ಸಹ ನಟನ ಕಷ್ಟಕ್ಕೆ ಕೈ ಜೋಡಿಸಿದ ಕಿಚ್ಚ ಸುದೀಪ್ ಮಗಳ ಶಾಲೆಯ ಫೀಸ್ ಕಟ್ಟಲಾಗದೆ ಪರದಾಡುತ್ತಿದ್ದ ನಟ 

ವಿಜಯ್ ರಾಘವನ್​ ಮಗಳ ವಿಧ್ಯಾಭ್ಯಾಸಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದಾರೆ. ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿದ್ದ ವಿಜಯ್ ರಾಘವನ್‌ ಮಗಳ ಸ್ಕೂಲ್ ಫೀಸ್ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾದಿಂದ ಎರಡು ವರ್ಷದಿಂದ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಗದೆ ಕೆಲಸ ಇಲ್ಲದೆ ವಿಜಯ್ ರಾಘವನ್ ಮನೆಯಲ್ಲೇ ಇದ್ದರು. 
ಮಗಳ ಸ್ಕೂಲ್ ಫೀಸ್​​ಗೂ ಹಣವಿಲ್ಲದೇ ಪರದಾದುತ್ತಿದ್ದ ವಿಜಯ್‌ಗೆ ಕಿಚ್ಚ ನೆರವಾಗಿದ್ದಾರೆ.

ಶಿಕ್ಷಕರಿಗೆ ಕಿಚ್ಚ ಸುದೀಪ್ ಆರ್ಥಿಕ ನೆರವು...

ಸ್ಕೂಲ್ ಫೀಸ್ ಕಟ್ಟಿಲ್ಲ ಅಂತ ಆನ್​ ಲೈನ್​ ಕ್ಲಾಸ್​​ ಗೆ ಸೇರಿಸಿಕೊಂಡಿಲ್ಲ. ಶಾಲೆ ಸಿಬ್ಬಂದಿ ನಟನ ಮಗಳಿಗೆ ಟಿಸಿ ಕೊಟ್ಟು ಕಳಿಸಿದ್ದರು. ಕೊನೆಗೆ ದಿಕ್ಕು ತೋಚದೆ ತಾನೇ ಓದಿದ್ದ ಶಾಲೆಗೆ ಮಗಳನ್ನ ಸೇರಿಸಿದ್ದರು.

ಆ ಶಾಲೆಯವರು ನಾಲ್ಕು ಕಂತುಗಳಲ್ಲಿ ಸ್ಕೂಲ್ ಫೀಸ್ ಕಟ್ಟುವಂತೆ ಹೇಳಿದ್ದರು. ಕಿಚ್ಚ ಸುದೀಪ್ ಚಾರಿಟಬಲ್ ಮುಖಾಂತರ ರಾಘವನ್ ಮಗಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ ನಟ ಸುದೀಪ್. ರಾಘವನ್ ಮಗಳ ಓದಿನ ಸಂಪೂರ್ಣ ಶುಲ್ಕವನ್ನು ಸುದೀಪ್ ಪಾವತಿಸಿದ್ದಾರೆ.