ಸುದೀಪ್-ದರ್ಶನ್ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾದ ಕೇಕ್, ನಟ ಪ್ರದೀಪ್‌ರಿಂದ ಸ್ಪಷ್ಟನೆ!
ಮ್ಯಾಕ್ಸ್ ಚಿತ್ರ ನೋಡಿದ ಬಳಿಕ ನಟ ಹಾಗೂ ಸುದೀಪ್ ಅಭಿಮಾನಿ ಪ್ರದೀಪ್ ಅವರು ಕಿಚ್ಚ ಸುದೀಪ್ ಮನೆಗೆ ಹೋಗಿದ್ದಾರೆ. ಹೋಗುವಾಗ ಒಂದು ಕೇಕ್ ತೆಗೆದುಕೊಂಡು ಹೋಗಿದ್ದು ಅದರ ಮೇಲೆ 'Bossim ಕಾಲ ಮುಗೀತು, Maximum Mass ಕಾಲ ಶುರುವಾಯ್ತು' ಎಂದು ಬರೆಯಲಾಗಿದೆ. ಈ ಸಂಗತಿ ಈಗ ನಟರಾದ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಸ್ಟಾರ್ ವಾರ್‌ಗೆ ಕಾರಣವಾಗಿದೆ ಎನ್ನಲಾಗುತ್ತಿದೆ...
ಕಿಚ್ಚ ಸುದೀಪ್ (Kichcha Sudeep) ನಟನೆಯ 'ಮ್ಯಾಕ್ಸ್' ಸಿನಿಮಾ (Max) ನಿನ್ನೆ ಅಂದರೆ 25 ಡಿಸೆಂಬರ್ 2024ರಂದು ಬಿಡುಗಡೆ ಆಗಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಬರುವ ಹಾಡಿನಲ್ಲಿ 'ಬಾಸಿಸಂ ಕಾಲ ಮುಗೀತು ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು' ಅನ್ನೋ ಸಾಲು ಇದೆ. ಈ ಸಾಲನ್ನು ಬರೆದಿರುವ ಕೇಕ್ ಒಂದನ್ನು ನಟ ಪ್ರದೀಪ್ (Actor Pradeep) ಅವರು ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರ ನೋಡಿದ ಬಳಿಕ ವಿಶ್ ಮಾಡಲು ಅವರ ಮನೆಗೆ ಹೋದಾಗ ತೆಗೆದುಕೊಂಡು ಹೋಗಿದ್ದಾರೆ. ಅದೀಗ ಸ್ಟಾರ್‌ವಾರ್‌ಗೆ ಕಾರಣವಾಗಿದೆ.
ಹೌದು, ಮ್ಯಾಕ್ಸ್ ಚಿತ್ರ ನೋಡಿದ ಬಳಿಕ ನಟ ಹಾಗೂ ಸುದೀಪ್ ಅಭಿಮಾನಿ ಪ್ರದೀಪ್ ಅವರು ಕಿಚ್ಚ ಸುದೀಪ್ ಮನೆಗೆ ಹೋಗಿದ್ದಾರೆ. ಹೋಗುವಾಗ ಒಂದು ಕೇಕ್ ತೆಗೆದುಕೊಂಡು ಹೋಗಿದ್ದು ಅದರ ಮೇಲೆ 'Bossim ಕಾಲ ಮುಗೀತು, Maximum Mass ಕಾಲ ಶುರುವಾಯ್ತು' ಎಂದು ಬರೆಯಲಾಗಿದೆ. ಈ ಸಂಗತಿ ಈಗ ನಟರಾದ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಸ್ಟಾರ್ ವಾರ್‌ಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಇಬ್ಬರೂ ನಟರ ಫ್ಯಾನ್ಸ್‌ಗಳೀಗ ಸೋಷಿಯಲ್ ಮೀಡಿಯಾಗಳಲ್ಲಿ ಕಿತ್ತಾಟ ಶುರು ಮಾಡಿಕೊಂಡಿದ್ದಾರೆ.
