ಸಾಕಷ್ಟು ಹವಾ ಸೃಷ್ಟಿಸಿರೋ ಕೆಜಿಎಫ್ 2 ಸಿನಿಮಾ ತಂಡ ವಿಶ್ವ ಮಹಿಳಾ ದಿನಾಚರಣೆಯಂದು ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. ಇದೀಗ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದೆ.

ವಿಶ್ವದಾದ್ಯಂತ ಇರುವ ಪವರ್ಫುಲ್ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಕ್ಯಾಪ್ಶನ್ ಕೊಟ್ಟು ಫೋಟೊ ಶೇರ್ ಮಾಡಿದ್ದಾರೆ.

ದರ್ಶನ್‌ ಧರಿಸೋ ಒಂದೊಂದು ಜೀನ್ಸ್‌ ಪ್ಯಾಂಟ್‌ ಬೆಲೆ ಎಷ್ಟು ಗೊತ್ತಾ?

ಕೆಜಿಎಫ್ನಲ್ಲಿ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದ ಟೀಸರ್ ಯಶ್ ಬರ್ತ್ಡೇ ದಿನ ಬಿಡುಗಡೆಯಾಗಿತ್ತು.

ಜುಲೈ 16ರಂದು ಸಿನಿಮಾ ರಿಲೀಸ್ ಆಗಲಿದೆ. ಬಾಲಿವುಡ್ ನಟ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಇದು ಬಹು ನಿರೀಕ್ಷಿತ ಸೀಕ್ವೆಲ್ ಸಿನಿಮಾ.