ನಟ ಕಿಚ್ಚ ಸುದೀಪ್ ಸಂದರ್ಶನದಲ್ಲಿ ಜೀವನದ ಬಗ್ಗೆ ಮಾತನಾಡಿದ್ದಾರೆ. "ದೇವರು ನಿಮ್ಮ ತಟ್ಟೆಗೆ ಹಾಕಿದ್ದನ್ನು ನೆಮ್ಮದಿಯಿಂದ ತಿನ್ನಿ. ತೊಂದರೆ ಕೊಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನೊಣವನ್ನು ಓಡಿಸುವಂತೆ ಸಮಸ್ಯೆಗಳನ್ನು ಬಗೆಹರಿಸಿ. ಬೇರೆಯವರ ಕಡೆ ನೋಡಿದರೆ ನಿಮ್ಮ ಜೀವನ ಅವರ ದಾರಿಯಲ್ಲಿ ಸಾಗುತ್ತದೆ" ಎಂದು ಕಿಚ್ಚ ಸುದೀಪ್ ಸಲಹೆ ನೀಡಿದ್ದಾರೆ. ಅವರು 'ಮ್ಯಾಕ್ಸ್' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ ಮತ್ತು ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್‌ವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ (Kichcha Sudeep) ಅವರದು ಇಲ್ಲಿಯವರೆಗೆ ಒಂದು ಲೆಕ್ಕ, ಇನ್ಮುಂದೆ ಇನ್ನೊಂದ್ ಲೆಕ್ಕ..! ಸಿನಿಮಾ ಪ್ರೇಕ್ಷಕರು, ಅಭಿಮಾನಿಗಳು ಹಾಗೂ ಜಗತ್ತು ನಟ ಕಿಚ್ಚ ಸುದೀಪ್ ಅವರ ಬಗ್ಗೆ ಅಂದುಕೊಂಡಿದ್ದೇ ಬೇರೆ, ಆದ್ರೆ ಸುದೀಪ್ ಇರೋದೇ ಬೇರೆ.. ಇದೇನೂ ಯೂಟ್ಯೂಬರ್ ರಣವೀರ್ ಸ್ಟೋರಿ ತರ ಅಲ್ಲ ಬಿಡಿ, ಬೇರೇನೇ ಇದೆ ಕಿಚ್ಚನ ಕಿಚ್ಚಿನ ಸ್ಟೋರಿ.. ಒಮ್ಮೆ ಕಣ್ಣಾಡಿಸಿ.. 

ಹೌದು, ನಟ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. 'ಸರ್, ನೀವು ಊಟಕ್ಕೆ ಕುಳಿತಾಗ ಅವ್ರ ತಟ್ಟೆ ಬಿಟ್ಟಾಕ್ತಾರೆ, ನಿಮ್ ತಟ್ಟೆನಲ್ಲಿ ಏನಿದೆ ಅಂತ ನೋಡ್ಕೊಂಡು ನೋಡ್ಕೊಂಡು ಕೂತಿರ್ತಾರೆ.. ಅವ್ರು ನೋಡ್ತಾರೆ ಅಂತ ನೀವ್ಯಾಕೆ ನಿಮ್ಮ ತಟ್ಟೆಲ್ಲಿ ಇರೋದನ್ನ ಊಟ ಮಾಡೋಕೆ ಯೋಚ್ನೆ ಮಾಡ್ತೀರ..? 

ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಇವ್ರೇ ನೋಡಿ.. ಭೂಲೋಕದಿಂದ ದೂರಾಗಿದ್ದು ಹೀಗೆ..!

