'ಯಜಮಾನ' ಪೈರಸಿ ಕಂಡು ಬಂದರೆ ಈ ಸಂಖ್ಯೆಗೆ ಸಂಪರ್ಕಿಸಿ

 

ಭರ್ಜರಿ ಪ್ರದರ್ಶನ ಕಾಣುತ್ತಿರುವ ಯಜಮಾನ ಚಿತ್ರ ಪೈರಸಿ ಆಗುವ ಸಾಧ್ಯತೆ ಇದ್ದು ಅದನ್ನು ತಪ್ಪಿಸಲು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲು ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ ನೀಡಿದೆ.

Yajamana film team preacution against piracy

 

ಇದು ಪೈರಸಿ ಒಂದೇ ಅನ್ಕೊಂಡು ಸುಮ್ಮನಾಗಬೇಡಿ. ಚಿತ್ರ ನೋಡಲು ಬಂದಾಗ ಫೇಸ್ ಬುಕ್ ಲೈವ್ ಅಥವಾ ವಿಡಿಯೋ ಕವರೇಜ್ ಮಾಡುತ್ತಿರುವ ಯಾವುದಾದರೂ ಚಟುವಟಿಕೆ ಕಂಡು ಬಂದಲ್ಲಿ +91 9384601685 ನಂಬರ್ ಗೆ ವಾಟ್ಸಾಪ್ ಮಾಡಿ ಇಲ್ಲವಾದರೆ info@copyrightmedia.in ಮೇಲ್ ಮಾಡಿ ತಿಳಿಸಿ ಎಂದು ಚಿತ್ರತಂಡ ಹೇಳಿದೆ.

ಮಿಸ್ ಮಾಡದೇ ’ಯಜಮಾನ’ ನೋಡಲು ಇಲ್ಲಿದೆ ಕಾರಣ!

 

ಸ್ಯಾಂಡಲ್‌ವುಡ್‌ನಲ್ಲಿ ಯಜಮಾನ ಸಿನಿಮಾ ದರ್ಬಾರ್ ಶುರು ಆಗಿದೆ. ಈಗಾಗಲೇ ಮೊದಲ ದಿನದ ಶೋಗೆ ಫುಲ್ ಫಿದಾ ಆದ ಜನರು ಮತ್ತೊಮ್ಮೆ ನೋಡಬೇಕೆಂದು ಕಾಯುತ್ತಿದ್ದಾರೆ. ಇನ್ನು ಕೆಲವರು ಟಿಕೆಟ್ ಸಿಗದೆ ಏನಪ್ಪಾ ಮಾಡೋದು ಅಂತ ಪರದಾಡುತ್ತಿದ್ದಾರೆ. ಟಿಕೆಟ್ ಸಿಕ್ಕರೆ ಸಾಕು ಬಾಸ್ ಫಿಲಂ ಮಿಸ್ಸೇ ಮಾಡಲ್ಲ ಅಂತಾರೆ ಫ್ಯಾನ್ಸ್.

Yajamana film team preacution against piracy

ಇನ್ನು ಇಂತಹ ಸಂದರ್ಭದಲ್ಲಿ ಪೈರಸಿ ಸಾಮಾನ್ಯ ನೋಡಿ. ಪೈರಸಿ ತಪ್ಪಿಸಲು ಚಿತ್ರತಂಡ ಕ್ರಮ ತೆಗೆದುಕೊಳ್ಳಲು ಪರಿಹಾರ ಕಂಡುಕೊಂಡಿದೆ. ಅದುವೇ ಸಿನಿಮಾ ಪೋಸ್ಟರ್ ಮೇಲೆ ದೂರು ನೀಡಲು ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ ನೀಡಿದೆ.

Latest Videos
Follow Us:
Download App:
  • android
  • ios