Asianet Suvarna News Asianet Suvarna News

ಹುಬ್ಬಳ್ಳಿ,ಚಿತ್ರದುರ್ಗದಲ್ಲಿ Veda ಪ್ರೀ-ರಿಲೀಸ್ ಕಾರ್ಯಕ್ರಮ; ಕಿಚ್ಚ ಸುದೀಪ್, ಗಣೇಶ್, ಧ್ರುವ ಸರ್ಜಾ ಸ್ಪೆಷಲ್ ಗೆಸ್ಟ್‌

 ಭರ್ಜರಿಯಾಗಿ ನಡೆಯುತ್ತಿದೆ ವೇದ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮ. ಆಹ್ವಾನ್ ಪತ್ರಿಕೆ ಹೇಗಿದೆ ನೋಡಿದ್ದೀರಾ? 

Kiccha Sudeep special guest for Shivarajkumar Veda film pre release event vcs
Author
First Published Dec 13, 2022, 12:19 PM IST

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿರುವ 125ನೇ ಸಿನಿಮಾ ವೇದ ಡಿಸೆಂಬರ್ 23ರಂದು ಬಿಡುಗಡೆಗೆ ಸಜ್ಜಾಗಿದೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ವೇದ ಸಿನಿಮಾವನ್ನು  ಗೀತಾ ಪಿಕ್ಚರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎ ಹರ್ಷ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಟೈಟಲ್, ಮೋಷನ್ ಪೋಸ್ಟರ್, ಟೀಸರ್, ಟ್ರೈಲರ್ ಮತ್ತು ಹಾಡು ಸಖತ್ ವೈರಲ್ ಆಗುತ್ತಿದೆ. ಶಿವಣ್ಣ ಡಿಫರೆಂಟ್ ಆಗಿ ಕಾಣಿಸಿಕೊಂಡಿರುವ ಕಾರಣ ನಿರೀಕ್ಷೆ ಹೆಚ್ಚಿಸಿದೆ ಎನ್ನಬಹುದು. 

ಈಗಾಗಲೆ ಸಿನಿಮಾ ಪ್ರಮೋಷನ್ ಭರ್ಜರಿಯಾಗಿ ಆರಂಭವಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ್ಣದಲ್ಲಿ ಮೊದಲ ಕಾರ್ಯಕ್ರಮ ನಡೆದಿದೆ. ಡಿಸೆಂಬರ್ 10ರಂದು ಮಂಗಳೂರಿನ ಮಣಂಬೂರು ಬೀಚ್‌ನಲ್ಲಿ ಎರಡನೇ ಕಾರ್ಯಕ್ರಮ ನಡೆದಿದ್ದು ಮೂರನೇ ಕಾರ್ಯಕ್ರಮ ಡಿಸೆಂಬರ್ 14ರಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ನಾಲ್ಕನೇ ಕಾರ್ಯಕ್ರಮ ಡಿಸೆಂಬರ್ 15ರಂದು ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಒಟ್ಟು ನಾಲ್ಕು ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಗೀತಾ ಚಿತ್ರದಕ್ಕೆ ಕನ್ನಡ ಮೂವರು ಸ್ಟಾರ್ ನಟರು ಸಾಥ್ ಕೊಟ್ಟಿದ್ದಾರೆ. 

ಹೌದು! ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡಿಸೆಂಬರ್ 14ರಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿಲಿದ್ದಾರೆ. ಡಿಸೆಂಬರ್ 15ರಂದು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಪೆಷಲ್ ಗೆಸ್ಟ್‌. ಈ ಮೂಲಕ ವೇದ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ.

ಹೊಸ ಬ್ಯುಸಿನೆಸ್ ಶುರು ಮಾಡಿದ ಶಿವಣ್ಣ ಪತ್ನಿ-ಮಗಳು; ಪಾರ್ವತಮ್ಮ ಕನಸು ನನಸು ಮಾಡಿದ ಗೀತಾ ಶಿವರಾಜ್‌‌ಕುಮಾರ್‌

ಇತ್ತೀಚಿಗೆ ಶಿವಣ್ಣ ಮತ್ತು ಗೀತಕ್ಕೆ ಕಿಚ್ಚ ಸುದೀಪ್ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ, ಶಿವಣ್ಣ, ಗೀತಕ್ಕೆ ಮತ್ತು ಪ್ರಿಯಾ ಅವರು ಇಡುವ ಫೋಟೋ ವೈರಲ್ ಆಗುತ್ತಿದೆ. 

ಗೀತಾ ಪಿಕ್ಚರ್‌ ಲೋಗೋ ಅನಾವರಣ: 

ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌ ಅವರ ಹುಟ್ಟು ಹಬ್ಬ, ಗೀತಾ ಪಿಕ್ಚರ್ಸ್‌ ನಿರ್ಮಾಣ ಸಂಸ್ಥೆಯ ಲೋಗೋ ಅನಾವರಣ ಹಾಗೂ ಶಿವರಾಜ್‌ಕುಮಾರ್‌ ನಟನೆಯ, ಹರ್ಷ ನಿರ್ದೇಶನದ ‘ವೇದಾ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡಲಾಗಿತ್ತು. ಈ ಸಂಭ್ರಮಕ್ಕೆ ಚಿತ್ರರಂಗದ ಗಣ್ಯರು, ನಟ, ನಟಿಯರು ಸೇರಿದಂತೆ ಹಲವರು ಸಾಕ್ಷಿ ಆದರು. ಡಾ ರಾಜ್‌ಕುಮಾರ್‌ ಕುಟುಂಬದ ನಾಲ್ಕೂ ಜನರೇಷನ್‌ ಹಾಜರಿದ್ದಿದ್ದು ಹೈಲೈಟ್‌.ಈ ಸಂಭ್ರಮದ ನಡುವೆ ಮಾತಿಗೆ ನಿಂತರು ಗೀತಾ ಶಿವರಾಜ್‌ಕುಮಾರ್‌. ‘ಶಿವರಾಜ್‌ ಕುಮಾರ್‌ ಹಿಂದಿನ ಶಕ್ತಿ ನಾನು ಅಂತಾರೆ. ಅವರ ಹಿಂದಿನ ನಿಜವಾದ ಶಕ್ತಿಗಳು ಅಭಿಮಾನಿಗಳು. ಜತೆಗೆ ರಾಘು, ಅಪ್ಪು, ಅಪ್ಪಾಜಿ ಹಾಗೂ ಅಮ್ಮ. ಹೀಗೆ ಇಡೀ ಕುಟುಂಬವೇ ಶಿವರಾಜ್‌ ಕುಮಾರ್‌ ಹಿಂದೆ ನಿಂತಿದೆ. ಹೀಗಾಗಿ ಅವರ ಯಶಸ್ಸಿನ ಹಿಂದಿನ ಶಕ್ತಿ ನಾನು ಒಬ್ಬಳೇ ಅಲ್ಲ. ನಾನು ನಿರ್ಮಾಣ ಸಂಸ್ಥೆ ಮಾಡಬೇಕು ಎಂದುಕೊಂಡಾಗ ಸಾಕಷ್ಟುಕಲಿಯುವ ಪ್ರಯತ್ನ ಮಾಡಿದೆ. ಶೂಟಿಂಗ್‌ ಸೆಟ್‌ನಲ್ಲಿ ನಿರ್ದೇಶಕ ಹರ್ಷ ತುಂಬಾ ಹೇಳಿಕೊಡುತ್ತಿದ್ದರು. ಎಲ್ಲರಿಗೂ ಇಷ್ಟಆಗುವಂತಹ ಒಳ್ಳೆಯ ಸಿನಿಮಾಗಳು ಮಾಡಬೇಕು ಎಂಬುದು ಆಸೆ’ ಎಂದು ಗೀತಾ ಶಿವರಾಜ್‌ಕುಮಾರ್‌ ಹೇಳಿಕೊಂಡರು.

Follow Us:
Download App:
  • android
  • ios