ದೇವ್ರು ಹಾಗೂ ನೇಚರ್ ಅದೇನೋ ನಿಮ್ ತಟ್ಟೆಗೆ ತಂದು ಹಾಕಿದೆ, ತಗೋ ಮಗನೇ ಇದು ನಿಂದು ಅಂತ.. ನೆಮ್ಮದಿಯಿಂದ ತಿಂದ್ರೆ ಆಯ್ತು.. ಇದು ಹೇಗೆ ಅಂದ್ರೆ, ನೊಣ ಬರಲ್ವಾ ಊಟ ಮಾಡ್ಬೇಕಾದ್ರೆ ಅಪ್ಪಿತಪ್ಪಿ..? ಆಗ ಏನ್ ಮಾಡ್ತೀರಾ? ನೀವು ನೋಣಾನ ಹಿಡ್ಯೋಕೆ ಹೋಗ್ತೀರಾ ಅಥವಾ ಸುಮ್ನೆ ಕೈನಲ್ಲಿ ಅದನ್ನ ಓಡಿಸ್ತಾ ತಿಂತಾ ಇರ್ತೀರಾ? ನೀವು ತಿಂತೀರಾ ಅಲ್ವಾ? ಅಷ್ಟೇ ಲೈಫಲ್ಲೂ.. 

ಒಂದು ಸಿನಿಮಾದಲ್ಲಿ ನೊಣದ ಹಿಂದೆ ಹೋದೆ.. ಲಾಸ್ಟ್‌ನಲ್ಲಿ ಏನಾಯ್ತು..? ನೊಣಾನೇ ನನ್ ಹೊಡೆದುಹಾಕಿ ಹೋಗ್ಬಿಡ್ತು.. ಹಾಗೇ ಆಗುತ್ತೆ ನೀವು ನಿಮ್ಗೆ ತೊಂದ್ರೆ ಕೊಡೋರ ಬಗ್ಗೆ ಯೋಚ್ನೆ ಮಾಡಿ ಅವ್ರ ಬಗ್ಗೆ ತಲೆ ಕೆಡಿಸ್ಕೊಂಡ್ರೆ.. ಲೈಫಲ್ಲಿ ನಮಗೆ ಏನ್ ಬರುತ್ತೋ ಅದು ನಮ್ಮದೇ ಅಂದ್ಕೊಂಡು ಹೋಗ್ತಾ ಇರ್ಬೇಕು.. ಅವ್ರಿವ್ರ ಕಡೆ ನೋಡ್ತಾ ಇದ್ರೆ ಲೈಫ್ ಅವ್ರ ಅಂದ್ಕೊಂಡ ಕಡೆನೇ ಹೋಗುತ್ತೆ..' ಅಂತ ಬೆಸ್ಟ್ ನೀತಿ ಪಾಠ ಹೇಳಿದ್ದಾರೆ ಕಿಚ್ಚ ಸುದೀಪ್. 

ವಜ್ರಮುನಿ ತೆರೆಮರೆಯಲ್ಲಿ ಅಪ್ಪಟ ಬಂಗಾರ, ನಟಿಯರಿಗೆ ಕೈ ಮುಗಿದು ಪಾತ್ರ ಮಾಡ್ತಾ ಇದ್ದಿದ್ದು ನಿಜವೇ?

ಅಂದಹಾಗೆ, ನಟ ಕಿಚ್ಚ ಸುದೀಪ್ ಸದ್ಯ ದೊಡ್ಡ ಸಕ್ಸಸ್ ಕೊಟ್ಟ ಖುಷಿಯಲ್ಲಿ ಇದ್ದಾರೆ. ಆ ಖುಷಿಯನ್ನು ಅನುಭವಿಸುತ್ತಲೇ ಅವರು ಕ್ರಿಕೆಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಸಾಕಷ್ಟು ಸಿನಿಮಾಗಳಿಗೆ ಸಹಿ ಮಾಡಿದ್ದು ಹಲವು ಶೂಟಿಂಗ್ ಹಂತದಲ್ಲಿದೆ. ಕಳೆದ ವರ್ಷ ಕೊನೆಯಲ್ಲಿ ತೆರೆಕಂಡ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಗ್ರಾಂಡ್ ಸಕ್ಸಸ್ ದಾಖಲಿಸಿದೆ. 

Kiccha Sudeep #shorts #speech #lifelessons