BBK9 ಪತ್ನಿಯನ್ನು ದೇವರ ರೀತಿ ನೋಡ್ತೀನಿ; ಕಾಲಿಗೆ ಬಿದ್ದ ರಾಜಣ್ಣ ಕಾಲೆಳೆದ ಕಿಚ್ಚ ಸುದೀಪ್

ಪತ್ನಿಯನ್ನು ಕಂಡ ಸಂಭ್ರಮದಲ್ಲಿ ರಾಜಣ್ಣ ಏನ್ ಮಾಡ್ತಿದ್ದಾರೆ ಎಂದು ಶಾಕ್ ಆದ ಬಿಬಿ ಸ್ಪರ್ಧಿಗಳು. ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್....

Kiccha Sudeep talks about Roopesh Rajanna special moment with wife bigg boss 9 vcs

ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 9 ಈಗ 72ನೇ ದಿನಕ್ಕೆ ಕಾಲಿಟ್ಟಿದೆ. ರೂಪೇಶ್ ರಾಜಣ್ಣ ಕ್ಯಾಪ್ಟನ್ಸಿಯಲ್ಲಿ ಬಿಬಿ ಮನೆ ನಡೆಯುತ್ತಿದ್ದು ಪ್ರತಿಯೊಬ್ಬರೂ ಖುಷಿಯಾಗಿದ್ದಾರೆ. ಈ ವಾರ ಮನೆಯಲ್ಲಿರುವ 11 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟು ಆತ್ಮೀಯವಾಗಿ ಮಾತನಾಡಿದ್ದಾರೆ. ರೂಪೇಶ್ ರಾಜಣ್ಣ ಪತ್ನಿ ಶ್ರೀಲಕ್ಷ್ಮಿ ಎಂಟ್ರಿ ಕೊಟ್ಟಾಗ ನಡೆದ ಘಟನೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ರೂಪೇಶ್ ರಾಜಣ್ಣ ವರ್ತನೆ ಟ್ರೋಲ್‌ಗೆ ಗುರಿಯಾಗಿತ್ತು.ಹೀಗಾಗಿ ವೀಕೆಂಡ್ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಕ್ಲಾರಿಟಿ ತೆಗೆದುಕೊಳ್ಳುತ್ತಾರೆ. 

ಸುದೀಪ್: ನನ್ನದೊಂದು ಪ್ರಶ್ನೆ ರಾಜಣ್ಣ ಅವರೇ. ನಿದ್ರೆ ಕಣ್ಣಿನಲ್ಲಿ ಹೋಗಿ ಹೆಂಡತಿ ಕಾಲಿಗೆ ಬಿದ್ರೋ ಅಥವಾ ಆಗಾಗ ಹೆಂಡತಿ ಕಾಲಿಗೆ ಬೀಳುತ್ತಿರಾ? 

ರಾಜಣ್ಣ: ಇಲ್ಲ ಸರ್ ಅವತ್ತು ನನಗೆ ಹೇಗೆ ಅನಿಸಿತ್ತು ಅಂದ್ರೆ ಇಡೀ ಮನೆ ಲೈಟ್ ಆಫ್ ಆಯ್ತು ಆಗ ಇಲ್ಲ ಬರೋಲ್ಲ ಅಂದುಕೊಂಡೆ ಎಲ್ಲರೂ ಬೆಳಗ್ಗೆ ಬರುತ್ತಾರೆ ಬಿಡಿ ಅಂದ್ರು. ಮಲಗುವುದಕ್ಕೆ ನಾನು ಹೋದೆ ಆಗ ಫುಲ್ ನಿದ್ರೆ ಬಂತು ಇವರೆಲ್ಲಾ ಬಂದು ಕರೆಯುತ್ತಿದ್ದರು..ಆಗ ತಾನೆ ಟಾಯ್ಲೆಟ್‌ ಕ್ಲೀನ್ ಮಾಡಿದ್ದೆ ಏನೋ ಸಮಸ್ಯೆ ಆಗಿದೆ ಬನ್ನಿ ಅಂದ್ರು. ಇಷ್ಟೊತ್ತರಲ್ಲಿ ಏನು ಟಾಯ್ಲೆಟ್ ಸಮಸ್ಯೆ ಅಂದುಕೊಂಡು ಎದ್ದು ಹೋದೆ. ನಿಜ ಹೇಳಬೇಕು ಅಂದ್ರೆ ಸರ್ ನನ್ನ ಮನೆಯವರನ್ನು ನಾನು ನಿಜಕ್ಕೂ ದೇವರ ರೀತಿಯಲ್ಲಿ ನೋಡುತ್ತೀನಿ ನನ್ನ ತಾಯಿ ರೀತಿ ನೋಡುತ್ತೀನಿ. ಬಿಗ್ ಬಾಸ್ ಮನೆಯಲ್ಲಿ ಅನೇಕ ಸಲ ಅನಿಸಿತ್ತು ಇಷ್ಟೊಂದು ಕೆಲಸ ಮಾಡುವ ನಾನು ಮನೆಯಲ್ಲಿ ಮಾಡಿಲ್ಲ ಇದೆಲ್ಲವೂ ನನ್ನ ಮನೆಯಲ್ಲಿ ಮಾಡಬೇಕು ಎಂದು ಆ ಕ್ಷಮಾಪಣ ಮನೋಭಾವದಿಂದ ಮತ್ತು ಅವರಲ್ಲಿ ಹೆಚ್ಚು ಪ್ರೀತಿಯನ್ನು ನೋಡಲು ಹೋಗಿ ನನ್ನ ಹೃದಯದಿಂದ ಅವರ ಕಾಲು ಮುಟ್ಟಿದೆ ಸರ್.

