Asianet Suvarna News Asianet Suvarna News

ಸಪ್ತಸಾಗರದಾಚೆ-ಬಿ ಸೈಡ್​ ನೋಡಿ ಕಿಚ್ಚ ಸುದೀಪ್​ 'ಕತ್ತೆ' ಎಂದ್ರು: ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರ

ಸಪ್ತಸಾಗರದಾಚೆ-ಬಿ ಸೈಡ್​ ನೋಡಿ ಕಿಚ್ಚ ಸುದೀಪ್​ 'ಕತ್ತೆ' ಎಂದ್ರು: ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರ
 

Kiccha Sudeep praising  Saptasagaradache B Side and mension as Katthe suc
Author
First Published Nov 22, 2023, 3:30 PM IST

ಬ್ಲಾಕ್​ ಬಸ್ಟರ್​ ಎಂದೇ ಸಾಬೀತಾಗಿದ್ದ ಸಪ್ತಸಾಗರದಾಚೆ ಎಲ್ಲೋ ಸೈಡ್​ ಎ ಬಳಿಕ ಇದೀಗ ಪಾರ್ಟ್​ ಬಿ ಸಕತ್​ ಸೌಂಡ್​ ಮಾಡುತ್ತಿದೆ.  ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ನಟನೆಯ ಪ್ರೇಮಕಾವ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಫ್ಯಾನ್ಸ್​ ಮೆಚ್ಚಿ ಕೊಂಡಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ, ಹೇಮಂತ್​ ಎಂ. ರಾವ್​, ರುಕ್ಮಿಣಿ ವಸಂತ್​, ಚೈತ್ರಾ ಜೆ. ಆಚಾರ್​, ಅದ್ವೈತ್​ ಗುರುಮೂರ್ತಿ ಸೇರಿದಂತೆ ಹಲವು ಕಲಾವಿದರನ್ನು ಒಳಗೊಂಡಿರುವ ಈ ಚಿತ್ರವನ್ನು ಇದಾಗಲೇ ಹಲವರು ಹಾಡಿ ಹೊಗಳುತ್ತಿದ್ದು, ಅದೇ ರೀತಿ ಸುದೀಪ್​ ಅವರೂ ಸೈಡ್​ ಬಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಕಿಚ್ಚ ಸುದೀಪ್​ ಕತ್ತೆ ಎಂದು ಕೊನೆಯಲ್ಲಿ ತಮಾಷೆಯಾಗಿ ಹೇಳುವ ಮೂಲಕ, ಅಭಿಮಾನದ ಸುರಿಮಳೆಯನ್ನೇ ಈ ಚಿತ್ರಕ್ಕೆ ನೀಡಿದ್ದಾರೆ. ಈ ಚಿತ್ರ  ಮಾಸ್ಟರ್​ ಪೀಸ್​ ಎಂದು ಅವರು ಕರೆದಿದ್ದಾರೆ. 
 
ಧನ್ಯವಾದಗಳು ರಕ್ಷಿತ್‌ ಶೆಟ್ಟಿ, ಈ ಚಿತ್ರ ನೋಡಿದೆ. ಇದೊಂದು ಮೇರುಕೃತಿ. ಇಂತಹ ಒಂದು ಗಮನಾರ್ಹ ಸಿನಿಮಾ ಅನುಭವಿಸಲು ಅವಕಾಶ ದೊರಕಿರುವುದರಿಂದ ನಿಜಕ್ಕೂ ತುಂಬಾ ಸಂತೋಷವಾಗಿದೆ. ನಿಮಗೆಲ್ಲರಿಗೂ ಚಿಯರ್ಸ್‌ ಎಂದು ಟಿಪ್ಪಣಿ ಬರೆದಿರುವ   ಸುದೀಪ್‌ ಅವರು,  "ಹೆವಿ ಲವ್ವು- ಅಗಾಧ ಪ್ರೀತಿ, ಎಕ್ಸಲೆಂಟ್‌ ಪರ್ಫಾಮೆನ್ಸ್‌- ಕಲಾವಿದರ ಅತ್ಯುತ್ತಮ ನಟನೆ, ಎಕ್ಸಲೆಂಟ್‌ ಡೈರೆಕ್ಷನ್‌- ಹೇಮಂತ್‌ ರಾವ್‌ ಅವರ ಅದ್ಭುತ ನಿರ್ದೇಶನ, ಎಕ್ಸಲೆಂಟ್‌ ಸಿನಿಮಾಟ್ರೊಗ್ರಫಿ" ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

Wedding Anniversary: ವಿವಾಹಿತ ರಾಜ್​ ಕುಂದ್ರಾ ಮೇಲೆ ಶಿಲ್ಪಾಗೆ ಹುಟ್ಟಿತ್ತು ಮೋಹ: ಆ ಭೇಟಿ ಕಾಮಕ್ಕೆ ತಿರುಗಿತ್ತು ಎಂದ ನಟಿ!

ಕೊನೆಯಲ್ಲಿ ಅವರು, ‘ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥ ಸಿನಿಮಾ ಮಾಡಲು ಧೈರ್ಯ ತೋರಿಸಿದ ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ. ಹೇಮಂತ್​ ರಾವ್​ ಅವರು ಅದ್ಭುತ ವಿಷನ್​ ಇರುವಂತಹ ನಿರ್ದೇಶಕ. ಕ್ಯಾಪ್ಟನ್​ ಸ್ಥಾನದಲ್ಲಿ ಅವರ ಕೆಲಸ ಪರ್ಫೆಕ್ಟ್​ ಆಗಿದೆ. ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೆಮ್ಮೆ ಮೂಡಿದೆ. ಕತ್ತೆ’ ಎಂದು ಸುದೀಪ್​ ಅವರು ಪೋಸ್ಟ್​ ಮಾಡಿದ್ದಾರೆ. ಸಿನಿಮಾ ತೋರಿಸಿದ ರಕ್ಷಿತ್​ ಶೆಟ್ಟಿಗೆ ಸುದೀಪ್​ ಅವರು ಧನ್ಯವಾದ ತಿಳಿಸಿದ್ದಾರೆ.

ಸುದೀಪ್​ ಅವರ ಈ ಟ್ವೀಟ್​ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಮೇರು ನಟನೊಬ್ಬ ಇನ್ನೊಂದು ಚಿತ್ರವನ್ನು ಹಾಡಿ ಹೊಗಳುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ಈ ಚಿತ್ರದಲ್ಲಿ ನಟಿಸಿರುವ  ನಟಿ ಚೈತ್ರಾ ಆಚಾರ್‌ ಕೂಡ ಸುದೀಪ್​ ಅವರ ಟ್ವೀಟ್​ಗೆ ಹರ್ಷ ವ್ಯಕ್ತಪಡಿಸಿದ್ದು, "ಧನ್ಯವಾದ ಸರ್"‌ ಎಂದಿದ್ದಾರೆ. "ಇವತ್ತು ಬೆಳಗ್ಗೆ ನಾನು ನೋಡಿದ ಎಷ್ಟು ಸುಂದರ ಟ್ವೀಟ್‌" ಎಂದು ಶ್ರೀಕಂಠ ಆರಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ಸುದೀಪ್‌ ಅವರು 'ಕತ್ತೆ' ಎಂದು ಬರೆದಿರುವ ಬಗ್ಗೆಯೂ ಸಾಕಷ್ಟು ಅಭಿಪ್ರಾಯ ವ್ಯಕ್ತವಾಗಿದ್ದು, ಇಷ್ಟು ಪ್ರೀತಿಯ ಮಾತನಾಡಿರುವ ತಮಗೆ ಧನ್ಯವಾದ, ಒಳ್ಳೆಯ ಕಲಾವಿದನ ಮನಸ್ಸು ಇದು ಎಂದೆಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.  ಕತ್ತೆ ಎನ್ನುವುದು ಪದವಲ್ಲ, ಅದೊಂದು ಭಾವನೆ ಎಂದಿದ್ದಾರೆ.  

ಅದೆಷ್ಟು ನಟಿಯರ ಜೊತೆ ಬೆಡ್​ರೂಂ​, ರೇಪ್​ ಸೀನ್​ ಮಾಡಿರುವೆ, ನಟಿ ತ್ರಿಷಾಗೆ ಕ್ಷಮೆ ಕೇಳಲು ನಂಗೇನು ಹುಚ್ಚಾ?


 

Follow Us:
Download App:
  • android
  • ios