Asianet Suvarna News Asianet Suvarna News

ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವೇ!; 'ಕಾಟೇರ' ಚಿತ್ರದ ಬಗ್ಗೆ ಸುದೀಪ್ ಗೊಂದಲದ ಹೇಳಿಕೆ!

ಹಾಗಾದ್ರೆ ಕಿಚ್ಚ 'ಕಾಟೇರ' ಸಿನಿಮಾ ನೋಡಿಲ್ವಾ? ದಚ್ಚು ಸಿನಿಮಾ ನೋಡಿದ್ರಾ? ಸುದೀಪ್ ಟ್ವೀಟ್‌ನಿಂCದ ನೆಟ್ಟಿಗರು ಕನ್‌ಫ್ಯೂಸ್....

Kiccha Sudeep reacts to Netizens question tweets about Kaatera film vcs
Author
First Published Jan 17, 2024, 3:06 PM IST | Last Updated Jan 17, 2024, 3:06 PM IST

ಕಿಚ್ಚ ಸುದೀಪ್, ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ನೋಡಿದ್ದಾರೆಯೇ?

ಈ ಪ್ರಶ್ನೆಗೆ ಖುದ್ದು ಸುದೀಪ್ ಉತ್ತರ ನೀಡಿದ್ದಾರೆ. ‘ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವಲ್ಲ’ ಎಂದು ಹೇಳಿದ್ದಾರೆ. ಆ ಮೂಲಕ ತಾನು ಕಾಟೇರ ಸಿನಿಮಾ ನೋಡಿದ್ದೇನೆ ಎಂಬ ಸಂದೇಶ ತಿಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ.

ದುಬೈ ಹುಲಿ-ಹೆಬ್ಬಾವು ಜೊತೆ ನಟ ದರ್ಶನ್; ಪೋಟೋ ವೈರಲ್

ಸುದೀಪ್‌ ಎಕ್ಸ್‌ (ಟ್ವಿಟರ್‌) ನಲ್ಲಿ ಅಭಿಮಾನಿಗಳ ಜೊಸೆ ಸಂವಾದ ನಡೆಸಿದ ವೇಳೆ ‘ಕಾಟೇರ ಯಾವಾಗ ನೋಡ್ತೀರ ಸರ್‌?’ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಸುದೀಪ್‌, ‘Hasn’t Anyone Told You I Haven’t Already’ ಎಂದು ಗೊಂದಲದ ಹೇಳಿಕೆ ನೀಡಿದರು.

ಭಯ-ಭಕ್ತಿಯಿಂದ ಸಂಭಾಷಣೆ ಬರೆದ ಸಿನಿಮಾ ಕಾಟೇರ: ಮಾಸ್ತಿ ಜೊತೆ ಮಾತುಕತೆ

‘ನಾನು ಕಾಟೇರ ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವಲ್ಲ’ ಎಂದು ಸುದೀಪ್ ಹೇಳಿದ್ದಾರೆ ಎಂದು ಬಹುತೇಕರು ಅರ್ಥೈಸಿಕೊಂಡಿದ್ದಾರೆ. ಇನ್ನೂ ಕೆಲವರು, ‘ಸುದೀಪ್‌ ಬೇಕೆಂದೇ ಜನರ ತಲೆಗೆ ಹುಳ ಬಿಟ್ಟಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸಂವಾದದಲ್ಲಿ ಸುದೀಪ್ ‘ಮ್ಯಾಕ್ಸ್‌’ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣ ಪೂರ್ಣಗೊಂಡ ಮೇಲೆ ಆ ಸಿನಿಮಾ ಕುರಿತು ಮಾತನಾಡುವುದಾಗಿ ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios