ನಟ ಸುದೀಪ್‌ ಅವರ ಬೆಳ್ಳಿ ಹಬ್ಬದ ಸಂಭ್ರಮ ಇಂದು (ಮಾ.15) ಸಂಜೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ನಡೆಯಲಿದೆ. ಚಿತ್ರರಂಗದ ಗಣ್ಯರು, ನಟ, ನಟಿಯರು ಈ ಕಾರ್ಯಕ್ರಮಕ್ಕೆ ಆಗಮಿಸಿಲಿದ್ದಾರೆ.

ಸೂರಪ್ಪ ಬಾಬು ನಿರ್ಮಾಣ, ಶಿವಕಾರ್ತಿಕ್‌ ನಿರ್ದೇಶನದ ‘ಕೋಟಿಗೊಬ್ಬ 3’ ಚಿತ್ರತಂಡದಿಂದ ‘ಕಿಚ್ಚ ಸುದೀಪ ಬೆಳ್ಳಿ ಮಹೋತ್ಸವ’ ನಡೆಯುತ್ತಿದೆ.

ಡಿಸೆಂಬರ್‌ 24 ಕೊನೆಹಂತದ ಶೂಟಿಂಗ್ : ಇದು ಮೆಡಿಕಲ್ ರಿಸರ್ಚ್ ಕುರಿತ ಸಿನಿಮಾ

ವಿಶೇಷ ಅತಿಥಿಗಳ ಸಮ್ಮುಖದಲ್ಲಿ ನಟ ಸುದೀಪ್‌ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಹಾಡುಗಳಿಗೆ ನೃತ್ಯ ಕಲಾವಿದರಿಂದ ಡ್ಯಾನ್ಸ್‌ ನಡೆಯಲಿದೆ. ಆ ಮೂಲಕ ಕನ್ನಡ ಚಿತ್ರರಂಗ ಮತ್ತೊಂದು ರಂಗು ರಂಗಿನ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದೆ