ಅನೂಪ್‌ ಭಂಡಾರಿ ನಿರ್ದೇಶಿಸಿ, ಜಾಕ್‌ ನಿರ್ಮಾಣ ಮಾಡಿರುವ ಈ ಚಿತ್ರದ ಮೇಲೆ ಸಾಕಷ್ಟುನಿರೀಕ್ಷೆಗಳು ಇವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ ಹೀಗೆ ಎಲ್ಲ ಭಾಷೆಗಳಲ್ಲೂ ಏಕಕಾಲದಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ.

ನಟ ಸುದೀಪ್‌, ನಿರೂಪ್‌ ಭಂಡಾರಿ, ನೀತಾ ಅಶೋಕ್‌ ಮುಂತಾದವರ ಅಭಿನಯದ ‘ವಿಕ್ರಾಂತ್‌ ರೋಣ’ ಚಿತ್ರದ ಮುಂಗಡ ಬುಕ್ಕಿಂಗ್‌ ಆರಂಭವಾಗಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಬಾಕಿ ಇರುವಾಗಲೇ ಜು.24ರಂದು ಮಧ್ಯಾಹ್ನ 12 ಗಂಟೆಯಿಂದಲೇ ಚಿತ್ರದ ಮುಂಗಡ ಟಿಕೆಟ್‌ ಮಾರಾಟ ಶುರುವಾಗಿದೆ. ಕನ್ನಡ ಆವೃತ್ತಿ ಮಾತ್ರ ಸದ್ಯಕ್ಕೆ ಮುಂಗಡ ಕೌಂಟರ್‌ ತೆರೆಯಲಾಗಿದೆ. ಬುಕ್‌ ಮೈ ಶೋನಲ್ಲಿ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ ಭರ್ಜರಿಯಾಗಿ ಶುರುವಾಗಿದೆ. 2ಡಿ ಹಾಗೂ 3ಡಿ ಅವತರಣಿಕೆಗೆ ಟಿಕೆಟ್‌ ಮಾರಾಟ ಆಗುತ್ತಿದೆ.

ಅನೂಪ್‌ ಭಂಡಾರಿ ನಿರ್ದೇಶಿಸಿ, ಜಾಕ್‌ ನಿರ್ಮಾಣ ಮಾಡಿರುವ ಈ ಚಿತ್ರದ ಮೇಲೆ ಸಾಕಷ್ಟುನಿರೀಕ್ಷೆಗಳು ಇವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ ಹೀಗೆ ಎಲ್ಲ ಭಾಷೆಗಳಲ್ಲೂ ಏಕಕಾಲದಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಒಂದು ಮಾಹಿತಿಯ ಪ್ರಕಾರ 95 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ‘ವಿಕ್ರಾಂತ್‌ ರೋಣ’ ಚಿತ್ರದ ಮೊದಲ ದಿನದ ಗಳಿಕೆಯೇ 15 ರಿಂದ 20 ಕೋಟಿ ಎಂಬುದು ಚಿತ್ರೋದ್ಯಮದ ಲೆಕ್ಕಾಚಾರ. ಅಲ್ಲದೆ ವಾರಾಂತ್ಯ ಬಿಡುಗಡೆಯಾಗುತ್ತಿದ್ದು, ನಾಲ್ಕು ದಿನಗಳ ಗಳಿಕೆ ಸೇರಿ ಒಟ್ಟು 50 ರಿಂದ 75 ಕೋಟಿ ಗಳಿಕೆ ಮಾಡುವ ಸೂಚನೆಗಳು ಕಾಣುತ್ತಿವೆ ಎಂಬುದು ಚಿತ್ರರಂಗದ ಲೆಕ್ಕ.

ವಿಕ್ರಾಂತ್‌ ರೋಣ ಚಿತ್ರದ ಮೇಲಿನ ಈ ಗಳಿಕೆಯ ಲೆಕ್ಕವನ್ನು ಈಗಾಗಲೇ ಶುರುವಾಗಿರುವ ಮುಂಗಡ ಬುಕ್ಕಿಂಗ್‌ ವರದಿಗಳು ಮತ್ತಷ್ಟುಪುಷ್ಠೀಕರಿಸುತ್ತಿವೆ. ಕೆಲವು ಚಿತ್ರಮಂದಿರಗಳಲ್ಲಿ ಸುದೀಪ್‌ ಅವರ ಅಭಿಮಾನಿಗಳು ಪೂರ್ತಿ ಶೋಗಳನ್ನೇ ಬುಕ್‌ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಕಡೆ ನಿರೀಕ್ಷೆಗೂ ಮೀರಿ ಮುಂಗಡ ಬುಕ್ಕಿಂಗ್‌ನಲ್ಲಿ ಟಿಕೆಟ್‌ಗಳು ಮಾರಾಟವಾಗುತ್ತಿವೆಯಂತೆ. ಯಶ್‌ ಅವರ ‘ಕೆಜಿಎಫ್‌ 2’ ಹಾಗೂ ರಕ್ಷಿತ್‌ ಶೆಟ್ಟಿಅವರ ‘777 ಚಾರ್ಲಿ’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು, ಇಡೀ ಭಾರತೀಯ ಚಿತ್ರರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ. ಈ ಯಶಸ್ಸಿನ ಅಲೆಯಲ್ಲಿರುವ ಕನ್ನಡ ಚಿತ್ರರಂಗ ಮತ್ತೊಮ್ಮೆ ಮೈ ಕೊಡವಿಕೊಂಡು ಎದ್ದು ನಿಲ್ಲಲು ‘ವಿಕ್ರಾಂತ್‌ ರೋಣ’ ಸದ್ದು ಮಾಡುತ್ತಿದೆ.

ವಿಕ್ರಾಂತ್ ರೋಣ ಹಬ್ಬಕ್ಕೆ ಕೌಂಟ್‌ಡೌನ್: ಥಿಯೇಟರ್ ಮುಂದೆ ಸಂಭ್ರಮಕ್ಕೆ ಸಜ್ಜಾದ ಫ್ಯಾನ್ಸ್!

ಕಿಚ್ಚನ ಡಿಜಿಟಲ್‌ ಜಗತ್ತು

ಕಿಚ್ಚ ವರ್ಸ್‌ ಲಾಂಚ್‌ ಹಿನ್ನೆಲೆಯಲ್ಲಿ ನಟ ಸುದೀಪ್‌, ಪ್ರಿಯಾ ಸುದೀಪ್‌, ನಿರ್ಮಾಪಕ ಜಾಕ್‌ ಮಂಜು ಹಾಗೂ ಎನ್‌ಎಫ್‌ಟಿ ಪ್ರತಿನಿಧಿಗಳು ಮಾಧ್ಯಮಗಳ ಮುಂದೆ ಹಾಜರಾದರು. ಈಗಾಗಲೇ ಸ್ಕೆಚ್‌ ಸ್ಪರ್ಧೆ ಆರಂಭವಾಗಿದ್ದು, ‘ವಿಕ್ರಾಂತ್‌ ರೋಣ’ ಚಿತ್ರದ ಸ್ಕೆಚ್‌ ಮಾಡಿದವರಿಗೆ ಎನ್‌ಎಫ್‌ಟಿ ಕಾರ್ಡ್‌ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್‌ ರೋಣ ಚಿತ್ರದ ಸ್ಕೆಚ್‌ ಬಿಡಿಸಿ kichchcaverse.ioನಲ್ಲಿ ಅಪ್‌ಲೋಡ್‌ ಮಾಡಬೇಕು. ಜು.24ರಿಂದ ಈ ವೆಬ್‌ಸೈಟ್‌ ಚಾಲನೆಗೊಳ್ಳಲಿದೆ. 

ರಾ..ರಾ ರಕ್ಕಮ್ಮ ಆಯ್ತು, ಈಗ ರಣ ಭಯಂಕರ ಡೆವಿಲ್! ಇದೇ 28 ಕ್ಕೆ ವಿಕ್ರಾಂತ್ ರೋಣ ಹಬ್ಬ!

ಇದೇ ಮೊದಲ ಬಾರಿಗೆ ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್‌ ಶೋ ನಡೆಸುತ್ತಿದ್ದು, ಎನ್‌ಎಫ್‌ಟಿ ಆಯೋಜಿಸುವ ‘ವಿಕ್ರಾಂತ್‌ ರೋಣ’ ಚಿತ್ರದ ಪ್ರೀಮಿಯರ್‌ ಶೋ ನೋಡಲು, ಜತೆಗೆ ಸುದೀಪ್‌ ಅವರೊಂದಿಗೆ ಮಾತನಾಡಲು, ಸಮಯ ಕಳೆಯಲು ಎನ್‌ಎಫ್‌ಟಿ ಸದಸ್ಯತ್ವದ ಕಾರ್ಡ್‌ ತೆಗೆದುಕೊಳ್ಳಬೇಕು. ಸದಸ್ಯತ್ವದ ಶುಲ್ಕ ಎಷ್ಟುಎಂಬುದನ್ನು kichchcaverse.io ವೆಬ್‌ಸೈಟ್‌ನಲ್ಲಿ ಜು.24ರಂದು ತಿಳಿಸಲಾಗುವುದು. ನಟ ಸುದೀಪ್‌ ಮಾತನಾಡಿ, ‘ಎನ್‌ಎಫ್‌ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್‌ ಬಗ್ಗೆ ಮೊದಲ ಬಾರಿ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ.