ಅದು 2015ನೇ ಇಸವಿ. ವೀಡಿಯಾಗಳಲ್ಲೆಲ್ಲ ಮಿಂಚಿನಂತೆ ಸುದ್ದಿಯೊಂದು ಹರಿದುಬಂತು. ಸುದೀಪ್ ಪತ್ನಿ ಪ್ರಿಯಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಅನ್ನೋ ಸುದ್ದಿಯದು. ಅಲ್ಲಿಗೆ ಸುದೀಪ್ ದಾಂಪತ್ಯ ಮುರಿದುಬಿತ್ತು ಅಂತಲೇ ಎಲ್ಲರೂ ಮಾತಾಡಿಕೊಂಡರು. ತನಗಿನ್ನು ಈ ದಾಂಪತ್ಯದಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ಅದಕ್ಕಾಗಿ ವಿಚ್ಛೇದನ ಕೋರುತ್ತಿರುವುದಾಗಿ ಪ್ರಿಯಾ ರಾಧಾಕೃಷ್ಣನ್ ಹೇಳಿದರು. 

ಹಾಗೆ ನೋಡಿದರೆ ಕೇರಳದ ನಾಯರ್ ಕುಟುಂಬದಲ್ಲಿ ಹುಟ್ಟಿದ ಪ್ರಿಯಾ ಮತ್ತು ಕನ್ನಡದ ಕಂದ ಸುದೀಪ್ ಒಂದಾಗಿದ್ದೇ ಒಂದು ರೋಚಕ ಕಥನ. ಹುಟ್ಟಿದ್ದು ಕೇರಳದಲ್ಲಾದರೂ ಪ್ರಿಯಾ ಓದಿದ್ದೆಲ್ಲ ಬೆಂಗಳೂರಿನಲ್ಲೇ. ಆಗ ಪ್ರಿಯಾ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಸುದೀಪ್‌ ಆಗ ಮಾಡೆಲಿಂಗ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದರು. ಅಂಥಾ ಟೈಮ್ ನಲ್ಲಿ ನಾಟಕಗಳಲ್ಲಿ ನಟಿಸಿದರೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದು ಸುಲಭ ಅಂತ ಗೊತ್ತಾಯ್ತು. ಹೀಗಾಗಿ ಅವರು ಕಾಲೇಜ್ ನಾಟಕ ತಂಡ ಸೇರಲು ಮುಂದಾದರು. ಅದೇ ಕಾಲೇಜಿನಲ್ಲೇ ಪ್ರಿಯಾ ಓದುತ್ತಿದ್ದರು. ಆ ದಿನಗಳಲ್ಲಿ ಪ್ರಿಯಾ ಮತ್ತು ಸುದೀಪ್ ನಡುವೆ ಸ್ನೇಹ ಬೆಳೆಯಿತು. ಆಗೆಲ್ಲ ನಿತ್ಯ ಪ್ರಿಯಾ ಮುಂದೆ ಗಿಟಾರ್ ನುಡಿಸುತ್ತಾ ಆಕೆಯನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದರಂತೆ ಕಿಚ್ಚ ಸುದೀಪ್. 

ಕಿಚ್ಚ ಬೆಳ್ಳಿ ಹಬ್ಬದ ಪ್ರಯುಕ್ತ ನಡೆಯಿತು ವಿಶೇಷಚೇತನರಿಗೆ ಕ್ರಿಕೆಟ್ ಟೂರ್ನಮೆಂಟ್! ...

 ಇತ್ತ ಪ್ರಿಯಾಗೆ ಸುದೀಪ್ ಧ್ವನಿ ಅಂದರೆ ತುಂಬಾ ಇಷ್ಟ. ಅದಕ್ಕೇ ಅವರು ಫಿದಾ ಆಗಿದ್ರು. ಆಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದು ಜೀವ ಸಂಗಾತಿಗಳಾಗಲು ಹೆಚ್ಚು ಟೈಮ್ ಹಿಡೀಲಿಲ್ಲ. 
ಹೆಚ್ಚಿನ ದಾಂಪತ್ಯಗಳು ಶುರು ಶುರುವಿನಲ್ಲಿ ಚೆನ್ನಾಗಿಯೇ ಇರುತ್ತವೆ. ಆದರೆ ಒಂದು ಹಂತದ ನಂತರ ದಂಪತಿಯ ಮಧ್ಯೆ ಅಸಮಾಧಾನದ ಹೊಗೆ ಏಳಲು ಶುರುವಾಗುತ್ತೆ. ಅದರಲ್ಲೂ ಅವರು ಸಿನಿಮಾದಂಥಾ ಫೀಲ್ಡ್ ನಲ್ಲಿದ್ದರೆ ಕೇಳೋದೇ ಬೇಡ. ಅಲ್ಲಿ ಮದುವೆ, ಡಿವೋರ್ಸ್, ರೀ ಮ್ಯಾರೇಜ್ ಎಲ್ಲ ಕಾಮನ್. ಸುದೀಪ್ ಫ್ಯಾಮಿಲಿಯಲ್ಲಿ ಮದುವೆಯಾಗಿ ದಶಕಗಳೇ ಕಳೆದ ಮೇಲೆ ವಿರಸ ಶುರುವಾಯ್ತು. ಪರಸ್ಪರ ಸಮ್ಮತಿಯ ಮೇಲೆ ಇಬ್ಬರೂ ವಿಚ್ಛೇದನ ನೀಡಲು ಮುಂದಾದರು. ತಮ್ಮ ದಾಂಪತ್ಯದಲ್ಲಿ ಅನೇಖ ಭಿನ್ನಾಭಿಪ್ರಾಯಗಳು ಮೂಡಿರುವ ಕಾರಣ ವಿಚ್ಛೇದನ ನೀಡುತ್ತಿರುವುದಾಗಿ ಸುದೀಪ್ ಸಹ ಸ್ಟೇಟ್ ಮೆಂಟ್ ನೀಡಿದರು. ಈ ನಿಟ್ಟಿನಲ್ಲಿ ಪ್ರಿಯಾಗೆ ಜೀವನಾಂಶ ನೀಡಲೂ ಮುಂದಾಗಿದ್ದರು. 

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದಲ್ಲೇ ತಮ್ಮನ್ನು ಪರಿಚಯಿಸಿಕೊಂಡ ಕಿಚ್ಚ ಸುದೀಪ್‌! ...

ಮುಂದೆ ಇವರಿಬ್ಬರು ಒಂದಾಗಿದ್ದು ಮಗಳ ಕಾರಣಕ್ಕೆ. ಸುದೀಪ್ ಗೆ ಮಗಳೆಂದರೆ ಪ್ರಾಣ. ಆಕೆಯನ್ನು ಬಿಟ್ಟಿರುವುದು ಕಷ್ಟ. ಈ ನಿಟ್ಟಿನಲ್ಲಿ ಮಗಳ ಬರ್ತ್ ಡೇಗೆ ದಂಪತಿ ಮತ್ತೆ ಒಂದಾಗುತ್ತಾರೆ. ಎರಡು ವರ್ಷಗಳ ಬಳಿಕ ತಮ್ಮ ವಿಚ್ಛೇದನ ಅರ್ಜಿಯಿಂದ ಕೋರ್ಟ್ ನಿಂದ ಹಿಂಪಡೆಯುತ್ತಾರೆ. ಇಲ್ಲೇ ಮ್ಯಾಜಿಕ್ ನಡೆದಿದ್ದು. ಬಹಳ ಕಾಲ ದೂರವಿದ್ದ ಮಗಳ ಕಾರಣ ಒಂದಾದ ದಂಪತಿಗೆ ಒಬ್ಬರನ್ನೊಬ್ಬರು ಬಿಟ್ಟಿರೋದು ಎಷ್ಟು ಕಷ್ಟ ಅಂತ ಅರ್ಥವಾಗಿರಬೇಕು, ಆಮೇಲಿಂದ ಇವರಿಬ್ಬರ ನಡುವೆ ವಿರಸ ಕಡಿಮೆಯಾಗುತ್ತಾ ಹೋಯಿತು. ಆಗಾಗ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳೋದಕ್ಕೆ ಶುರು ಮಾಡಿದರು. ಮಗಳ ಬರ್ತ್ ಡೇಯನ್ನು ಇಬ್ಬರೂ ಸಂಭ್ರಮಿಸಿದರು. 
 


ಇವರ ದಾಂಪತ್ಯ ಮತ್ತೆ ಚಿಯರ್‌ಅಪ್‌ ಆಗಿದೆ ಅಂತ ಗೊತ್ತಾಗಿದ್ದು ಮೊನ್ನೆ ಮೊನ್ನೆ ಪ್ರಿಯಾ ಬರ್ತ್ ಡೇ ಸೆಲೆಬ್ರೇಶನ್ ನಡೆದಾಗ. ಪತ್ನಿ ಬರ್ತ್ ಡೇಗೆ ಕಾಮನ್ ಡಿಪಿ ಮಾಡಿ ಅದನ್ನು ಮಂಜು ವಾರಿಯರ್ ಕೈಲಿ ಬಿಡುಗಡೆ ಮಾಡಿಸಿದ್ರು ಕಿಚ್ಚ. ಆಮೇಲೆ ಬಹಳ ರೊಮ್ಯಾಂಟಿಕ್ ಆದ ಕವಿತೆಯೊಂದನ್ನು ಬರೆದು ಅದನ್ನು ಸುಂದರವಾಗಿ ಹಾಡಿ ಪತ್ನಿಗೆ ಸರ್ಪೈಸ್ ಉಡುಗೊರೆ ನೀಡಿದರು. ಒಬ್ಬ ಹಸ್ಬೆಂಡ್ ಇದಕ್ಕಿಂತ ರೊಮ್ಯಾಂಟಿಕ್ ಆಗಿ ಪತ್ನಿಯ ಬರ್ತ್ ಡೇ ಗಿಫ್ಟ್ ಕೊಡಲು ಸಾಧ್ಯವಿಲ್ಲ ಅನ್ನೋವಷ್ಟು ಗಾಢ ಪ್ರೀತಿಯ ಘಮವಿದ್ದ ಪತ್ರವದು. ಇದಕ್ಕೆ ಪ್ರಿಯಾ ಮಾತ್ರವಲ್ಲ, ಕರುನಾಡಿನ ಹೆಣ್ಣುಮಕ್ಕಳೂ ಫಿದಾ ಆದರು. ಅನುಬಂಧ ಅವಾರ್ಡ್ ವೇಳೆಗೂ ಪ್ರಿಯಾ ತಮ್ಮದು ಎಂಥಾ ಸ್ನೇಹಮಯಿ ದಾಂಪತ್ಯ ಅಂತ ಹೇಳಿದ್ದಾರೆ. ಲವ್ ಯೂ ದೀಪು ಅಂತ ಉಸುರಿದ್ದಾರೆ. 
ಇಷ್ಟೆಲ್ಲ ಆದ್ಮೇಲೆ ಇವರಿಬ್ಬರ ನಡುವೆ ಇನ್ನೂ ಏನಾದ್ರೂ ಭಿನ್ನಾಭಿಪ್ರಾಯ ಉಳಿದಿದೆಯಾ ಅಂತ ಕೇಳೋದು ಮೂರ್ಖಪ್ರಶ್ನೆ. ದಂಪತಿಗಳ ಬದುಕು ಮತ್ತೆ ಹಸನಾಗಿದೆ. ಕರುನಾಡ ಚಕ್ರವರ್ತಿಯ ಬದುಕಿನಲ್ಲಿ ಮತ್ತೆ ಪ್ರೇಮರಾಗ ಗರಿಗೆದರಿದೆ. 

ಮಿಥುನ ರಾಶಿಯ ಚೆಲುವೆಗೆ ಪ್ರಪೋಸ್ ಮಾಡಿದ್ರಾ ಕಿಚ್ಚ ಸುದೀಪ್ ...