ಸುದೀಪ್: ಫಸ್ಟ್‌ ಟೈಂ ಹೀಗೆ ಮಾಡುತ್ತಿರುವುದು?

ರಾಜಣ್ಣ: ಹೌದು ಸರ್ ಮೊದಲ ಸಲ ಈ ರೀತಿ ಮಾಡುತ್ತಿರುವುದು. ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ. ಅಂದು ಏನಾಯ್ತು ಅಂತ ನನಗೆ ಗೊತ್ತಿಲ್ಲ ಆದರೆ  ಮಗು ರೀತಿ ಖುಷಿ ಪಟ್ಟಿರುವೆ.

BBK9: ಪೊಲೀಸ್ ಕಾನ್ಸ್ಟೇಬಲ್ ಜೇಬಿನಿಂದ 100 ರೂಪಾಯಿ ಕದ್ದ ರೂಪೇಶ್ ರಾಜಣ್ಣ; ಬಾಸುಂಡೆ ಬಿದ್ದ ಕಥೆ ಇದು.. 

ಏನಿದು ಘಟನೆ:

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ 40% ಆಯ್ಕೆ ಮಾಡಿ 20 ನಿಮಿಷ ಸಮಯ ಪಡೆದುಕೊಂಡರು. ಪತ್ನಿ ಬರ್ಲಿ ಬರ್ಲಿ ಅಂತ ದಿನವಿಡೀ ಕಾಯುತ್ತಿದ್ದರು ಯಾರೂ ಮನೆಯಿಂದ ಬರದ ಕಾರಣ ಹೋಗಿ ನಿದ್ರೆ ಮಾಡಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮುಖ್ಯ ದ್ವಾರದಿಂದ ರೂಪೇಶ್ ರಾಜಣ್ಣ ಪತ್ನಿ ... ಎಂಟ್ರಿ ಕೊಡುತ್ತಾರೆ.  ಶ್ರೀಲಕ್ಷ್ಮಿ ಅವರನ್ನು  ಸ್ವಾಗತಿಸಿಕೊಂಡ ಅಮೂಲ್ಯ ಮತ್ತು ರಾಕೇಶ್‌ ಮಾಸ್ಟರ್ ಪ್ಲ್ಯಾನ್ ಕ್ರಿಯೇಟ್ ಮಾಡುತ್ತಾರೆ.  ಕತ್ತಲೆಯ ಜಾಗದಲ್ಲಿ ಶ್ರೀಲಕ್ಷ್ಮಿ ಅವರನ್ನು ಕೂರಿಸಿ ರಾಜಣ್ಣ ಅವರಿಗೆ ಬಾತ್‌ರೂಮ್‌ ಕ್ಲಿನ್ ಮಾಡಿಲ್ಲ ದೊಡ್ಡ ಜಗಳ ನಡೆಯುತ್ತಿದೆ ಬನ್ನಿ ಎಂದು ಕರೆದುಕೊಂಡು ಹೋಗುತ್ತಾರೆ. ಆಗ ಅಲ್ಲಿ ಕುಳಿತಿದ್ದ ಪತ್ನಿಯನ್ನು ನೋಡಿ ರೂಪೇಶ್ ರಾಜಣ್ಣ ಶಾಕ್ ಆಗಿ ಇಡೀ ಮನೆ ಒಂದು ರೌಂಡ್ ಸುತ್ತುತ್ತಾರೆ ಅ ನಂತರ ಪತ್ನಿ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

BBK9 ಮುಖವಾಡ ಕಳಚಿಡಿ: ರೂಪೇಶ್ ರಾಜಣ್ಣ ಅಸಲಿ ಮುಖ ಬಿಚ್ಚಿಟ್ಟ ಸುದೀಪ್

'ಪ್ರೀತಿಯಿಂದ ತಮ್ಮ ಪತ್ನಿಗೆ ಏನ್ ಬೇಕಿದ್ದರೂ ಮಾಡಿಕೊಳ್ಳುತ್ತಾರೆ ನಿಮಗ್ಯಾಕೆ ಇದೆಲ್ಲಾ ಒಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಇದು ನಿಜವಾದ ಪ್ರೀತಿ ಮತ್ತು ಗೌರವ ಕೊಡುವ ಶೈಲಿ' ಎಂದಿದ್ದಾರೆ. ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿರುವುದು ಒಂದೇ ಕಾರಣಕ್ಕೆ ಅದುವೇ ಓವರ್ ಆಕ್ಟಿಂಗ್‌, 'ಅಲ್ಲ ರಾಜಣ್ಣ ಹೆಂಡ್ತಿ ಕಾಲಿಗೆ ನಮಸ್ಕಾರ ಮಾಡೋಷ್ಟು ಲವ್ ಇದ್ರೆ ದೀಪಿಕಾ ದಾಸ್ ಹಿಂದೆ ಯಾಕೆ ಹೋಗ್ತೀರಾ, ರಾಜಣ್ಣ ಇದೆಲ್ಲಾ ಓವರ್ ಆಯ್ತು ಹೆಂಡ್ತಿ ಕಾಲಿಗೆ ಬೀಳುವುದು ಇದರಿಂದ ಬೇರೆ ಅವರು ಡಿಮ್ಯಾಂಡ್ ಮಾಡುತ್ತಾರೆ' ಎಂದಿದ್ದಾರೆ.

Latest Videos
Follow Us:
Download App:
  • android
  • ios