ಕಿಚ್ಚ ಸುದೀಪ್ 'ಅಪ್ಪನಿಗೆ ಹುಟ್ಟಿದ್ದರೆ ಬಾ' ಎನ್ನುವ ಡೈಲಾಗ್ ಹೇಳಿದ್ದು ಯಾರಿಗೆ?

ಮ್ಯಾಕ್ಸ್ ಸಿನಿಮಾದ 'ಅಪ್ಪನಿಗೆ ಹುಟ್ಟಿದ್ದರೆ ಬಾ' ಎಂಬ ಡೈಲಾಗ್ ಯಾರಿಗೆ ಹೇಳಿದ್ದು ಎಂದು ಕಿಚ್ಚ ಸುದೀಪ್ ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗೂ ಇದಕ್ಕೂ ಸಂಬಂಧ ಇದೆಯಾ ಎಂಬ ಮಾಹಿತಿ ಇಲ್ಲಿದೆ ನೋಡಿ..

Kiccha Sudeep whom to say dialogue in Max movie If you are born to father come sat

ಬೆಂಗಳೂರು (ಡಿ.31): ಕನ್ನಡ ಚಿತ್ರರಂಗದ ಬಾದ್‌ ಷಾ ಕಿಚ್ಚ ಸುದೀಪ ಅವರ ಮ್ಯಾಕ್ಸ್ ಸಿನಿಮಾ 2024ರ ವರ್ಷಾಂತ್ಯದಲ್ಲಿ ಬಿಡುಗಡೆ ಆದರೂ ದೊಡ್ಡ ಯಶಸ್ಸಿನತ್ತ ದಾಪುಗಾಲಿಡುತ್ತಿದೆ. ಅದರಲ್ಲಿಯೂ ಈ ಸಿನಿಮಾದ ಹಾಡೊಂದರಲ್ಲಿ ಅಪ್ಪನಿಗೆ ಹುಟ್ಟಿದ್ದರೆ ಬಾ ಎಂದು ಹೇಳುವ ಡೈಲಾಗ್ ಒಂದಿದೆ. ಆ ಡೈಲಾಗ್ ಯಾರಿಗೆ ಹೇಳಿದ್ದು ಎಂಬುದನ್ನು ಸ್ವತಃ ಕಿಚ್ಚ ಸುದೀಪ್ ಅವರು ರಿವೀಲ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನಿಮಾದ ಸಕ್ಸಸ್ ಮೀಟ್‌ನ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಸಂವಾದ ಮಾಡಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ಬಿಗ್ ಬಾಸ್ ಸೀಸನ್ 11ರಲ್ಲಿ ವಕೀಲ ಜಗದೀಶ್ ಕುಮಾರ್ ಹಾಗೂ ಚೈತ್ರಾ ಕುಂದಾಪುರ ಅವರ ನಡುವೆ ಜಗಳ ನಡೆಯುವಾಗ ಅಪ್ಪನಿಗೆ ಹುಟ್ಟಿದ್ದರೆ ಬಾ.. ಎನ್ನುವ ಮಾತು ಬರುತ್ತದೆ. ಆ ಪದವನ್ನೇ ನೀವು ಸಿನಿಮಾದಲ್ಲಿ ಬಳಸಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಲಾಗಿದೆ. ನಿಮ್ಮ ಸಿನಿಮಾದ ಹಾಡೊಂದರಲ್ಲಿ ನೀವು ಅಪ್ಪನಿಗೆ ಹುಟ್ಟಿದ್ದರೆ ಬಾ ಎನ್ನುವ ಡೈಲಾಗ್ ಹೇಳುತ್ತೀರಿ. ಅದನ್ನು ನೀವು ಯಾರಿಗೆ ಹೇಳಿದ್ದೀರಿ. ನಿಮ್ಮ ಸಿನಿಮಾದಲ್ಲಿ ಅಂತಹ ಪದ ಬಳಕೆಯಿಂದ ಅಭಿಮಾನಿಗಳಿಗೆ ಮುಜುಗರ ಉಂಟಾಗಬಹುದೇ? ಎಂದು ಪ್ರಶ್ನೆ ಮಾಡುತ್ತಾರೆ.

ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಕಿಚ್ಚ ಸುದೀಪ ಅವರು, ಇಲ್ಲ.. ಸರ್, ಪ್ರಪಂಚದಲ್ಲಿ ಲೋಫರ್ಸ್‌ಗಳು ಅಂತಾ ಇರ್ತಾರೆ..  ಹೆಣ್ಣು ಮಕ್ಕಳನ್ನು ಕಾರಿನ ಡಿಕ್ಕಿಯಲ್ಲಿ ಎತ್ತಾಕೊಕೊಂಡು ಹೋಗಿ ರೇಪ್ ಮಾಡುತ್ತಾರಲ್ಲಾ..? ಅಂಥವರಿಗೆ ಹೇಳೋದು ಅಪ್ಪನಿಗೆ ಹುಟ್ಟಿದ್ದರೆ ಬಾರೋ ಅಂತಾ.. ಅವರಿಗೆ ಈ ಮಾತನ್ನು ಹೇಳಿರುವುದು, ಒಳ್ಳೆಯವರಿಗೆ ಅಲ್ಲ.

