ಕನ್ನಡ್ ಅಲ್ಲ.., ಭಾಷೆ ಬಿಡಿ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ; ಹಿಂದಿ ಮಂದಿಗೆ ಕಿಚ್ಚನ ಕ್ಲಾಸ್

ಹಿಂದಿ ಸಂದರ್ಶನವೊಂದರಲ್ಲಿ ನಿರೂಪಕಿ ‘ಕನ್ನಡ್’ ಎಂದು ಹೇಳಿದ ತಕ್ಷಣ ಅದು ಕನ್ನಡ್ ಅಲ್ಲ ಕನ್ನಡ ಎಂದು ಸುದೀಪ್ ತಿದ್ದಿದ್ದಾರೆ. ಸುದೀಪ್ ನಿರೂಪಕಿಗೆ ಹೇಳಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Not Kannad It is Kannada says Kichcha Sudeep in Hindi interview of  Vikrant Rona video viral sgk

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿದೆ. ದೇಶದಾದ್ಯಂತ ಸಿನಿಮಾ ಅಬ್ಬರಿಸುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೇರೆ ಬೇರೆ ಭಾಷೆಯ ಅಭಿಮಾನಿಗಳು ವಿಕ್ರಾಂತ್ ರೋಣನನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಪ್ಯಾನ್ ಇಂಡಿಯಾ ಹೀರೋ ಆಗಿ ಕಿಚ್ಚ ಸುದೀಪ್ ಅವರು ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರ ಜನಪ್ರಿಯತೆ ಹೆಚ್ಚಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸುದೀಪ್ ದೇಶದಾದ್ಯಂತ ಓಡಾಡಿದ್ದಾರೆ. ಈ ವೇಳೆ ಸುದೀಪ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಹಿಂದಿಯ ಹಲವು ಮಾಧ್ಯಮಗಳು ಕಿಚ್ಚನ ಸಂದರ್ಶನ ನಡೆಸಿವೆ. ಸಂದರ್ಶನದಲ್ಲಿ ನಿರೂಪಕಿ ‘ಕನ್ನಡ್’ ಎಂದು ಹೇಳಿದ ತಕ್ಷಣ ಅದು ಕನ್ನಡ್ ಅಲ್ಲ ಕನ್ನಡ ಎಂದು ತಿದ್ದಿದ್ದಾರೆ. ಸುದೀಪ್ ನಿರೂಪಕಿಗೆ ಹೇಳಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಭಾಷಾಭಿಮಾನದ ವಿಷಯದಲ್ಲಿ ಕಿಚ್ಚ ಸುದೀಪ್ ಸದಾ ಮುಂದಿರುತ್ತಾರೆ. ಯಾವುದೇ ವೇದಿಕೆಯಲ್ಲಾದರು ಸರಿ ಆ ಬಗ್ಗೆ ಧ್ವನಿ ಎತ್ತಲು ಹಿಂದೇಟು ಹಾಕುವುದಿಲ್ಲ. ಉತ್ತರ ಭಾರತದ ಮಂದಿ ಮೊದಲಿನಿಂದಲೂ ಕನ್ನಡವನ್ನು ‘ಕನ್ನಡ್’ ಎಂದೇ ಹೇಳುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಇದನ್ನು ಸುದೀಪ್ ಸಹ ಸಹಿಸಲ್ಲ. ಕನ್ನಡದ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರೂ ಸಹ ಅಲ್ಲೇ ಸರಿಯಾದ ತಿರುಗೇಟು ನೀಡಿ ಅವರನ್ನು ತಿದ್ದುದ್ದಾರೆ. ಈ ರೀತಿಯ ಘಟನೆ ಅನೇಕ ಬಾರಿ ನಡೆದಿದೆ. ಇದೀಗ ಹಿಂದಿ ಸಂದರ್ಶನವೊಂದರಲ್ಲಿ ಕಿಚ್ಚನ ಕನ್ನಡ ಪ್ರೀತಿಗೆ ಮತ್ತೊಮ್ಮೆ ಶಭಾಷ್‌ಗಿರಿ ವ್ಯಕ್ತವಾಗುತ್ತಿದೆ. 

