‘ವಿಕ್ರಾಂತ್ ರೋಣ’ ಚಿತ್ರಕ್ಕೆ ನಟ ಸುದೀಪ್ ಡಬ್ಬಿಂಗ್ ಆರಂಭ ತುಂಬಾ ದಿನಗಳ ನಂತರ ಸಿನಿಮಾಗೆ ಧ್ವನಿ ಕೊಡ್ತಿದ್ದೀನಿ ಎಂದ ಕಿಚ್ಚ

ಬಹು ನಿರೀಕ್ಷೆಯ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ನಟ ಸುದೀಪ್ ಡಬ್ಬಿಂಗ್ ಆರಂಭಿಸಿದ್ದಾರೆ. ‘ತುಂಬಾ ದಿನಗಳ ನಂತರ ಸಿನಿಮಾಗೆ ನನ್ನ ಧ್ವನಿ ನೀಡುತ್ತಿದ್ದೇನೆ.

ಕೊನೆಗೂ ವಿಕ್ರಾಂತ್ ರೋಣ ಚಿತ್ರದಿಂದ ಡಬ್ಬಿಂಗ್ ಆರಂಭವಾಗಿದೆ. ಖುಷಿ ಆಗುತ್ತಿದೆ. ಕುತೂಹಲದಿಂದ ಕಾಯುತ್ತಿರುವೆ’ ಎಂದು ನಟ ಸುದೀಪ್ ಹೇಳಿದ್ದಾರೆ.

ಮುಂದಿನವಾರದಿಂದ 'ವಿಕ್ರಾಂತ ರೋಣ' ಡಬ್ಬಿಂಗ್‌ನಲ್ಲಿ ಕಿಚ್ಚ ಸುದೀಪ್ ಭಾಗಿ!

ಅನೂಪ್ ಭಂಡಾರಿ ನಿರ್ದೇಶನದ, ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಚಿತ್ರದಲ್ಲಿ ರವಿಶಂಕರ್ ಗೌಡ, ನೀತಾ ಅಶೋಕ್ ನಟಿಸಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ನಟ ರವಿಶಂಕರ್ ಗೌಡ ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮುಗಿಸಿದ ರವಿಶಂಕರ್ ಚಿತ್ರ ವಿಮರ್ಶೆ ಕೂಡ ಮಾಡಿದ್ದಾರೆ.

YouTube video player