ರಮ್ಯಾ ಮತ್ತು ನಾನು ಒಂದೆರಡು ಗಂಟೆಗಳಷ್ಟು ಮಾತ್ರ ಒಟ್ಟಿಗೇ ಇರ್ತೀವಿ: ಕಿಚ್ಚ ಸುದೀಪ್!
ನಿನ್ನೆ ಮ್ಯಾಕ್ಸ್ ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಕೇಕ್ ಕತ್ತರಿಸಿದ್ದ ಸುದೀಪ್, ಕೇಕ್ ಮೇಲೆ ಬರೆದಿದ್ದ ಸಾಲಿನ ಬಗ್ಗೆ ದರ್ಶನ್ ಫ್ಯಾನ್ಸ್ ಸಿಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 'ಬಾಸಿಸಂ ಕಾಲ ಮುಗೀತು ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಅನ್ನೋ ಸಾಲು ಇದೀಗ ವಾರ್ ಕ್ರಿಯೇಟ್ ಮಾಡಿದೆ. ದರ್ಶನ್‌ಗೆ 'ಡಿ ಬಾಸ್' ಅಂತ ಅವರ ಅಭಿಮಾನಿಗಳು ಕರೆಯುತ್ತಾರೆ. ಈ ಸಾಲು ದರ್ಶನ್ ಬಗ್ಗೆ ಉದ್ದೇಶಪೂರ್ವಕವಾಗಿ ಬರೆದಿದ್ದು ಅಂತ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಕಿರಿಕ್ ತೆಗೆದಿದ್ದಾರೆ ಎನ್ನಲಾಗಿದೆ.
ಆದ್ರೆ 'ಬಾಸಿಸಂ ಕಾಲ ಮುಗೀತು ಮ್ಯಾಕ್ಸಿಮಮ್ ಮಾಸ್ ಕಾಲ ಶುರು ಅಂತ ಮ್ಯಾಕ್ಸ್ ಸಿನಿಮಾದ ಹಾಡಿನ ಸಾಲು' ಅಂತ ನಟ ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಒಂದನ್ನು ಮಾಡಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹರಿಯಬಿಟ್ಟಿರುವ ನಟ ಪ್ರದೀಪ್ ಅವರು 'ಯಾವ ನಟರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಬರೆದ ಸಾಲು ಇದಲ್ಲ' ಎಂದು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಎಲ್ಲ ಅಭಿಮಾನಿಗಳೂ ಕೂಡ ಅವರವರ ಮೆಚ್ಚಿನ ನಟರಿಗೆ ಬಾಸ್ ಎಂದು ಕರೆಯುತ್ತಾರೆ ಎಂದಿದ್ದಾರೆ ನಟ ಪ್ರದೀಪ್.
ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?
ನಟ ಪ್ರದೀಪ್ 'ಸುದೀಪ್ ಅವರ ಮನೆಗೆ ವಿಶ್ ಮಾಡಲು ಕೇಕ್ ತೆಗೆದುಕೊಂಡು ಹೋಗಿದ್ದೆ. ಇದನ್ನ ತಿರುಚಿ ಯಾರೋ ಒಬ್ಬ ನಟನನ್ನ ಲಿಂಕ್ ಮಾಡಿ ವಿವಾದ ಮಾಡುತ್ತಿದ್ದಾರೆ. ಕೇಕ್ ಮೇಲೆ ಬರೆದ ಸಾಲು ಮ್ಯಾಕ್ಸ್ ಸಿನಿಮಾದ ಹಾಡಿನ ಸಾಲು. ಅದನ್ನು ಯಾರೋ ಒಬ್ಬ ನಟನ ಬಗ್ಗೆ ಲಿಂಕ್ ಮಾಡುವ ಅಗತ್ಯವಿಲ್ಲ' ಪ್ರತಿಯಬ್ಬರೂ ಅವರವರ ಮೆಚ್ಚಿನ ನಟನಿಗೆ 'ಬಾಸ್, ಅಣ್ಣ, ಗುರು ಅಂತೆಲ್ಲ ಕರೆಯುತ್ತಾರೆ. ಅದು ಯಾರೊಬ್ಬರಿಗೆ ಮೀಸಲಾಗಿರುವ ಪದವಲ್ಲ' ಎಂದಿದ್ದಾರೆ.