Asianet Suvarna News Asianet Suvarna News

ಡಿಸೆಂಬರ್‌ 24 ಕೊನೆಹಂತದ ಶೂಟಿಂಗ್ : ಇದು ಮೆಡಿಕಲ್ ರಿಸರ್ಚ್ ಕುರಿತ ಸಿನಿಮಾ

‘ಡಿಸೆಂಬರ್‌ 24’ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ | ಮಾರ್ಚ್ 25ರಿಂದ ಹುಲಿಯೂರುದುರ್ಗ, ಕುಣಿಗಲ್, ಮಾಗಡಿ ಸುತ್ತಮುತ್ತ ಚಿತ್ರೀಕರಣ

Kannada movie December 24 to do last schedule shooting dpl
Author
Bangalore, First Published Mar 15, 2021, 10:11 AM IST

ನೈಜ ಘಟನೆಗಳ ಜತೆಗೆ ಕಾಲ್ಪನಿಕ ಅಂಶಗಳನ್ನು ಇಟ್ಟುಕೊಂಡು ಸೆಟ್ಟೇರಿರುವ ‘ಡಿಸೆಂಬರ್‌ 24’ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಇದೇ ಮಾರ್ಚ್ 25ರಿಂದ ಹುಲಿಯೂರುದುರ್ಗ, ಕುಣಿಗಲ್, ಮಾಗಡಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ನಾಗರಾಜ್‌ ಎಂ ಜಿ ಗೌಡ ಅವರು ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ದೇವು ಹಾಸನ್‌ ಹಾಗೂ ಮಂಜು ಡಿ ಟಿ , ಬೆಟ್ಟೇಗೌಡ ಅವರು ನಿರ್ಮಿಸುತ್ತಿದ್ದಾರೆ.

ಈಗಿನ ಕಾಲಘಟ್ಟದಲ್ಲಿ ನಡೆಯುವ ಮೆಡಿಕಲ್ ರೀಸರ್ಚ್‌ಗೆ ಸಂಬಂಧಪಟ್ಟಕೆಲ ಸನ್ನಿವೇಶಗಳನ್ನು ಒಳಗೊಂಡ ಸಿನಿಮಾ ಇದಾಗಿದೆ. ನಮ್ಮ ದೇಶದಲ್ಲಿ ಪ್ರತಿದಿನ ಹುಟ್ಟುವ ನೂರು ಮಕ್ಕಳಲ್ಲಿ ಮೂವರು ಮಕ್ಕಳು ಉಸಿರಾಟದ ಸಮಸ್ಯೆಯಿಂದಲೇ ಮರಣ ಹೊಂದುತ್ತಿದ್ದಾರೆ. ಇದಕ್ಕೆ ವೈದ್ಯಕೀಯ ಸಂಶೋಧನೆಯಲ್ಲಿ ಈವರೆಗೆ ಯಾವುದೇ ನಿಖರ ಔಷಧಿಯನ್ನು ಕಂಡು ಹಿಡಿದಿಲ್ಲ.

ರಾಬಿನ್‌ಹುಡ್‌ ಪೋಸ್ಟರ್‌ ಬಿಡುಗಡೆ: ಹೇಗಿದೆ ನೋಡಿ

ಕೆಲ ಸಂಶೋಧನೆಗಳು ನಡೆದಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಈ ಚಿತ್ರಕ್ಕೆ ಕತೆ ಮಾಡಲಾಗಿದೆ. ಅಂದರೆ ಉಸಿರಾಟದ ಸಮಸ್ಯೆಯಿಂದ ಮರಣಿಸುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲು ಕೆಲ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಮುಂದಾದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು.

ರಾಜ್ಯದಲ್ಲಿ 2015ರಿಂದ 2019ರ ನಡುವೆ ನಡೆದ ನೈಜ ಘಟನೆಗಳೇ ಈ ಚಿತ್ರಕ್ಕೆ ಪ್ರೇರಣೆ. ಅಪ್ಪು ಬಡಿಗೇರ, ರವಿ ಕೆ ಆರ್‌ ಪೇಟೆ, ರಘುಶೆಟ್ಟಿ, ಜಗದೀಶ್‌ ಹೆಚ್‌ ಜಿ ದೊಡ್ಡಿ, ರಾಮಾಚಾರಿ ಸಾಗರ್‌, ಭೂಮಿಕಾ ರಮೇಶ್‌, ಮಿಲನ ರಮೇಶ್‌ ಹಾಗೂ ದಿವ್ಯಾ ಆಚಾರ್‌ ಚಿತ್ರದ ನಾಯಕ- ನಾಯಕಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿಲ…ಗೌಡ, ಕುಮಾರ್‌ ಗೌಡ, ಹುಲಿಕಟ್ಟೆ, ಬೆಟ್ಟೇಗೌಡ, ಹಿರಿಯ ನಟಿ ಅಭಿನಯ, ಭಾಸ್ಕರ್‌, ಅನುಪಮ, ಮೈಕಲ್ ದೇವರಾಜ್‌ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು.

Follow Us:
Download App:
  • android
  • ios