Asianet Suvarna News Asianet Suvarna News

ಆಗಸ್ಟ್‌ನಲ್ಲಿ ಕಿನ್ನಾಳ್ ರಾಜ್ 'ಹಿಟ್ಲರ್‌' ಸಿನಿಮಾ ರಿಲೀಸ್!

ಆಗಸ್ಟ್‌‌ನಲ್ಲಿ ಹಿಟ್ಲರ್ ಸಿನಿಮಾ ರಿಲೀಸ್. ಚಿತ್ರತಂಡಕ್ಕೆ ಶುಭಾ ಹಾರೈಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್.

Kinnal Raj Kannada film Hitler to hit the screen in August vcs
Author
Bangalore, First Published Jul 29, 2021, 11:24 AM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳಾದ 'ಜೆಂಟಲ್‌ಮನ್','ಕೆಜಿಎಫ್'ಗೆ ಸಾಹಿತ್ಯ ರಚಿಸಿದ ಕಿನ್ನಾಳ್ ರಾಜ್‌,  ಮೊದಲ ಬಾರಿಗೆ ಕತೆ, ಚಿತ್ರಕಥೆ, ಸಂಭಾಷಣೆ ಬರೆಯುವುವ ಜೊತೆಗೆ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

‘ಹಿಟ್ಲರ್‌’ಸಿನಿಮಾ ಬಿಡುಗಡೆ ಆಗಸ್ಟ್‌ನಲ್ಲಿ  ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೊನ್ನೆಯಷ್ಟೇ ಶಿವರಾಜ್‌ಕುಮಾರ್‌ 'ಹಿಟ್ಲರ್‌' ಸಿನಿಮಾದ ತುಣುಕುಗಳನ್ನು ವೀಕ್ಷಿಸಿ, ‘ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿ,’ ಎಂದು ಹೇಳುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಅನಾಥ ಹುಡುಗನೊಬ್ಬನ ಕಾನೂನು ಬಾಹಿರ ಚಟುವಟಿಕೆಗಳು, ಅವನ ದರ್ಬಾರ್‌ ಅನ್ನು ಈ ಚಿತ್ರ ಬಿಚ್ಚಿಡಲಿದೆ. ಭಾವನಾತ್ಮಕ ಸನ್ನಿವೇಶಗಳು, ಹಾಸ್ಯವೂ ಸೇರಿಸಿಕೊಂಡಿರುವ ಪಕ್ಕಾ ಮಾಸ್ ಚಿತ್ರ ಇದಾಗಿದೆ.

'ಹಿಟ್ಲರ್‌' ಹೆಸರಿನಲ್ಲಿ ಭೂಗತ ಲೋಕದ ಕತೆ;ಟೈಟಲ್‌ ಲಾಂಚ್‌ ಮಾಡಿದ ಶ್ರೀಮುರಳಿ!

ಕೆಲವು ತಿಂಗಳ ಹಿಂದೆ ನಟ ಶ್ರೀಮುರಳಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಲೋಹಿತ್‌ ನಾಯಕ, ವರ್ಧನ್‌ ತೀರ್ಥಹಳ್ಳಿ ಚಿತ್ರದ ವಿಲನ್‌. ನಾಯಕಿಯಾಗಿ ಸಸ್ಯ ನಟಿಸಿದ್ದಾರೆ. ಬಲರಾಜವಾಡಿ, ವೈಭವ್‌ ನಾಗರಾಜ್‌, ವಿಜಯ್‌ ಚಂಡೂರ್‌, ಶಶಿಕುಮಾರ್‌, ಗಣೇಶ್‌ ರಾವ್‌ ನಟಿಸಿದ್ದಾರೆ. ಸಂಗೀತ ಆಕಾಶ್‌ ಪರ್ವ ಅವರದ್ದು. ಮಮತಾ ಲೋಹಿತ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

 

 

Follow Us:
Download App:
  • android
  • ios