ರಾಕಿಂಗ್ ಸ್ಟಾರ್ ಯಶ್ ಎಲ್ಲೇ ಹೋದರೂ ಡೌನ್ ಟು ಅರ್ಥ್ ಆಗಿರುತ್ತಾರೆ. ಎಲ್ಲಿಯೂ ಸ್ಟಾರ್‌ಗಿರಿಯನ್ನು ತೋರಿಸುವವರಲ್ಲ. ಯಶ್ ಸರಳತೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

'ನಂದ ಲವ್ಸ್ ನಂದಿತಾ'ದಲ್ಲಿ ಮಿಂಚಿದ ಜಿಂಕೆ ಮರಿ ಈಗ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ!

ಯಶ್ ಕಾರ್ಯಕ್ರಮವೊಂದನ್ನು ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವಾಗ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಮ್ಮ ಸೈನಿಕರು ಬೇರೆ ಬೇರೆ ಊರಿಗೆ ತೆರಳುತ್ತಿದ್ದರು. ಯಶ್‌ರನ್ನು ಕಂಡ ಕೂಡಲೇ ವಿಶ್ ಮಾಡಿ ಸೆಲ್ಫಿ ಕೇಳಿದರು. ಆಗ ಯಶ್, 'ಸರ್ ನಾವು ನಿಮ್ಮ ಜೊತೆ ಸೆಲ್ಫಿ ಕೇಳಬೇಕು. ನೀವು ನಮ್ಮ ದೇಶದ ವೀರರು.  ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳೋದೇ ನಮ್ಮ ಅದೃಷ್ಟ. ನಿಮ್ಮ ಮುಂದೆ ನಾವೇನು ಅಲ್ಲ' ಎಂದು ಆಪ್ತತೆ ಮೆರೆದರು. ಸೆಲ್ಫಿ ತೆಗೆಸಿಕೊಂಡು ಅಲ್ಲಿಂದ ಹೊರಡುವಾಗ ಸೈನಿಕರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಸೈನಿಕರು ಕೂಡಾ ಯಶ್‌ಗೆ ಸೆಲ್ಯೂಟ್ ಮಾಡಿದ್ದಾರೆ.  ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

'ದಬಾಂಗ್ -3' ಬಿಟ್ಟು ಕ್ರಿಕೆಟ್‌ ಸ್ಟಾರ್‌ಗಳ ಕಾಣಿಸಿಕೊಂಡ ಸುದೀಪ್ -ಸಲ್ಲುಭಾಯ್!

ಯಶ್ ಮಗಳ ವಿಚಾರದಲ್ಲಿಯೂ ಹೇಳಿರುವ ಹೇಳಿಕೆಯೂ ಗಮನ ಸೆಳೆದಿದೆ. ನನ್ನ ಮಗಳು ಎಂದು ಗೌರವ ಕೊಡಬೇಡಿ. ಬೆಳೆದು ದೊಡ್ಡವರಾದ ಮೇಲೆ ಏನಾದರೂ ಸಾಧನೆ ಮಾಡಿದ ಬಳಿಕ ಗೌರವ ಕೊಡಿ. ಎಲ್ಲಾ ಮಕ್ಕಳು ಒಂದೇ. ಎಲ್ಲರನ್ನೂ ಪ್ರೀತಿಸಿ' ಎಂದು ಹೇಳಿದ್ದಾರೆ.