ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಫ್ಯಾಂಟಮ್ ಚಿತ್ರ ದಿನೆ ದಿನೇ  ಕುತೂಹಲ ಹೆಚ್ಚಿಸುತ್ತಿದೆ. ಹೈದಾಬಾದ್‌ನಲ್ಲಿ ಚಿತ್ರೀಕರಣ ಮುಗಿಸಿ, ಕರ್ನಾಟಕಕ್ಕೆ ಹಿಂದಿರುಗಿರುವ ಸುದೀಪ್‌ ವರ್ಕೌಟ್ ಮಾಡಲು ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡು ಹೊಸ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. 

ಜನವರಿ 3ನೇ ವಾರದಿಂದ ‘ಬಿಗ್‌ ಬಾಸ್‌’ ಸೀಸನ್‌-8, ಮನೆಯೊಳಗೆ ಯಾರ್ಯಾರು..?

ಕಿಚ್ಚ ಪೋಸ್ಟ್:
'ಒಳ್ಳೆಯ ಆಹಾರ, ಡೀಸೆಂಟ್ ಲೈಫ್‌ಸ್ಟೈಲ್ ಹಾಗೂ ಸ್ವಲ್ಪ ಡಿಸಿಪ್ಲಿನ್. ಇದನ್ನೆಲ್ಲಾ ಪಾಲಿಸುವುದು ತಪ್ಪೇನಲ್ಲ. ಲಾಂಗ್ ಗ್ಯಾಪ್ ನಂತರ ವರ್ಕೌಟ್ ಶುರು ಮಾಡಿರುವೆ. ಫ್ಯಾಂಟಮ್ ಕ್ಲೈಮ್ಯಾಕ್ಸ್‌ ಚಿತ್ರೀಕರಣ. ಲಾಸ್ಟ್‌ ಶೆಡ್ಯೂಲ್‌ ಇದೇ ಡಿಸೆಂಬರ್ 4ಕ್ಕಿದೆ.' ಎಂದು ಬರೆದುಕೊಂಡಿದ್ದಾರೆ.

 

ಸೋಷಿಯಲ್ ಮೀಡಿಯಾದಲ್ಲಿ ಫ್ಯಾಂಟಮ್ ಸಿನಿಮಾ ಬಗ್ಗೆ ಅಪ್ಡೇಟ್‌ ನೀಡುತ್ತಿದ್ದ ಕಿಚ್ಚ ಸುದೀಪ್ ಸಿನಿಮಾದ ಕೆಲವೊಂದು ಪೋಟೋಗಳನ್ನು ಶೇರ್ ಮಾಡುತ್ತಿದ್ದರು. ಆದರೀಗ ಬ್ಯುಲ್ಡ್‌ ಮಾಡಿರುವ ಬಾಡಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಹಿಂದೆ ಪೈಲ್ವಾನ್ ಸಿನಿಮಾಗಾಗಿ ಈ ರೀತಿ ತಯಾರಿ ಮಾಡಿಕೊಳ್ಳುತ್ತಿದ್ದರು. 

ಮೇಘನಾ ರಾಜ್‌ ಪುತ್ರನಿಗೆ ಕಿಚ್ಚ ಸುದೀಪ್‌ ಕೊಟ್ಟ ಸ್ಪೇಷಲ್ ಗಿಫ್ಟ್! 

ಲಾಸ್ಟ್‌ ಶೆಡ್ಯೂಲ್‌ಗೆ ಬೆಂಗಳೂರಿನಲ್ಲೇ ಸೆಟ್‌ ಹಾಕುವುದಾಗಿ ಅನೂಪ್ ಭಂಡಾರಿ ನಿರ್ಧರಿಸಿದ್ದಾರೆ. ಲಾಸ್ಟ್ ಶೆಡ್ಯೂಲ್ ಮುಗಿಸಿ ಆನಂತರ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳನ್ನು ಪ್ರಾರಂಭಿಸಲಿದ್ದಾರೆ. 2021ರ ಸಂಕ್ರಾಂತಿ ಹಬ್ಬಕ್ಕೆ ಕಿಚ್ಚನ ಕೋಟಿಗೊಬ್ಬ-3 ರಿಲೀಸ್ ಆಗಲಿದ್ದು, ಏಪ್ರಿಲ್‌ನಲ್ಲಿ ಫ್ಯಾಂಟಮ್‌ ತೆರೆ ಮುಟ್ಟಲಿದೆ ಎನ್ನಲಾಗಿದೆ.