Asianet Suvarna News Asianet Suvarna News

ಜಯರಾಮ್ ಕಾರ್ತಿಕ್ 'ಕಾಡ' ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್!

ಜೆಕೆ ಹೊಸ ಚಿತ್ರದ ಶೀರ್ಷಿಕೆ 'ಕಾಡ'. ಪೊಸ್ಟರ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಕೋರಿದ ಸುದೀಪ್‌.
 

Kiccha Sudeep reveals Jayaram Karthi kaada title poster vcs
Author
Bangalore, First Published Aug 28, 2021, 1:05 PM IST

ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ಜನಪ್ರಿಯ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಹೊಸ ಚಿತ್ರಕ್ಕೆ ಸಿಹಿ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. 

ವಿಶೃತ್‌ ನಾಯಕ್ ನಿರ್ದೇಶನದ 'ಕಾಡ' ಚಿತ್ರದ ಟೈಟಲ್‌ ಪೋಸ್ಟರನ್ನು ಟ್ವಿಟ್ಟರ್‌ನಲ್ಲಿ ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ಕ್ರೈಮ್‌ ಥ್ರಿಲ್ಲರ್‌ ಕತೆ ಇದು. ಸರಿ, ತಪ್ಪುಗಳಿಗೆ ಗೌರವ ತೋರದೆ, ಬೇರೆಯವರ ಹಕ್ಕು ಮತ್ತು ಭಾವನೆಗಳನ್ನು ಕಡೆಗಣಿಸುವ ಮನಸ್ಥಿತಿ ಹೊಂದಿರುವ ವ್ಯಕ್ತಿಯ ಕತೆ ಇದಾಗಿದ್ದು,  'ಪೋಸ್ಟರ್ ಅದ್ಭುತವಾಗಿದೆ. ಮಿಸ್ಟರ್ Evil ಹಾಗೂ ಇಡೀ ತಂಡಕ್ಕೆ ಶುಭವಾಗಲಿ,' ಎಂದು ಸುದೀಪ್ ಬರೆದುಕೊಂಡಿದ್ದಾರೆ.

ತಾಪ್ಸಿ ಪನ್ನು ಹಿಂದಿ ಸಿನಿಮಾದಲ್ಲಿ ಕನ್ನಡದ ನಟ ಕಾರ್ತಿಕ್ ಜಯರಾಮ್!

ಕಾಡ ಚಿತ್ರದಲ್ಲಿ ಜೆಕೆಗೆ ಜೋಡಿಯಾಗಿ ಕಾವ್ಯಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಶನಿವಾರದಿಂದ ಚಿಕ್ಕಮಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲಾಗುತ್ತದೆ.  ಚಿತ್ರದಲ್ಲಿ ಅಚ್ಯುತ್ ಕುಮಾರ್ ಹಾಗೂ ಉಗ್ರಂ ಮಂಜು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಂದು ಸಂಗೀತ ನಿರ್ದೇಶನ ಮಾಡಿದರೆ, ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.

 

Follow Us:
Download App:
  • android
  • ios