ದರ್ಶನ್- ಸುದೀಪ್ ಮುಖಾಮುಖಿಗೆ ಸಿದ್ಧವಾಗಿದೆ ವೇದಿಕೆ!
ಕಿಚ್ಚ ಸುದೀಪ್ ಹಾಗೂ ದರ್ಶನ್ ಮಧ್ಯೆ ಏನೂ ಇಲ್ಲ ಎಂದರೂ ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪ. ಎಲ್ಲಿಯೂ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇಬ್ಬರೂ ಒಂದೇ ಕಡೆ ಮುಖಾಮುಖಿಯಾಗಲು ವೇದಿಕೆಯೊಂದು ಸಿದ್ಧವಾಗಿದೆ.
ಬೆಂಗಳೂರು (ಮಾ. 02): ಕಿಚ್ಚ ಸುದೀಪ್ ಹಾಗೂ ದರ್ಶನ್ ಮಧ್ಯೆ ಏನೂ ಇಲ್ಲ ಎಂದರೂ ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪ. ಎಲ್ಲಿಯೂ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇಬ್ಬರೂ ಒಂದೇ ಕಡೆ ಮುಖಾಮುಖಿಯಾಗಲು ವೇದಿಕೆಯೊಂದು ಸಿದ್ಧವಾಗಿದೆ.
ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ
ಸಸ್ಪೆನ್ಸ್ ಥ್ರಿಲ್ಲರ್ ಖ್ಯಾತಿಯ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ’ಉದ್ಘರ್ಷ’ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್- ಸುದೀಪ್ ಮುಖಾಮುಖಿಯಾಗ್ತಾರಾ ಎಂಬ ಕುತೂಹಲ ಮೂಡಿಸಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಉದ್ಘರ್ಷ ಚಿತ್ರ ತಯಾರಾಗಿದೆ. ಮಾರ್ಚ್ 5 ರಂದು ಟ್ರೇಲರ್ ಬಿಡುಗಡೆಯಾಗಲಿದೆ. ದರ್ಶನ್ ಈ ಟ್ರೇಲರ್ ರಿಲೀಸ್ ಮಾಡಲಿದ್ದಾರಂತೆ. ಈ ಚಿತ್ರದ ಟ್ರೇಲರ್ ಗೆ ಸುದೀಪ್ ಹಿನ್ನಲೆ ಧ್ವನಿ ನೀಡಿದ್ದಾರೆ. ಹಾಗಾಗಿ ಸುದೀಪ್ ಗೂ ಇದು ವಿಶೇಷವಾದ ಚಿತ್ರ.
'ಯಜಮಾನ' ಪೈರಸಿ ಕಂಡು ಬಂದರೆ ಈ ಸಂಖ್ಯೆಗೆ ಸಂಪರ್ಕಿಸಿ
ಒಟ್ಟಿನಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರಿಗೂ ಉದ್ಘರ್ಷ ವಿಶೇಷವಾಗಿದ್ದು ಆ ಕಾರಣಕ್ಕಾದರೂ ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಾರಾ ನೋಡಬೇಕಿದೆ.