ಕನ್ನಡದ ಮಟ್ಟಿಗೆ ಹೊಸ ಪ್ರಯೋಗದ ಸಿನಿಮಾ ಎನಿಸಿಕೊಂಡ ಮನರೂಪ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡಿಗೇರುವ ಮೂಲಕ ಹೊಸ ನಿರ್ದೇಶಕನ ಶ್ರಮಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಈ ಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿಕೊಂಡಿದೆ.

‘ಉತ್ತಮ ಪ್ರಯೋಗಾತ್ಮಕ ಸಿನಿಮಾ’ ಎಂದು ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಅಮೆರಿಕಾದ ಮಿಯಾಮಿ ಇಂಟರ್‌ನ್ಯಾಷನಲ್‌ ಚಲನಚಿತ್ರೋತ್ಸವ ಹಾಗೂ ಟರ್ಕಿಯ ಇಸ್ತಾನ್‌ಬುಲ್‌ ಫಿಲ್ಮ್‌ ಅವಾರ್ಡ್ಸ್ ಚಿತ್ರೋತ್ಸವಗಳಿಗೂ ಮನರೂಪ ಚಿತ್ರ ಆಯ್ಕೆ ಆಗಿರುವುದಕ್ಕೆ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ಕಿರಣ್‌ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಿರಣ್‌ ಹೆಗಡೆ ನಿರ್ದೇಶನದ 'ಮನರೂಪ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ!

‘ಈಗ ಮನರೂಪ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ, ಅನೇಕರು ಈ ಚಿತ್ರವನ್ನು ನೋಡಿ ವಿಭಿನ್ನ ಕಥಾಹಂದರದ ಸಿನಿಮಾ ಇದಾಗಿದೆ ಎನ್ನುತ್ತಿದ್ದಾರೆ. ಎಲ್ಲೂ ಕಥೆಯ ಜಾಡನ್ನು ಬಿಡದೇ ನಿರೂಪಣೆಗೊಂಡ ಚಿತ್ರ ಮತ್ತು ಹೊಸ ತಂಡ ಮಾಡಿದ್ದಾರೆ ಎಂದು ಅನಿಸದೆ ಪ್ರಬುದ್ಧವಾಗಿ ಅಭಿನಯಿಸಿದ್ದಾರೆ ಎನ್ನುತ್ತಿದ್ದಾರೆ.

ಸೋಷಿಯಲ್‌ ಮಿಡಿಯಾದಲ್ಲಿ ಮನರೂಪ ಪೋಸ್ಟರ್‌ಗಳನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಥೀಯೆಟರ್‌ನಲ್ಲಿ ಸಿಗದ ಮಾನ್ಯತೆ, ಅಮೆಜಾನ್‌ ಪ್ರೈಮ್‌ನಲ್ಲಿ ಸಿಗುತ್ತಿದೆ. ಜೊತೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ತನ್ನದಾಗಿಸಿಕೊಳ್ಳುತ್ತಿರುವುದು ನನ್ನ ಮೊದಲ ಪ್ರಯತ್ನಕ್ಕೆ ಸಿಕ್ಕ ಗೆಲುವು’ ಎನ್ನುತ್ತಾರೆ ನಿರ್ದೇಶಕ ಕಿರಣ್‌ ಹೆಗಡೆ.

ಚಿತ್ರ ವಿಮರ್ಶೆ: ಮನರೂಪ

ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ದಿಲೀಪ್‌ ಕುಮಾರ್‌, ಅನೂಷಾ ರಾವ್‌, ನಿಷಾ ಯಶ್‌ ರಾಮ್‌, ಆರ್ಯನ್‌, ಶಿವಪ್ರಸಾದ್‌, ಅಮೋಘ್‌ ಸಿದ್ಧಾಥ್‌ರ್‍, ಪ್ರಜ್ವಲ್‌ ಗೌಡ, ಗಜ ನೀನಾಸಂ, ರಮಾನಂದ ಐನಕೈ, ಬಿ. ಸುರೇಶ್‌ ಅವರು ಅಭಿನಯಿಸಿದ್ದರು. ಸಾಹಿತಿ ಮತ್ತು ಪತ್ರಕರ್ತ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ.