ದರ್ಶನ್-ಸುದೀಪ್ ಒಂದಾಗುವ ಸುದಿನ ಹತ್ತಿರ ಬಂದಿದೆ; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಇಬ್ಬರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಈ ಅಭಿಮಾನ ಕೆಲವೊಮ್ಮೆ ಫ್ಯಾನ್ಸ್ ವಾರ್​ಗೆ ಕಾರಣವಾಗಿದ್ದು ಉಂಟು. ಮುನಿಸಿಕೊಂಡಿದ್ರೂ ನಟ ಕಿಚ್ಚ ಸುದೀಪ್​ ಒಮ್ಮೊಮ್ಮೆ ದರ್ಶನ್ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕವೂ ಕಿಚ್ಚ​, ದಚ್ಚು ಬಗ್ಗೆ ಮಾತಾಡಿದ್ರು. ಆದ್ರೆ ಒಮ್ಮೆ ಕೂಡ ದರ್ಶನ್..

Kiccha Sudeep and Darshan become friends very soon says famous astrologer srb

ಕನ್ನಡ ಚಿತ್ರರಂಗದ ಸ್ಟಾರ್​ ನಟರಾಗಿರುವ ಕಿಚ್ಚ ಸುದೀಪ್ (Kichcha Sudeep) ಹಾಗೂ ನಟ ದರ್ಶನ್ (Actor Darshan) ಹತ್ತು ವರ್ಷಗಳ ಹಿಂದೆ ಬೆಸ್ಟ್ ಫ್ರೆಂಡ್ ಆಗಿದ್ರು ಎಂಬುದು ಬಹುತೇಕರಿಗೆ ಗೊತ್ತಿದೆ. ಜೋಡೆತ್ತಿನಂತೆ ಜೊತೆಯಲ್ಲೇ ಇರ್ತಿದ್ದ ದರ್ಶನ್ ಹಾಗೂ ಸುದೀಪ್ ನಡುವೆ ವೈಮನಸ್ಸು ಉಂಟಾಗಿ ಬಳಿಕ ಬೇರೆಬೇರೆ ಆಗಿದ್ದಾರೆ. ಅಂದಿನಿಂದ ಈ ಇಬ್ಬರೂ ನಟರು ಪರಸ್ಪರ ಮಾತಾಡೋದಿಲ್ಲ, ಮುಖಾಮುಖಿ ಆಗಿಲ್ಲ. ಆಕಸ್ಮಿಕವಾಗಿ ಭೇಟಿಯಾದ್ರೂ, ಒಂದೇ ವೇದಿಕೆ ಏರಿದ್ರೂ ಮಾತಾಡೋದಿಲ್ಲ ಅನ್ನೋದು ಹಲವರಿಗೆ ತಿಳಿದಿದೆ. 

ಆದ್ರೆ ದರ್ಶನ್ ಹಾಗೂ ಸುದೀಪ್​ ಒಂದಾಗುವ ದಿನಕ್ಕಾಗಿ ಇಡೀ ಸ್ಯಾಂಡಲ್​​ವುಡ್ (Sandalwood) ಕಾಯ್ತಿದೆ ಅನ್ನೋದು ಕೂಡ ಅಷ್ಟೇ ನಿಜ. ಆ ಸುದಿನಕ್ಕೆ ಆ ಸುಮುಹೂರ್ತಕ್ಕೆ ಸಿನಿಪ್ರಿಯರೆಲ್ಲರೂ ಕಾಯ್ತಿದ್ದಾರೆ. ಆ ಸುಮುಹೂರ್ತ ಫಿಕ್ಸ್ ಆಗಿದೆಯಂತೆ. ಹೀಗಂತ ಖ್ಯಾತ ಜ್ಯೋತಿಷಿಯೊಬ್ಬರು (Astrologer) ಸ್ಫೋಟಕ ಭವಿಷ್ಯ ನುಡಿದ್ದಾರೆ. ಅದೂ ಕೂಡ ತುಂಬಾ ದೂರವಿಲ್ಲ ಎಂಬ ಸಿಹಿ ಸುದ್ದಿ ಬೇರೆ! ಹಾಗಿದ್ದರೆ ಇದೇನು ಸುದ್ದಿ? ಆ ಜಾದೂ ಎಂದು ನಡೆಯಲಿದೆ? ಕುತೂಹಲಕ್ಕೆ ಮುಂದೆ ನೋಡಿ.. 

ಸುದೀಪ್-ದರ್ಶನ್​ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾದ ಕೇಕ್, ನಟ ಪ್ರದೀಪ್‌ರಿಂದ ಸ್ಪಷ್ಟನೆ!

ಕನ್ನಡ ಚಿತ್ರರಂಗಕ್ಕೆ ಮಾಣಿಕ್ಯವಾಗಿರುವ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಇಬ್ಬರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಈ ಅಭಿಮಾನ ಕೆಲವೊಮ್ಮೆ ಫ್ಯಾನ್ಸ್ ವಾರ್​ಗೆ ಕಾರಣವಾಗಿದ್ದು ಉಂಟು. ಮುನಿಸಿಕೊಂಡಿದ್ರೂ ನಟ ಕಿಚ್ಚ ಸುದೀಪ್​ ಒಮ್ಮೊಮ್ಮೆ ದರ್ಶನ್ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕವೂ ಕಿಚ್ಚ​, ದಚ್ಚು ಬಗ್ಗೆ ಮಾತಾಡಿದ್ರು. ಆದ್ರೆ ಒಮ್ಮೆ ಕೂಡ ದರ್ಶನ್ ಅವರು ಇತ್ತೀಚೆಗೆ ಸುದೀಪ್​ ಬಗ್ಗೆ ಮಾತಾಡಿಲ್ಲ. ಆದ್ರೆ ಇಬ್ಬರೂ ಮತ್ತೆ ಒಂದಾಗ್ತಾರೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.

ಹೌದು, ಕಿಚ್ಚ ಸುದೀಪ್‌-ದರ್ಶನ್‌ ಇಬ್ಬರೂ ಸದ್ಯದಲ್ಲೇ ಒಂದಾಗಲಿದ್ದಾರೆ ಎಂದು ಜ್ಯೋತಿಷಿ ಹೇಳಿರುವುದು ನಿಜ. 'ಕಾಲಾಯ ತಸ್ಮೈ ನಮಃ' ಎನ್ನುವಂತೆ ಕಾಲ ಕಳೆದಂತೆ ಮುನಿಸು ಮಾಯವಾಗಿ ನಟ ದರ್ಶನ್​ ಹಾಗೂ ಸುದೀಪ್ ಕೂಡ ಒಂದಾಗುವ ಸಮಯ ಬಂದಿದೆಯಂತೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಅವರು ಏನ್ ಹೇಳಿದ್ದಾರೆ ಗೊತ್ತಾ?

ಮಾಸ್ ಅವತಾರದಲ್ಲಿ ಸೀಟಿನ ತುದಿಗೆ ತಂದು ಕೂರಿಸೋ ಕಿಚ್ಚನ ಮ್ಯಾಜಿಕ್ 'ಮ್ಯಾಕ್ಸ್'..!

ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಎಂಬುವರು ತಮ್ಮ ಟ್ವಿಟ್ವರ್ ಪೇಜ್​ನಲ್ಲಿ 'ನಟ ದರ್ಶನ್ ಹಾಗೂ ಸುದೀಪ್​ ಒಂದಾಗುವ ಕಾಲ ಸನ್ನಿಹಿತವಾಗಿದೆ' ಬಂದಿದೆ ಎಂದು ತಿಳಿಸಿದ್ದಾರೆ. ಇಬ್ಬರು ಫೋಟೋ ಶೇರ್ ಮಾಡಿರುವ ಜ್ಯೋತಿಷಿ, 'ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಅನೇಕ ಅಭಿಮಾನಿಗಳು ಇಬ್ಬರೂ ಮತ್ತೆ ಯಾವಾಗ ಒಂದಾಗುತ್ತಾರೆ ಎಂದು ಕೇಳುತ್ತಿದ್ದಾರೆ. ಫೆಬ್ರವರಿ 2026ರ ನಂತರ ಈ ಎರಡೂ ನಕ್ಷತ್ರಗಳು ಮತ್ತೆ ಸ್ನೇಹಿತರಾಗುತ್ತಾರೆ' ಎಂದು ಬರೆದಿದ್ದಾರೆ.

ನಟ ದರ್ಶನ್ ಹಾಗೂ ಸುದೀಪ್ ಇಬ್ಬರು ಗೆಳೆಯರು ಮತ್ತೆ ಒಂದಾಗಲಿ, ಅವರಿಬ್ಬರ ಅಭಿಮಾನಿಗಳ ಸ್ಟಾರ್ ವಾರ್ ತಪ್ಪಿಸಲಿ  ಎನ್ನುವುದು ಇಡೀ ಸ್ಯಾಂಡಲ್​ವುಡ್ ಸಿನಿಪ್ರಿಯರ ಆಸೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಮೂಡಲಿ, ಎಲ್ಲರೂ ಪರಸ್ಪರ ಗೌರವಾದರಗಳಿಂದ ಬದುಕಲಿ ಅನ್ನೊದು ಎಲ್ಲರ ಆಶಯವಾಗಿದೆ. ಹೌದು, ದಚ್ಚು-ಕಿಚ್ಚು ಒಂದಾಗೋ ದಿನವನ್ನ ಅವರ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

ರಮ್ಯಾ ಮತ್ತು ನಾನು ಒಂದೆರಡು ಗಂಟೆಗಳಷ್ಟು ಮಾತ್ರ ಒಟ್ಟಿಗೇ ಇರ್ತೀವಿ: ಕಿಚ್ಚ ಸುದೀಪ್!

ಮಾಜಿ ಸಂಸದೆ ಹಿರಿಯ ನಟಿ ಸುಮಲತಾ ಅವರ ಬರ್ತ್​ ಡೇ ಪಾರ್ಟಿಯಲ್ಲಿ ಹಲವು ವರ್ಷಗಳ ಬಳಿಕ ನಟ ದರ್ಶನ್ ಹಾಗೂ ಸುದೀಪ್​ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ರು. ಅಕ್ಕಪಕ್ಕವೇ ಇದ್ರೂ ಕೂಡ ಒಬ್ಬರ ಮುಖ ಒಬ್ಬರು ನೋಡಲಿಲ್ಲ. ಈ ಸಂದರ್ಭದಲ್ಲಿ ಇಬ್ಬರು ಒಂದಾಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು, ಆದರೆ ಆಗಲಿಲ್ಲ. ಬಳಿಕ, ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಸೇರಿದ್ರು. ದರ್ಶನ್ ಬಂಧನದ ಸುದ್ದಿ ಇಡೀ ಸ್ಯಾಂಡಲ್​ವುಡ್​ನನ್ನೇ ಬೆಚ್ಚಿ ಬೀಳಿಸಿತ್ತು, ಇದೀಗ ನಟ ಬೇಲ್​ ಮೇಲೆ ಹೊರಗೆ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. 

Latest Videos
Follow Us:
Download App:
  • android
  • ios