ರಮ್ಯಾ ಮತ್ತು ನಾನು ಒಂದೆರಡು ಗಂಟೆಗಳಷ್ಟು ಮಾತ್ರ ಒಟ್ಟಿಗೇ ಇರ್ತೀವಿ: ಕಿಚ್ಚ ಸುದೀಪ್!

ನಟ ಕಿಚ್ಚ ಸುದೀಪ್ ಹೇಳಿರುವ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಸುದೀಪ್ ಅವರು ನಟಿ ರಮ್ಯಾ ಬಗ್ಗೆ ಮಾತನ್ನಾಡಿದ್ದಾರೆ. ಕಿಚ್ಚ ಸುದೀಪ್ ಹೇಳಿರುವ ಆ ಮಾತು...

Kichcha Sudeep talk in Mirchi Kannada youtube channel about ramya srb

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಹೇಳಿರುವ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಸುದೀಪ್ ಅವರು ನಟಿ ರಮ್ಯಾ (Sandalwood queen Ramya) ಬಗ್ಗೆ ಮಾತನ್ನಾಡಿದ್ದಾರೆ. ಕಿಚ್ಚ ಸುದೀಪ್ ಹೇಳಿರುವ ಆ ಮಾತು ವೈರಲ್ ಆಗುತ್ತಿದ್ದು, ಅನೇಕರು ವಿಭಿನ್ನ ಕಾಮೆಂಟ್ ಹಾಕಿದ್ದಾರೆ. ಹಾಗಿದ್ದರೆ ಅಲ್ಲಿ ಸುದೀಪ್ ಹೇಳಿದ್ದೇನು? ಯಾಕೆ ರಮ್ಯಾ-ಸುದೀಪ್ ಬಗ್ಗೆ ಈಗ ಅಷ್ಟೊಂದು ಚರ್ಚೆ ಶುರುವಾಗಿದೆ, ಇಲ್ಲಿದೆ ನೋಡಿ ಸ್ಟೋರಿ.. 

'ನಾನು ಒಳಗಡೆ ಹೋಗಿ ಕಂಟೆಸ್ಟಂಟ್ ಆದ್ರೆ ನನ್ನ ಸಹ-ಕಂಟೆಸ್ಟಂಟ್ ಯಾರು? ಎಂದ ಸುದೀಪ್ ಪ್ರಶ್ನೆಗೆ ನಿರೂಪಕರು 'ಶಿವಣ್ಣ' ಎಂದಿದ್ದಾರೆ. ಈಗ ಶಿವಣ್ಣ ಇದ್ರೆ ನಾವೇ ಗೆಲ್ಲಿಸ್ತೀವಿ.. ಅವ್ರು ಇದಾರೆ ಅಂದ್ರೆ ನಾವೇ ಅವ್ರನ್ನ ಗೆಲ್ಲಿಸ್ತೀವಿ.. ಅವ್ರೇನೂ ಶ್ರಮ ಪಡೋದೇ ಬೇಡ, ನಾವೇ ಗೆಲ್ಲಿಸ್ತೀವಿ ಅರೆ ಶಿವಣ್ಣ ಗೆಲ್ಬೇಕು ಅಂತ.. 

ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್‌ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?

