇತಾ, ಆಂಕರ್ ಶ್ವೇತಾ ಆಗಿ ಗುರುತಿಸಿಕೊಂಡಾಕೆ ಈ ಸಿನಿಮಾ ಮೂಲಕ ನಂದಿತಾ ಆದ್ರು. ಆಮೇಲೆ ತಮ್ಮ ಹೆಸರನ್ನು ನಂದಿತಾ ಅಂತ ಚೇಂಜ್ ಮಾಡ್ಕೊಂಡ್ರು. ನಂದ ನಂದಿತಾ ಆಗಿ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಅರಸತೊಡಗಿದರು.

ಇಷ್ಟೊಂದು ಪಾಪ್ಯುಲರ್ ಸಿನಿಮಾ ಕೊಟ್ರೂ, ಈಕೆಯ ಹಾಡು ಸಖತ್ ಫೇಮಸ್ ಆದರೂ ಕನ್ನಡದಲ್ಲಿ ಸಿನಿಮಾ ಅವಕಾಶ ಸಿಗಲಿಲ್ಲ. ಹೀರೋಯಿನ್ ಆಗಿ ಗುರುತಿಸಿಕೊಂಡ ಮೇಲೂ ಈಕೆ ನಿರೂಪಣೆಯನ್ನೂ ಮಾಡಬೇಕಾಯ್ತು. ಹಾಗಂತ ಹೆಚ್ಚೇನೂ ನಿರೀಕ್ಷೆಗಳಿಲ್ಲ, ಆದ್ರೆ ಸಖತ್ ಜಾಣೆಯಾದ ಈ ನಟಿ ಅಂಥಾ ನಿರಾಸೆಗೇನೂ ಬೀಳಲಿಲ್ಲ. ಆದರೆ ಅವಕಾಶಕ್ಕೆ ಹುಡುಕಾಟ ಮುಂದುವರಿದಿತ್ತು.

ಅತಿ ಹೆಚ್ಚು ಸದ್ದು ಮಾಡುತ್ತಿರುವ 5 ಟೀಸರ್‌ಗಳು; ಯಾವುದಿದೆ ಮೊದಲ ಸ್ಥಾನದಲ್ಲಿ? ...

ನಾಲ್ಕು ವರ್ಷ ಹೀಗೇ ಕಳೆಯಿತು. ಒಂದು ಹಂತದಲ್ಲಿ ಈಕೆ ತಮಿಳು, ತೆಲುಗು ಚಿತ್ರಗಳಲ್ಲಿ ಅವಕಾಶಗಳಿಗಾಗಿ ಹುಡುಕಾಟ ಶುರು ಮಾಡಿದರು. ಆ ಟೈಮ್ ನಲ್ಲಿ ಈಕೆಯ ಲಕ್ ಕಚ್ಕೊಂಡ್ಬಿಡ್ತು ನೋಡಿ, ತಮಿಳಿನಲ್ಲಿ ’ಅಟ್ಟಕತ್ತಿ’ ಅನ್ನೋ ಸಿನಿಮಾದಲ್ಲಿ ನಾಯಕಿಯಾಗೋ ಅವಕಾಶ ಸಿಕ್ಕಿತು.

ತಮಿಳು ಬಾಕ್ಸಾಫೀಸ್ ನಲ್ಲಿ ಈ ಸಿನಿಮಾ ಒಂದಿಷ್ಟು ದುಡ್ಡು ಮಾಡಿತು. ಯಶಸ್ವಿಯೂ ಆಯಿತು. ಮುಂದಿನ ವರ್ಷವೇ ಈಕೆಯ ಕೖಯಲ್ಲಿ ಮೂರು ಸಿನಿಮಾ. ‘ಎಥಿರ್ ನೀಚಲ್’ ಅನ್ನೋ ಚಿತ್ರದ ಜೊತೆಗೆ ವಿಜಯ್ ಸೇತುಪತಿ ಹೀರೋ ಆಗಿರುವ ‘ಇದರ್ ಕೂತನೆ ಆಸೆಪಟ್ಟಿ ಬಾಲ ಕುಮಾರ’ ಅನ್ನೋ ಸಿನಿಮಾ. ಈ ಚಿತ್ರದಲ್ಲಿ ವಿಜಯ್ ಸೇತುಪಥಿಯ ಕ್ರಶ್ ಪಾತ್ರ ನಂದಿತಾಗೆ. ತನ್ನ ಚುರುಕು ನಟನೆ ಮೂಲಕ ನಂದಿತಾ ಗಮನಸೆಳೆದರು.

