ಕೊರೋನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನ 8ನೇ ಆವೃತ್ತಿ ಜನವರಿ ಮೂರನೇ ವಾರದಲ್ಲಿ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಾರಿ 16 ಮಂದಿ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ನಟ ‘ಕಿಚ್ಚ’ ಸುದೀಪ್‌ ಅವರೇ ನಿರೂಪಣೆ ಮಾಡಲಿದ್ದಾರೆ.

ಈ ಕುರಿತು ಮಾತನಾಡಿದ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘ಈಗಿನ್ನೂ ಆರಂಭಿಕ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ 16 ಮಂದಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಎಂದಿನಂತೆ 100 ದಿನಗಳ ಕಾಲ ಬಿಗ್‌ ಬಾಸ್‌ ಟಾಸ್ಕ್‌ ಇರುತ್ತದೆ. ಇನ್ನುಳಿದ ವಿವರಗಳನ್ನು ಶೀಘ್ರದಲ್ಲಿ ನೀಡುತ್ತೇವೆ’ ಎಂದರು.

ಗುಜರಾತಿನ ಮುಸ್ಲಿಂ ಧರ್ಮ ಗುರುವನ್ನು ವರಿಸಿದ ಬಿಗ್ ಬಾಸ್ ಬ್ಯೂಟಿ

ಬೆಂಗಳೂರು ಹೊರವಲಯದ ಬಿಡದಿಯಲ್ಲಿ ಬಿಗ್‌ ಬಾಸ್‌ ಮನೆ ಮರು ನಿರ್ಮಾಣಗೊಳ್ಳುತ್ತಿದೆ. ಕ್ಯಾಮರಾ ಜೋಡಣೆ, ಇನ್ನಿತರ ತಾಂತ್ರಿಕ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಡಿಸೆಂಬರ್‌ ಕೊನೆಗೆ ಈ ಕೆಲಸಗಳೆಲ್ಲ ಮುಗಿಯಲಿದೆ.

ಜನವರಿ ಮೂರನೇ ವಾರದಲ್ಲಿ ಸಂಕ್ರಾಂತಿ ಹಬ್ಬದ ಬಳಿಕ ಬಿಗ್‌ ಬಾಸ್‌ ಸೀಸನ್‌ 8 ಶುಭಾರಂಭಗೊಳ್ಳಲಿದೆ. ​​​ಕೋವಿಡ್‌ ಸಂಬಂಧಿ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಈ ಬಾರಿಯ ಬಿಗ್‌ ಬಾಸ್‌ ಕಾರ್ಯಕ್ರಮ ನಡೆಯಲಿದೆ. ಹಿಂದಿ ಬಿಗ್‌ಬಾಸ್ ಈಗಾಗಲೇ ಆರಂಭವಾಗಿದ್ದು, ಒಬ್ಬರು ಜಾನ್ ಕುಮಾರ್ ಈಗಾಗಲೇ ಮನೆಯಿಂದ ಹೊರ ಬಂದಾಗಿದೆ.