ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಇವ್ರೇ ನೋಡಿ.. ಭೂಲೋಕದಿಂದ ದೂರಾಗಿದ್ದು ಹೀಗೆ..!
Radhika: ಯಾರದೇ ವೈಯಕ್ತಿಕ ಬದುಕು ಆಡಿಕೊಳ್ಳಬೇಕಾದ ಸಂಗತಿಯಲ್ಲ.. ಅವರವರ ನೋವು ಅವರಿಗೇ ಗೊತ್ತು.. ಅಷ್ಟಕ್ಕೂ ಇನ್ನೊಬ್ಬರ ಜೀವನ ನಮ್ಮಿಷ್ಟದಂತೆ ಇರಬೇಕಾಗಿಲ್ಲ, ಇರಲೂ ಆಗದು.. ಸುದ್ದಿ ತಿಳಿದರೆ ಪ್ರತಿಯೊಬ್ಬರ ಜೀವನ ವಿಭಿನ್ನ ಎಂದು ಅರ್ಥವಾಗುತ್ತದೆ. ನಟಿ ರಾಧಿಕಾ ಲೈಫಲ್ಲಿ ನಡೆದಿದ್ದೇನು? ಗಂಡನಾಗಿದ್ದ ತುಳುನಾಡಿನ ಹುಡುಗನಿಗೆ ಏನಾಯ್ತು...?!... ನಟಿಯ ಲೈಫ್ ಸ್ಟೋರಿ ಡಿಫ್ರೆಂಟ್..

ನಟಿ ರಾಧಿಕಾ ಕುಮಾರಸ್ವಾಮಿ ಯಾರಿಗೆ ಗೊತ್ತಿಲ್ಲ..? ಒಂದು ಕಾಲದಲ್ಲಿ ಕನ್ನಡದ ಸ್ಟಾರ್ ಸಿನಿಮಾ ನಟಿ. ಇಂದಿಗೂ ಕೂಡ ನಟಿಸುತ್ತ, ಸಿನಿಮಾ ನಿರ್ಮಾಣ ಮಾಡುತ್ತ ಸಕ್ರಿಯರಾಗಿದ್ದಾರೆ ರಾಧಿಕಾ.
ನಿನಗಾಗಿ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾದ ರಾಧಿಕಾ, ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಸಾಕಷ್ಟು ಅವಕಾಶಗಳನ್ನು ಪಡೆದ ರಾಧಿಕಾ ಅವರು ಕನ್ನಡದ ಅನೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.
ದರ್ಶನ್, ಉಪೇಂದ್ರ, ವಿಜಯ ರಾಘವೇಂದ್ರ ಸೇರಿದಂತೆ ಹಲವರ ಜೊತೆ ನಟಿಸಿರುವ ನಟಿ ರಾಧಿಕಾ, ಶಿವರಾಜ್‌ಕುಮಾರ್ ತಂಗಿಯಾಗಿ ನಟಿಸಿ ಬಹಳಷ್ಟು ಜನಪ್ರಿಯತೆ ಗಳಿಸಿದ್ದಾರೆ.
ಲಂಗ-ದಾವಣಿಯಲ್ಲು ಮುದ್ದುಮುದ್ದಾಗಿ ಕಾಣುತ್ತಿದ್ದ ರಾಧಿಕಾರನ್ನು ನೋಡಿದ ಅದೆಷ್ಟೋ ಮಂದಿ ತಂಗಿ ಅಂದ್ರೆ ಹೀಗಿರಬೇಕು ಅಂತ ಕಣ್ಣೀರು ಹಾಕಿದ್ದರು. ಅಷ್ಟರಮಟ್ಟಿಗಿನ ಮುಗ್ಧ ಮುಖ ಹಾಗೂ ಅಮೋಘ ನಟನೆ ಅವರಲ್ಲಿ ಮನೆಮಾಡಿದೆ.
ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಬರುವ ಮೊದಲೇ ಅವರಿಗೆ ವಿವಾಹವಾಗಿತ್ತು. ರತನ್ ಕುಮಾರ್ ಹೆಸರಿನ ತುಳು ಮೂಲದ ಹುಡುಗ ರಾಧಿಕಾಗೆ ತಾಳಿ ಕಟ್ಟಿದ್ದರು. ಆದರೆ ಆ ಮದುವೆ ಹೆಚ್ಚು ಕಾಲ ಬಾಳಲಿಲ್ಲ.
