ಆಂಕರ್ ಅನುಶ್ರೀ ಚಾನೆಲ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಇಂಟರ್ವ್ಯೂ ನೀಡಿದ್ದು, ಈ ಸಂದರ್ಭದಲ್ಲಿ ನಟ ತಮ್ಮ ಮೊದಲ ಕೆಲಸ, ಇಷ್ಟಪಡದ ಆಹಾರದ ಬಗ್ಗೆ ರಿವೀಲ್ ಮಾಡಿದ್ದಾರೆ.  

ಮ್ಯಾಕ್ಸ್ ಸಿನಿಮಾ (MAX Film( ಮೂಲಕ ಥಿಯೇಟರ್ ಗಳಲ್ಲಿ ಅಬ್ಬರಿಸುತ್ತಿರುವ ನಟ ಕಿಚ್ಚ ಸುದೀಪ್ (Kiccha Sudeep), ಇತ್ತೀಚೆಗಷ್ಟೇ ಆಂಕರ್ ಅನುಶ್ರೀ ಚಾನೆಲ್ ನಲ್ಲಿ ಮೊದಲ ಬಾರಿ ಇಂಟರ್ವ್ಯೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಅನುಶ್ರೀ ಕೇಳಿದಂತಹ ಕೆಲವೊಂದು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದ್ದು, ಈ ವಿಡೀಯೋದಲ್ಲಿ ಕಿಚ್ಚ ಸುದೀಪ್ ಕುರಿತು ಯಾರಿಗೂ ಗೊತ್ತಿರದ ಒಂದಷ್ಟು ವಿಷ್ಯಗಳೂ ಸಹ ರಿವೀಲ್ ಆಗಿವೆ. ಅನುಶ್ರೀ ಕೇಳಿದ ಪ್ರಶ್ನೆಗಳಿಗೆ ಸುದೀಪ್ ಉತ್ತರ ಹೀಗಿತ್ತು ನೋಡಿ… 

ಖ್ಯಾತ ನಟಿಯೊಂದಿಗೆ 2ನೇ ಮದುವೆಯ ಕಥೆ ಬಿಚ್ಚಿಟ್ಟ ಕಿಚ್ಚ ಸುದೀಪ್!

ಮಿನಿಮಮ್ ರೀಟೇಕ್ಸ್, ಫೈಟಿಂಗ್ ಸೀಕ್ವೆನ್ಸ್ ಅಥವಾ ಡೈಲಾಗ್ ಡೆಲಿವರಿ
ಸುದೀಪ್ : ಫೈಟ್ (fighting)

ಹೊಸ ಡೈರೆಕ್ಟರ್ ಜೊತೆ ಕೆಲಸ ಮಾಡೋಕೆ ಇಷ್ಟಾನ? ಅಥವಾ ದೊಡ್ಡ ಡೈರೆಕ್ಟರ್ ಜೊತೆನಾ? 
ಸುದೀಪ್ : ದೊಡ್ಡ ಡೈರೆಕ್ಟರ್ ಜೊತೆ ಕೆಲಸ 

ನೀವು ಮಾರ್ನಿಂಗ್ ಪರ್ಸನ್ ಅಥವಾ ನೈಟ್ ಪರ್ಸನ್ (night person)? 
ಸುದೀಪ್ : ಎರಡೂ ಕೂಡ ಹೌದು. 

ರೊಮಾನ್ಸ್ ಸೀನ್​ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್​ ಓಪನ್​ ಮಾತು!

ಯಾವ ಸಲಹೆಯನ್ನು ನೀವು ಯಾವಾಗಲೂ ಫಾಲೋ ಮಾಡ್ತೀರಿ ?
ಸುದೀಪ್ :
ಅಡ್ವೈಸ್ ಮಾಡೋದೆ ಇಲ್ಲ

ಯಾವ ಆಹಾರವನ್ನು ನೀವು ಯಾವತ್ತೂ ಟ್ರೈ ಮಾಡೋದೇ ಇಲ್ಲ? 
ಸುದೀಪ್ :
ಅವಿಯಲ್ (Avial). ಇಡೀ ಮಾರ್ಕೆಟ್ ಅದರಲ್ಲಿರುತ್ತೆ. ಮೊದಲು ಎಲ್ಲಾ ಕಡೆ ಅವಿಯಲ್ ಬಗ್ಗೆ ಕೇಳಿದಾಗ , ಮನೆಯಲ್ಲಿ ಅವಿಯಲ್ ಬಗ್ಗೆ ಬಿಲ್ಡಪ್ ಕೊಟ್ಟಾಗ ಏನಪ್ಪಾ ಇದು ಅಂತ ಅಂದುಕೊಂಡು, ಒಂದು ಸಲ ಪ್ರಿಯಾ ಮನೆ ಕಡೆ ಹೋದಾಗ ತಿಂದಿದ್ದೆ. ಆಮೇಲೆ ತಿಂದಿಲ್ಲ. ನನಗೆ ಒಳ್ಳೆ ಆಹಾರ ಇಷ್ಟ ಆಗೋದೆ ಇಲ್ಲ.