ಇದನ್ನೂ ಓದಿ: ಮ್ಯಾಕ್ಸ್ ಸಿನಿಮಾ ಯಶಸ್ಸು; ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ ಕಿಚ್ಚ ಸುದೀಪ್!

ನೀವು ಮಿಸ್ಟೇಕ್ ಮಾಡ್ಕೋಬೇಡಿ. ನಾನು ಹೇಳುತ್ತಿರುವುದು ಅವರಿಗೆ. ಅದನ್ನು ನೋಡುತ್ತಿರುವವರು ನೀವು ಒಳ್ಳೆಯವರು. ಅದು ನಿಮಗಲ್ಲ, ಬೇರೆ ಯಾರೋ ಹೀರೋಗಳಿಗಲ್ಲ. ಇದು ಅವರಿಗೆ ಟಾಂಗ್ ಕೊಟ್ರಾ, ಇವರಿಗೆ ಟಾಂಗ್ ಕೊಟ್ರಾ ಎನ್ನುವ ವಿಚಾರವನ್ನೇ ನೀವು ಇಲ್ಲಿ ತರಬೇಡಿ. ಅದು ಯಾರಿಗೂ ಅಲ್ಲ, ಆ ಸಿನಿಮಾದಲ್ಲಿರುವ ಖಳನಾಯಕರಿಗೆ (ವಿಲನ್ಸ್‌) ಹೇಳಿದ ಡೈಲಾಗ್ ಆಗಿದೆ. ನಿಮಗೆ ಕ್ಲಾರಿಸಿ ಸಿಕ್ತಿ ಅನ್ಕೊತೀನಿ ಸರ್ ಎಂದು ಹೇಳಿ ಮಾತು ಮುಗಿಸುತ್ತಾರೆ.

ಪುನಃ ಮಾತನ್ನು ಮುಂದುವರೆಸಿ, ಒಂದು ವೇಳೆ ನಿಮ್ಮನೆ ಹುಡುಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅವರ ಮೇಲೆ ಕೈ ಹಾಕಿ, ತೊಂದರೆ ಕೊಟ್ಟರೆ ನೀವು ಅಥವಾ ನಾವಾಗಲಿ ಶುದ್ಧ ಕನ್ನಡದಲ್ಲಿ ಮಾತನಾಡುತ್ತೀವಾ ಸರ್?.. ನಾನು ಸುಮ್ನೆ ಹೇಳ್ತಿರುವುದು. ನಮ್ಮ ಕನ್ನಡದಲ್ಲಿ ಇದಕ್ಕೆಂದಲೇ ಎಂಥಹ ಒಳ್ಳೊಳ್ಳೆಯ ಪದಗಳಿವೆ. ನಾನು ಅದ್ಯಾವುದನ್ನೂ ಬಳಸದೇ ನೀಟಾಗಿ, ಅಪ್ಪನಿಗೆ ಹುಟ್ಟಿದ್ದರೆ ಬಾ.. ಎಂದು ಡೈಲಾಗ್‌ನಲ್ಲಿ ಹೇಳಿದ್ದೀನಿ. ಅಷ್ಟೇ.. ಅಲ್ಲಿ ಬಿಗ್‌ ಬಾಸ್‌ನಲ್ಲಿ ನಡೆದಿರುವ ದೃಶ್ಯಕ್ಕೂ ಇದಕ್ಕೂ ಹೋಲಿಕೆ ಮಾಡಬೇಡಿ. ನಾನು ಹೇಳಿದ ಡೈಲಾಗ್ ಲೋಫರ್ಸ್‌ಗಳಿಗೆ, ಮಿಕ್ಕಿದ್ದೆಲ್ಲಾ ಒಳ್ಳೆಯವರಿಗೆ ಎಂದು ಹೇಳಿ ಸುದೀಪ್ ಮಾತನ್ನು ನಿಲ್ಲಿಸುತ್ತಾರೆ.

ಇದನ್ನೂ ಓದಿ: ಕೆಲವರು ಅವ್ರ ಲೈಫನ್ನೇ ಬೇರೆಯವ್ರಿಗೋಸ್ಕರ ತ್ಯಾಗ ಮಾಡಿರ್ತಾರೆ: ಕಿಚ್ಚ ಸುದೀಪ್!

Latest Videos
Follow Us:
Download App:
  • android
  • ios