ಬೆಂಗಳೂರು (ಮಾ. 09): ಇತ್ತೀಚಿನ ದಿನಗಳಲ್ಲಿ ಲಂಬೋರ್ಗಿನಿ ಕಾರುಗಳ ಸದ್ದು ಹೆಚ್ಚಾಗುತ್ತಿದೆ. ಇಟಲಿ ಮೂಲದ ಈ ಕಾರು ಭಾರತದಲ್ಲೂ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. 

ಮಹಿಳಾ ದಿನಾಚರಣೆ: ಮಡದಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಪುನೀತ್!

ಮಹಿಳಾ ದಿನಾಚರಣೆ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಮುದ್ದಿನ ಮಡದಿಗೆ ಲಂಬೋರ್ಗಿನಿ ಕಾರನ್ನು ಗಿಫ್ಟಾಗಿ ಕೊಟ್ಟಿದ್ದಾರೆ.  ಈ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. 

ಲ್ಯಾಂಬೋರ್ಗಿನಿ ಉರುಸ್ ಕಾರಿನ ವಿಶೇಷತೆ:

ಲ್ಯಾಂಬೋರ್ಗಿನಿ ಉರುಸ್ ಕಾರು ವಿಶ್ವದ ಫಾಸ್ಟೆಸ್ಟ್ SUV ಕಾರು ಅನ್ನೋ ಹೆಗ್ಗಳಿಗೆಯೊಂದಿಕೆ ಬಿಡುಗಡೆಯಾದ ಕಾರು. ಹೆಚ್ಚಾಗಿ ಲ್ಯಾಂಬೋರ್ಗಿನಿ ಕಾರು ಗ್ರೌಂಡ್ ಕ್ಲೀಯರೆನ್ಸ್ ಕಡಿಮೆ. ಆದರೆ ಇದು SUV ಕಾರಾಗಿರೋದರಿಂದ ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ಕಾರು. ಇಷ್ಟೇ ಅಲ್ಲ ಐಷಾರಾಮಿ ಹಾಗೂ ಅತ್ಯಂತ ಸುರಕ್ಷತೆಯ ಕಾರಾಗಿ ಹೊರಹೊಮ್ಮಿದೆ.

ಸದ್ದಿಲ್ಲದೇ ರಶ್ಮಿಕಾ ತವರಿಗೆ ಬಂದ ವಿಜಯ್ ದೇವರಕೊಂಡ!

ಈ ಕಾರು ಸ್ಯಾಂಡಲ್ ವುಡ್ ನ ಇನ್ನೂ ಇಬ್ಬರ ಬಳಿ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಂಬೋರ್ಗಿನಿ ಕಾರನ್ನು ಖರೀದಿಸಿದ್ದರು. ಬಿಳಿ ಬಣ್ಣದ ಕಾರು ಇದಾಗಿದ್ದು ಆವೆಂಟೆಡರ್ ಮಾಡೆಲ್ ಆಗಿದೆ. ಈ ಕಾರಿನ ಬೆಲೆ 5 ಕೋಟಿ ರೂ. 

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಕಾರ್ ಕ್ರೇಜ್ ಜಾಸ್ತಿ. ಹೊಸ ಹೊಸ ಕಾರುಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ನಿಖಿಲ್ ಬಳಿಯೂ ಲಂಬೋರ್ಗಿನಿ ಕಾರಿತ್ತು. ಇದೀಗ ಅಪ್ಪು ಮನೆಗೆ ಲಂಬೋರ್ಗಿನಿ ಸೇರ್ಪಡೆಯಾಗಿದೆ.