ಬಿಗ್ ಬಾಸ್‌ ನಂತರ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾದ ನಟ ಕಿಚ್ಚ ಸುದೀಪ್. ವಿಕ್ರಾಂತ ರೋಣ ಡಬ್ಬಿಂಗ್ ಶುರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಒಳಾಂಗಣ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸ್ಪರ್ಧಿಗಳನ್ನು ಬರ ಮಾಡಿಕೊಂಡ ಕಿಚ್ಚ ಸೋಷಿಯಲ್ ಮೀಡಿಯಾ ಮೂಲಕ ಶೋನಲ್ಲಿ ಭಾಗಿಯಾದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದರು. ಸುದೀಪ್‌ ಅವರನ್ನು ವೇದಿಕೆ ಮೇಲೆ ಕಂಡು ಕಿರುತೆರೆ ವೀಕ್ಷಕರಿಗೆ ಮಾತ್ರವಲ್ಲ, ಬಾಲಿವುಡ್‌ ನಚಿ ಜೆನಿಲಿಯಾ ದೇಶ್‌ಮುಖ್‌ಗೂ ಖುಷಿಯಾಗಿರುವುದರ ಬಗ್ಗೆ ಬರೆದುಕೊಂಡಿದ್ದಾರೆ.

ಕೊರೋನಾ ಅನ್‌ಲಾಕ್‌ ಆಗುತ್ತಿದ್ದಂತೆ, ಚಿತ್ರೀಕರಣದ ಜತೆಗೆ ಸ್ಯಾಂಡಲ್‌ವುಡ್‌ನಲ್ಲಿ ಒಳಾಂಗಣ ಸಿನಿಮಾ ಚಟುವಟಿಕೆಗಳೂ ಆರಂಭವಾಗುತ್ತಿವೆ. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಡಬ್ಬಿಂಗ್ ಶುರು ಮಾಡುವ ಮೂಲಕ ಸದ್ದು ಮಾಡುತ್ತಿದೆ. ಮುಂದಿನ ವಾರದಿಂದ ಸುದೀಪ್ ಡಬ್ಬಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. 

"

ಚಿತ್ರದ ನಾಯಕಿ ನೀತಾ ಆಶೋಕ್ ಅವರು ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 'ಡಬ್ಬಿಂಗ್ ನಂತರ ವಿಕ್ರಾಂತ್ ರೋಣ ನೋಡಿ, ಸಖತ್ ಎಕ್ಸೈಟ್ ಆಗಿದ್ದೀನಿ. ಆರಂಭಕ್ಕಿಂತಲೂ ಈಗ ತುಂಬಾ ಥ್ರಿಲ್ ಆಗಿರುವೆ. ಅನೂಪ್‌ ಭಂಡಾರಿ ಸರ್ ಆಲೋಚನೆಗಳಿಗೆ ಒಂದು ಚಪ್ಪಾಳೆ. ಸಿನಿಮಾ ನೀಡಿದರೆ ಮೈ ಜುಮ್ ಎನಿಸುತ್ತದೆ,' ಎಂದು ನೀತಾ ಬರೆದುಕೊಂಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.