ಕನ್ನಡ್ ಅಲ್ಲ ಕನ್ನಡ....ಹಿಂದಿವಾಲನನ್ನು ತಿದ್ದಿದ ಸುದೀಪ್; ವಿಡಿಯೋ ವೈರಲ್

ನಿರೂಪಕಿ ‘ಕನ್ನಡ್’ ಎಂದಾಗ ‘ಅದು ಕನ್ನಡ್ ಅಲ್ಲ ಕನ್ನಡ’ ಎಂದು ಸುದೀಪ್ ತಿದ್ದಿದ್ದಾರೆ. ಆ ನಿರೂಪಕಿ ‘ಕ್ಷಮಿಸಿ ಸರ್’ ಎಂದು ಕ್ಷಮೆ ಕೇಳಿದರು ಆದರು ತನ್ನ  ಮಾತನ್ನು ಸಮರ್ಥಿಸಿಕೊಳ್ಳಲು ಮುಂದಾದರು. ‘ನಾವು ಈಗ ತಾನೇ ಕಲಿಯುತ್ತಿದ್ದೇವೆ ಸರ್’ ಎಂದು ನಿರೂಪಕಿ ಹೇಳಿದರು. ಇದಕ್ಕೆ ಖಡಕ್ ಉತ್ತರ ಕೊಟ್ಟ ಸುದೀಪ್, ‘ಹಿಂದಿ ಎಂದಿಗೂ ಹಿಂದ್ ಆಗುವುದಿಲ್ಲ. ಅದೇ ರೀತಿ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ. ನೀವು ತಮಿಳು, ತೆಲುಗು ಎಲ್ಲವನ್ನೂ ಸರಿಯಾಗಿ ಹೇಳಿತ್ತೀರಿ. ಕನ್ನಡದ ವಿಚಾರ ಬಂದಾಗ ಕನ್ನಡ್ ಎನ್ನುತ್ತೀರಿ. ಭಾಷೆ ಬಿಟ್ಟುಬಿಡಿ, ಕೊನೇ ಪಕ್ಷ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ’ ಎಂದು ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಟೋ ಮೇಲೆ ಬರೆದಿದ್ದ ಸಾಲು ಕಂಡು ಕರಗಿದ ಸುದೀಪ್, ಮಾಡಿದ್ದೇನು ನೋಡಿ

ಕಿಚ್ಚ ಸುದೀಪ್ ಯಾವುದೇ ಮುಲಾಜಿಲ್ಲದೇ ಆ ನಿರೂಪಕಿಗೆ ಅದೇ ಸ್ಥಳದಲ್ಲೇ ಖಡಕ್ ಉತ್ತರ ನೀಡಿದ ಪರಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸುದೀಪ್ ಸಂದರ್ಶನದ ತುಣುಕನ್ನು ಕನ್ನಡ ಅಭಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ತಮ್ಮ ಪಾಟ್ಸಪ್ ಸ್ಟೇಟಸ್ ಗಳಲ್ಲಿ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಂದಹಾಗೆ ಇದೇ ಸಂದರ್ಭ ಈ ಮೊದಲು ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲೂ ನಡೆದಿತ್ತು.

ಸುದೀಪ್ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿ ಕನ್ನಡವನ್ನು ಕನ್ನಡ್...ಕನ್ನಡ್ ಎನ್ನುವುದನ್ನು ಗಮನಿಸಿದ ಕಿಚ್ಚ ಅದು ಕನ್ನಡ ಎಂದು ಹೇಳಿಕೊಟ್ಟರು. ಹಿಂದಿವಾಲನನ್ನು ತಿದ್ದಿದ ಕಿಚ್ಚನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದೀಗ ಉತ್ತರ ಭಾರತದಲ್ಲೇ ಕುಳಿತು ಅಲ್ಲೇ ಕನ್ನಡ ಹೇಳಿಕೊಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 
 

Latest Videos
Follow Us:
Download App:
  • android
  • ios