ಆ್ಯಂಕರ್​ ಅನುಶ್ರೀ ಜೊತೆ ಕಿಚ್ಚ ಸುದೀಪ್! ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು...

ಹುಟ್ಟಿದ್ದು ಶಿವಮೊಗ್ಗ , ಓದಿದ್ದು ಬೆಂಗಳೂರು… ಇವೆರಡರಲ್ಲಿ ಯಾವುದಾದ್ರು ಒಂದಲ್ಲ ಆಯ್ಕೆ ಮಾಡೋದಾದ್ರೆ ಯಾವುದನ್ನು ಮಾಡುತ್ತೀರಿ? 
ಸುದೀಪ್ : ಅಮ್ಮ ಮತ್ತು ಅಪ್ಪ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡು ಅಂದ್ರೆ, ಯಾವುದನ್ನ ಆಯ್ಕೆ ಮಾಡಲಿ? 

ಫೋನ್ ಇಲ್ಲದೇ ಒಂದು ದಿನ ಅಥವಾ ಆರೋಗ್ಯಯುತ ಆಹಾರ ಇಲ್ಲದೇ (No healthy food) ಒಂದು ದಿನ ನಿಮ್ಮ ಆಯ್ಕೆ ಯಾವುದು?
ಸುದೀಪ್ : ಫೋನ್ ಇಲ್ಲದೇ ಒಂದು ದಿನ. 

ನೀವು ಮಾಡಿದ ಮೊದಲ ಕೆಲಸ ಯಾವುದು ನೆನಪಿದೆಯಾ? 
ಸುದೀಪ್ : ಸೇಲ್ಸ್ ಮ್ಯಾನ್ (Salesman) ಕೆಲಸ. ಹೌದು, ವಾರಾಂತ್ಯದಲ್ಲಿ ಒಂದು ವೇರ್ ಹೌಸಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿದ್ದೆ. 

ನಿಮಗೆ ಯಾವ ರೀತಿ ಗುರುತಿಸಿಕೊಳ್ಳೋಕೆ ಇಷ್ಟ? ಅವಾರ್ಡ್ ಗಳ ಮೂಲಕ ಅಥವಾ ವೀಕ್ಷಕರ ಮೆಚ್ಚುಗೆ? 
ಸುದೀಪ್ : ವೀಕ್ಷಕರ ಮೆಚ್ಚುಗೆ. 

ಡಾ ರಾಜ್‌ ಫ್ಯಾಮಿಲಿ ಹ್ಯಾಂಡಲ್‌ ಮಾಡೋದು ಕಲಿತಿದ್ದಾರೆ ಸುದೀಪ್ ಅಂದಿದ್ಯಾರು?

ನೀವು ಕೆಲಸ ಮತ್ತು ಫ್ಯಾಮಿಲಿ ಇವೆರಡನ್ನು ಹೇಗೆ ಮ್ಯಾನೇಜ್ ಮಾಡ್ತೀರಿ? 
ಸುದೀಪ್ : Be there, ಎರಡೂ ಕಡೆಗಳಲ್ಲಿ ಇದ್ರೆ ಆಯ್ತು ಅಷ್ಟೇ. 

ನಿಮ್ಮ ಬಳಿ ಈಗ ಇರುವಂತಹ ಅತ್ಯಂತ ಎಕ್ಸ್’ಪೆನ್ಸಿವ್ ವಸ್ತು ಯಾವುದು? 
ಸುದೀಪ್ :
ನಾನೇ ಅಮೂಲ್ಯ, ಮತ್ತೆಲ್ಲದಕ್ಕೂ ಒಂದೊಂದು ಬೆಲೆ ಇದೆ. ನನಗೆ ಬೆಲೆ ಕಟ್ಟೋಕೆ ಆಗಲ್ಲ ಎಂದು ನಕ್ಕ ಕಿಚ್ಚ ಸುದೀಪ್.


View post on Instagram