ಮನೆಯಲಿಲ್ಲ ಕಿಚ್ಚ ಸುದೀಪ್ ಬರ್ತಡೇ. ಇಲ್ಲಿಗೆ ಬಂದ್ರೆ ನೆಚ್ಚಿನ ನಟನನ್ನು 5 ಗಂಟೆಗಳ ಕಾಲ ಭೇಟಿ ಮಾಡಬಹುದು....
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು 50ನೇ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಹಾಫ್ ಸೆಂಚುರಿಯನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿದೆ. ಅಭಿಮಾನಿಗಳನ್ನು ಭೇಟಿ ಮಾಡಬೇಕು ಅವರನ್ನು ನೋಡಬೇಕು ಅವರೊಟ್ಟಿಗೆ ಸಮಯ ಕಳೆಯುವ ಸಲುವಾಗಿ ಈ ಪ್ಲಾನ್ ಮಾಡಲಾಗಿದೆ ಅಂತೆ.
ಸಾಮಾನ್ಯವಾಗಿ ಸ್ಟಾರ್ ನಟರು ಹುಟ್ಟುಹಬ್ಬದನ ದಿನ ಅಭಿಮಾನಿಗಳು ರಾತ್ರಿ 12 ಗಂಟೆಯಿಂದಲೇ ಮನೆ ಬಳಿ ಹೋಗುತ್ತಾರೆ. ರಾತ್ರಿ ಬೆಳಗ್ಗೆ ಬಿಸಿಲು ಮಳೆ ಲೆಕ್ಕ ಮಾಡದೆ ಕಾದು ಕೇಕ್ ಕಟ್ ಮಾಡಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ. ಅದೇ ರೀತಿ ಕಿಚ್ಚ ಸುದೀಪ್ ಕೂಡ ಆಚರಿಸಿಕೊಳ್ಳುತ್ತಿದ್ದರು ಆದರೆ ಈ ಸಲ ಹಾಫ್ ಸೆಂಚುರಿ ಆಗಿರುವ ಕಾರಣ ಅಭಿಮಾನಿಗಳು ವಿಶೇಷ ಪ್ಲಾನಿಂಗ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹೊಸಕೆರೆಹಳ್ಳಿ ಸಮೀಪದಲ್ಲಿರುವ ಪಿಇಎಸ್ ಕಾಲೇಜ್ ಸಮೀಪದಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ಸ್‌ನಲ್ಲಿ ಆಚರಿಸಲು ತೀರ್ಮಾನಿಸಿದ್ದಾರೆ.
ರೌಡಿಬೇಬಿ ಲುಕ್‌ನಲ್ಲಿ ಕಿಚ್ಚನ ಪುತ್ರಿ:ಸಾನ್ವಿ ಮಾಸ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ
'ಎಲ್ಲ ಅಭಿಮಾನಿ ಸ್ನೇಹಿತರಿಗೆ ನಮಸ್ಕಾರ. ಪ್ರತಿ ವರ್ಷ ಸೆಕ್ಟೆಂಬರ್ 2ರಂದು ನಮ್ಮ ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಅಣ್ಣ ಅವರ ಹುಟ್ಟುಹಬ್ಬವನ್ನು ಜೆಪಿ ನಗರದ ನಿವಾಸ ಮುಂದೆ ಆಚರಿಸುವುದು ವಾಡಿಕೆ ಆದರೆ ಜನಸಂದಣಿಯಿಂದ ಅಭಿಮಾನಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ಬಾರಿ ಸೆಪ್ಟೆಂಬರ್ 1ರ ರಾತ್ರಿಯಂದೇ ನೈಸ್ ರಸ್ತೆ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜ್ ಹತ್ತಿರ ಇರುವ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಅಣ್ಣ ಹುಟ್ಟುಹಬ್ಬವನ್ನು ಅಭಿಮಾನಿ ಸ್ನೇಹಿತರ ಜೊತೆ ವಿಶೇಷವಾಗಿ ಆಚರಿಸಲು ಅಣ್ಣ ಮನವಿ ಮಾಡಿ ಒಪ್ಪಿಸಿದ್ದೇವೆ. ಎಲ್ಲ ಅಭಿಮಾನಿಗಳು ಸೆಪ್ಟೆಂಬರ್ 1ರ ರಾತ್ರಿ 7ರಿಂದ 12ರವರೆಗೆ ನಂದಿ ಲಿಂಕ್ ಗ್ರೌಂಡ್ಸ್‌ಗೆ ಬರಲು ಮನವಿ. ಜೊತೆಗೆ ಸೆಪ್ಟೆಂಬರ್ 2ರಂದು ಅಣ್ಣನ ಮನೆ ಮುಂದೆ ಯಾವುದೇ ಆಚರಣೆ ಇರುವುದಿಲ್ಲ ಎಂದು ಈ ಮೂಲಕ ಮಾಹಿತಿ ನೀಡುತ್ತಿದ್ದೇವೆ' ಎಂದು ಪೋಸ್ಟರ್ ಮಾಡಿ ಅಭಿಮಾನಿಗಳು ಮಾಹಿತಿ ನೀಡುತ್ತಿದ್ದಾರೆ.
ಎದೆಯ ಮೇಲೆ ಪೋಷಕರು, ಸುದೀಪ್ ಹಚ್ಚೆ: ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!