ನಮ್ಮ ಧ್ರುವ ಸರ್ಜಾಅವ್ರು' ಎಂದಿದ್ದಕ್ಕೆ 'ನಾವು ಅವ್ರಿಗೆ ಕರೆದು ಹೇಳ್ತೀವಿ, ನೋಡು ನಾನು ಗೆಲ್ಬೇಕು, ಸುಮ್ನೆ ನೀನು ಸೈಡ್‌ಗೆ ಹೋಗು ಅಂತ.. ಇಲ್ಲ ಅಂದ್ರೆ ಮರ್ಯಾದೆ ಹೋಗುತ್ತೆ ನಿಂದು ಅಂತ.. ಆಯ್ತು ಅಂತ ಬರ್ತಾರೆ, ಈಸಿ ಆಗ್ತದೆ, ಹೇಳೀ..  ರಮ್ಯಾ ಮೇಡಂ, ಎಂದಿದ್ದಕ್ಕೆ ಕಿಚ್ಚ ಸುದೀಪ್ ಅವರು 'ಬಾಗಿಲು ಓಪನ್ ಆಗೋದು ಇದ್ಯಲ್ಲಾ, ಒಂದು ಕೀನ ಕೈನಲ್ಲೇ ಹಿಡ್ಕೊಂಡು ಇರ್ತೀನಿ, ಒಂದು ಅವ್ರು ಓಡೋಗ್ತಾರೆ ಇಲ್ಲ ನಾನು ಓಡೋಗ್ತೀನಿ.. ವಿ ಆರ್ ವೆರಿ ಗುಡ್ ಫ್ರಂಡ್ಸ್‌, ಗ್ರೇಟ್ ಫ್ರಂಡ್ಸ್‌, ಆದರೆ, ನಾವಿಬ್ರೂ ಒಟ್ಟಾಗಿ ಒಂದೆರಡು ಗಂಟೆಗಳು ಮಾತ್ರ ಇರೋದಕ್ಕೆ ಸಾಧ್ಯ' ಎಂದಿದ್ದಾರೆ ನಟ ಸುದೀಪ್. 

ಇನ್ನು, ಉಪೇಂದ್ರ ಅಂದಿದ್ದಕ್ಕೆ, ಉಪ್ಪಿ ಸರ್ ಇರೋ ಕಡೆ ನಮ್ಗೆ ಬಿಗ್ ಬಾಸ್‌ಗೆ ಏನ್ ಕೆಲಸ ಅಂತ ಯೋಚ್ನೆ ಮಾಡ್ಬೇಕು.. ಯಾಕಂದ್ರೆ, ಟಾಸ್ಕ್ ಅವ್ರೊಂದು ಕೊಟ್ರೆ ಇವ್ರು ಒಂದು ಕ್ರಿಯೇಟ್ ಮಾಡ್ತಾ ಇರ್ತಾರೆ ಇಲ್ಲಿ ಕೂತ್ಕೊಂಡು.. ಎಲ್ಲಾರಿಗೂ, ಸುದೀಪ್ ಇದಲ್ಲಾರಿ ಟಾಸ್ಕು, ಹೇಳ್ತೀನಿ ಕೇಳಿ.. ಅವ್ರು ಮಾಡ್ಸೋದು ತಪ್ರೀ, ಬಿಗ್ ಬಾಸೇ ತಪ್ರೀ.. ಎಲ್ಲಾನೂ ತಪ್ಪು ಅಂದ್ಬಿಟ್ಟು.. ಉಪೇಂದ್ರ ಅವ್ರು ಮನೆಯೊಳಗೆ ಇದ್ರೆ ಕಂಟೆಸ್ಟಂಟ್ ಆಗಿ, ಸಪೋಸ್ 18 ಜನ ಕಂಟೆಸ್ಟಂಟ್ ಅಗಿ ಮೆನಯೊಳಗೆ ಇದ್ರೆ ಉಳಿದ 17 ಜನ ಕಳಪೆ ಪಟ್ಟಕ್ಕೆ ಹೋಗ್ತಾರೆ.. ಉಳಿದವರೆಲ್ಲರೂ ಮನೆ ಹೊರಗೆ ಇರ್ತಾರೆ' ಎಂದು ಹೇಳಿದಾಗ ಸ್ವತಃ ಸುದೀಪ್ ಸೇರಿದಂತೆ ನಿರೂಪಕರೂ ಕೂಡ ನಕ್ಕಿದ್ದಾರೆ.

ಯಶ್ ಕುದಿಯುತ್ತಿದ್ದಾರೆ, ಬೇಯುತ್ತಿದ್ದಾರೆ, ನರಳುತ್ತಿದ್ದಾರೆ: ಯಾಕೆ ಈ ಸುದ್ದಿ ಹಬ್ಬಿದೆ?

 

 

Latest Videos
Follow Us:
Download App:
  • android
  • ios