ಕಾರಣ, ರಾಧಿಕಾ ಗಂಡ ಆಗಿದ್ದ ರತನ್ ಕುಮಾರ್ ಅವರು ಅಪಘಾತವೊಂದರಲ್ಲಿ 2002ರಲ್ಲಿ ನಿಧನರಾದ್ರು. ಆ ಬಳಿಕ ರಾಧಿಕಾ ಅತ್ತೆ ಮನೆಯಲ್ಲಿ ನೊಂದು ಬೆಂದು ಬದುಕಿ ನಡೆಸಿ ಕೊನೆಗೆ ತವರು ಮನೆ ಸೇರಿಕೊಂಡರು.
ಆಗಲೇ ರಾಧಿಕಾಗೆ ಬದುಕು ಸಾಕಷ್ಟು ಪಾಠ ಕಲಿಸಿತ್ತು. ತಾವು ಲೈಫಲ್ಲಿ ಏನಾದ್ರೂ ಸಾಧಿಸಬೇಕು, ಇನ್ಮುಂದೆ ಯಾರಿಗೂ ಭಾರವಾಗಿ ನಾನು ಬದುಕು ಸಾಗಿಸಬಾರದು ಎಂದು ರಾಧಿಕಾ ನಿರ್ಧರಿಸಿದ್ದರು.
ಕನ್ನಡಿಯಲ್ಲಿ ಮುಖ ನೋಡಿಕೊಂಡದ್ದರಲ್ಲವೇ? ಚೆಂದ ಎನ್ನುವುದು ರಾಧಿಕಾಗೆ ಹುಟ್ಟಿನಿಂದ ಬಂದ ಬಳುವಳಿ ಆಗಿತ್ತು. ಅದನ್ನು ಅರಿತಿದ್ದ ರಾಧಿಕಾಗೆ ನಟಿಯಾಗುವ ಹಂಬಲವೂ ಇತ್ತು.
ಅದರಂತೆ ರಾಧಿಕಾ ನಟಿಯಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದರು. ಮೊಟ್ಟಮೊದಲು ಸೃಜನ್ ಲೋಕೇಶ್ ನಾಯಕತ್ವದ 'ನೀಲ ಮೇಘ ಶ್ಯಾಮ' ಚಿತ್ರದಲ್ಲಿ ನಾಯಕಿಯಾದ್ರು. ಆದರೆ ಎರಡನೇ ಚಿತ್ರ 'ನಿನಗಾಗಿ' ಮೊದಲು ಬಿಡುಗಡೆ ಆಯ್ತು.
ವಿಜಯ ರಾಘವೇಂದ್ರ ನಾಯಕತ್ವದ ನಿನಗಾಗಿ ಚಿತ್ರದಲ್ಲಿ ನಾಯಕಿಯಾಗಿದ್ದ ರಾಧಿಕಾ ಸೌಂದರ್ಯ ಹಾಗೂ ಮುಗ್ಧ ಮುಖಕ್ಕೆ ಕನ್ನಡ ಸಿನಿಪ್ರೇಕ್ಷಕರು ಜೈ ಎಂದ್ರು, ನಟನೆ ಪ್ರತಿಭೆ ಕೂಡ ಅವರಲ್ಲಿ ಅತ್ಯದ್ಭುತವಾಗಿತ್ತು.
ನಟಿ ರಾಧಿಕಾ ತಮ್ಮ ಹೆಸರಿನ ಮುಂದೆ 2010ರ ಬಳಿಕ ಕುಮಾರಸ್ವಾಮಿ ಅಂತ ಸೇರಿಸಿಕೊಂಡರು. ಇಂದು ರಾಧಿಕಾ ಕುಮಾರಸ್ವಾಮಿ ಅಂತಲೇ ಫೇಮಸ್ ಆಗಿದ್ದಾರೆ, ಅವರಿಗೆ ಶಮಿಕಾ ಎಂಬ ಮಗಳು ಇದ್ದಾರೆ.
ಈಗಲೂ ರಾಧಿಕಾ ಸೌಂದರ್ಯ ಸ್ವಲ್ಪವೂ ಮಾಸಿಲ್ಲ. ವಯಸ್ಸು ಏರಿದಂತೆ ಅವರ ಸೌಂದರ್ಯ ಸಹ ಏರುಗತಿಯಲ್ಲೇ ಸಾಗುತ್ತಿದೆ ಅಂತ ಹಲವರು ಮಾತನ್ನಾಡಿಕೊಳ್ಳುತ್ತಾರೆ. ಸಿನಿಮಾದಲ್ಲಿ ಅವರು ಇಂದೂ ಕೂಡ ಸಕ್ರಿಯರಾಗಿದ್ದಾರೆ.