ಬೆಂಗಳೂರು (ಜೂ. 24): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನೋರ್ವನಿಗೆ ಆರ್ಥಿಕವಾಗಿ ನೆರವು ನೀಡುವ ಮೂಲಕ ಕಿಚ್ಚ ಸುದೀಪ್ ಚಾರಿ ಟೇಬಲ್ ಸೊಸೈಟಿ ಮಾನವೀಯತೆ ಮೆರೆದಿದೆ. ಮೈಸೂರಿನ ಎಚ್‌ಡಿ ಕೋಟೆಯ 26 ವರ್ಷದ ಅಲೆಕ್ಸ್‌ ರಾಬರ್ಟ್ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಪ್ರತಿವಾರ ಡಯಾಲಿಸಿಸ್ ಹಾಗೂ ಬ್ಲಡ್ ಟ್ರಾನ್ಸ್‌ಫ್ಯೂಷನ್‌ಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಬಡತನದ ಕುಟುಂಬದಿಂದ ಬಂದ ಅಲೆಕ್ಸ್‌ಗೆ ವೆಚ್ಚ ಭರಿಸುವುದು ಕಷ್ಟವಾಗುತ್ತಿತ್ತು. ಈಗ ಚಾರಿಟೇಬಲ್ ಸೊಸೈಟಿ ಆರ್ಥಿಕ ನೆರವು ನೀಡುತ್ತಿದೆ. 

ಒಂದು ವರ್ಷದ ಹಿಂದೆ ಭೇಟಿ: ಅಲೆಕ್ಸ್‌ ರಾಬರ್ಟ್ 19 ವರ್ಷದವರಾಗಿದ್ದಾಗಲೇ ಒಂದು ಕಿಡ್ನಿ ವೈಫಲ್ಯ ಕಂಡಿತು. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಈ ಬಡ ಕುಟುಂಬ ಒಂದಿಷ್ಟು ವರ್ಷ ಹೇಗೋ ನಿಭಾಯಿಸುತ್ತಿದ್ದರು. ಎರಡೂ ಕಿಡ್ನಿ ವೈಫಲ್ಯ ಕಾಣಿಸಿಕೊಂಡು ಹಣಕಾಸಿನ ತೊಂದರೆ ಎದುರಾದಾಗ ನಟ ಸುದೀಪ್‌ರನ್ನು ಭೇಟಿ ಮಾಡಿ ಕಷ್ಟ ತೋಡಿಕೊಂಡರು. ಸುದೀಪ್ ಮತ್ತು ತಂಡ ಅಲೆಕ್ಸ್ ರಾಬರ್ಟ್ ಚಿಕಿತ್ಸೆ ಪಡೆಯುತ್ತಿರುವ ಮೂಸೂರಿನ ಕೆ ಅರ್ ಆಸ್ಪತ್ರೆಯಿಂದ ದಾಖಲೆ ತರಿಸಿಕೊಂಡು ಪರಿಶೀಲನೆ ನಡೆಸಿದರು. 

ಕಿಚ್ಚ ಸುದೀಪ್ ಈ ಕೆಲಸ ನೋಡಿದರೆ ಶಹಭ್ಬಾಸ್ ಅನ್ನದೇ ಇರೋಕಾಗುತ್ತಾ..!

ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಅವರಿಗೆ ನೀಡಿದ ಮೇಲೆ ಡಯಾಲಿಸಿಸ್ ವೆಚ್ಚವನ್ನು ಸೊಸೈಟಿಯಿಂದಲೇ ನೀಡಲಾಗುತ್ತಿತ್ತು. ಅಲ್ಲದೇ ಬ್ಲಡ್ ಟ್ರಾನ್ಸ್‌ಫ್ಯೂಷನ್‌ಗೆ ವಾರಕ್ಕೆ 6 ಸಾವಿರ ರೂಪಾಯಿ ಅಗತ್ಯವಿದೆ. ಇಷ್ಟು ಹಣವನ್ನು 6 ತಿಂಗಳುಗಳ ಕಾಲ ಕೊಡುವುದಾಗಿ ಆಸ್ಪತ್ರೆಗೆ ಅಗ್ರಿಮೆಂಟ್ ಮಾಡುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದೆ.