ಬೆಂಗಳೂರು (ಮಾ. 08): ಸುಮಲತಾ‌ ರಾಜಕೀಯ ಎಂಟ್ರಿ‌ ಬಗ್ಗೆ ಕಿಚ್ಚ‌ ಸುದೀಪ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ರ‍್ಯಾಪಿಡ್ ರಶ್ಮಿ ರ‍್ಯಾಪ್ ಸಾಂಗ್ ‘ಇಂಡಿಪೆಂಡೆಂಟೋ’!

ದರ್ಶನ್ ಇರುವಾಗ‌ ಅಲ್ಲಿ ನಾನ್ಯಾಕೆ ?ಎಂದು ಸುದೀಪ್ ಹೇಳಿದ್ದಾರೆ. ಕ್ಯಾಂಪೆನ್ ವಿಚಾರವಾಗಿ ನನಗೆ ಯಾರಿಂದಲೂ ಬುಲಾವ್ ಬಂದಿಲ್ಲ.   ಬಂದರೆ ನಿಮಗೆ ಮೊದಲು ಹೇಳುತ್ತೇನೆ. ನಾನು ರಾಜಕೀಯದಿಂದ ತುಂಬಾ ದೂರ. ಸಾಕಷ್ಟು ನಿರ್ಮಾಪಕರು ನನ್ನ ನಂಬಿ ಹಣ ಹಾಕಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಬ್ಯುಸಿ ಎಂದು ಸುದೀಪ್ ಹೇಳಿದ್ದಾರೆ. 

ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್

ಮಂಡ್ಯದಿಂದ ಸುಮಲತಾ ಸ್ಪರ್ಧೆ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಶುರುವಾಗಿತ್ತು. ಅಂಬಿ ಕುಟುಂಬಕ್ಕೆ ಆಪ್ತರಾಗಿರುವ ದರ್ಶನ್ ಸುಮಲತಾ ಪರ ಪ್ರಚಾರ ಮಾಡುವುದು ಪಕ್ಕಾ ಆಗಿತ್ತು. ಸ್ವತಃ ದರ್ಶನ್ ಕೂಡಾ ಇದನ್ನು ಒಪ್ಪಿಕೊಂಡಿದ್ದರು. ಸಿಎಂಗೆ ಆಪ್ತರಾಗಿರುವ ಸುದೀಪ್ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಇದಕ್ಕೆ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ರಾಜಕೀಯದಿಂದ ದೂರ. ಆಹ್ವಾನ ಬಂದರೆ ನೋಡುತ್ತೇನೆ ಎಂದಿದ್ದಾರೆ.