ಹೀರೋ ಟ್ರೈಲರ್‌ನಲ್ಲಿ ಏನಿಷ್ಟೊಂದು ರಕ್ತ; ರಿಷಬ್‌ ಕಲ್ಪನೆ ಗೆಸ್‌ ಮಾಡೋಕೆ ಆಗಲ್ಲ! ...

ಆಮೇಲಿಂದ ಮೇಲಿಂದ ಮೇಲೆ ತಮಿಳು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿ ಬಿಟ್ಟರು. ಸದ್ಯಕ್ಕೀಗ ನಮ್ ಕನ್ನಡದ ಹುಡುಗಿ ನಂದಿತಾ ತಮಿಳು ಸ್ಟಾರ್ ಸಿಂಬುಗೆ ’ಈಸ್ವರನ್’ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಈಗಷ್ಟೇ ಬಿಡುಗಡೆಯಾಗಿರೋ ಈ ಸಿನಿಮಾ ಖಂಡಿತಾ ಬ್ಲಾಕ್ ಬಾಸ್ಟರ್ ಹಿಟ್ ಆಗುತ್ತೆ ಅಂತಲೇ ಎಲ್ಲರೂ ಮಾತಾಡುತ್ತಿದ್ದಾರೆ. ಅಲ್ಲಿಗೆ ನಮ್ಮ ಕನ್ನಡದ ಹುಡುಗಿ ನಂದಿತಾ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ನಮ್ಮ ಕನ್ನಡದ ಹುಡುಗಿ ಈ ಎತ್ತರಕ್ಕೆ ಏರಿರೋದು ಕಡಿಮೆ ವಿಷಯನಾ!

ಈಕೆಯ ಕೈಯಲ್ಲಿ ಇನ್ನೊಂದಿಷ್ಟು ಸಿನಿಮಾಗಳಿವೆ. ಅವೆಲ್ಲ ಈಕೆಯನ್ನು ಖಂಡಿತಾ ನೆಕ್ಸ್ಟ್ ಲೆವೆಲ್ ಗೆ ಕೊಂಡೊಯ್ಯುವಂತಿವೆ. ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಈಕೆ ಅಲ್ಲಿ ಕನ್ನಡ ಬಳಸೋದುಂಟು. ಅಲ್ಲಿಗೆ ಎಷ್ಟೇ ಎತ್ತರಕ್ಕೆ ಏರಿದರೂ ತನ್ನ ಮಾತೃಭಾಷೆ ಮರೆಯದ, ಇಂದಿಗೂ ಕನ್ನಡವನ್ನು ಇಷ್ಟ ಪಡುವ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ವಿಷಯ ಅಂದರೆ ದಬಾಂಗ್ 3 ಕನ್ನಡಕ್ಕೆ ಬಂದಾಗ ಅದರಲ್ಲಿ ಸೋನಾಕ್ಷಿ ಸಿನ್ಹಾಗೆ ಕನ್ನಡ ದನಿಯಾದವರು ಈ ನಟಿಯೇ. ಈಗ ನಂದಿತಾ ಶ್ವೇತಾ ಆಗಿರುವ ಈ ಜಿಂಕೆ ಮರಿ ಇನ್ನಷ್ಟು ಎತ್ತರಕ್ಕೆ ಏರಲಿ ಅಂತ ಹಾರೈಸೋಣ.