Asianet Suvarna News Asianet Suvarna News

ರಾಕಿಂಗ್ ಸ್ಟಾರ್ ಹೀರೋ ಆಗಿ 15 ವರ್ಷ: ಯಶ್-ರಾಧಿಕಾ 'ಮೊಗ್ಗಿನ ಮನಸು' ಚಿತ್ರಕ್ಕೆ ಒಂದೂವರೆ ದಶಕದ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಟನೆಯ ಮೊಗ್ಗಿನ ಮನಸ್ಸು ಸಿನಿಮಾ ರಿಲೀಸ್ ಆಗಿ 15 ವರ್ಷಗಳಾಗಿದೆ. 2008 ಜುಲೈ 18ಕ್ಕೆ ಸಿನಿಮಾ ರಿಲೀಸ್ ಆಗಿತ್ತು.  

kgf star yash and radhika pandit starrer first film Moggina manasu completes 15 years sgk
Author
First Published Jul 18, 2023, 11:16 AM IST

ರಾಕಿಂಗ್ ಸ್ಟಾರ್ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ತನ್ನ ಮಾರುಕಟ್ಟೆಯನ್ನು ದೊಡ್ಡದಾಗಿ ವಿಸ್ತರಿಸಿಕೊಂಡಿದ್ದಾರೆ. ಪತ್ನಿ, ನಟಿ ರಾಧಿಕಾ ಕೂಡ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದಕ್ಕೆಲ್ಲ ನಾಂದಿ ಹಾಡಿದ್ದೆ ಮೊಗ್ಗಿನ ಮನಸ್ಸು ಸಿನಿಮಾ. ಯಶ್ ಮತ್ತು ರಾಧಿಕಾ ಒಟ್ಟಿಗೆ ನಟಿಸಿದ್ದ ಮೊದಲ ಸಿನಿಮಾವದು. ಮೊದಲ ಸಿನಿಮಾದಲ್ಲಿಇಬ್ಬರೂ ಅಭಿಮಾನಿಗಳ ಹೃದಯ ಗೆದ್ದರು. ಅಂದಹಾಗೆ ಆ ಸಿನಿಮಾ ರಿಲೀಸ್ ಆಗಿ 15 ವರ್ಷಗಳಾಗಿವೆ. 2008 ಜುಲೈ 18ರಂದು ಮೊಗ್ಗಿನ ಮನಸು ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂತು.  

ಹದಿಹರಿಯದ ಪ್ರೇಮ ಕಥೆಯಾಗಿದ್ದ ಮೊಗ್ಗಿನ ಮನಸ್ಸು ಇಂದಿಗೂ ಫೇವರ್ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾದ ಹಾಡುಗಳು, ಕತೆ, ನಿರ್ದೇಶನ, ಕಲಾವಿದ ಅಭಿನಯ ಪ್ರತಿಯೊಂದು ವಿಚಾರದಲ್ಲೂ ಮೊಗ್ಗಿನ ಮನಸು ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿತ್ತು. ಸದ್ಯ 15 ವರ್ಷಗಳು ತುಂಬಿರುವ ಈ ಸಮಯದಲ್ಲಿ ಅಭಿಮಾನಿಗಳು ಫೋಟೋಗಳನ್ನು ಶೇರ್ ಮಾಡಿ ನೆನಪಿಸಿಕೊಳ್ಳುತ್ತಿದ್ದಾರೆ. 

ಮೊಗ್ಗಿನ ಮನಸು ಚಿತ್ರಕ್ಕೆ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿದ್ದರು. ಸೂಕ್ಷ್ಮವಾದ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕ ಶಶಾಂಕ್ ಎತ್ತಿದ ಕೈ. ಮೊಗ್ಗಿನ ಮನಸು ಚಿತ್ರಕ್ಕೂ ಅಭಿಮಾನಿಗಳು ಫಿದಾ ಆಗಿದ್ದರು. ಮನೊಮೂರ್ತಿ ಸಂಗೀತ ಕೂಡ ಗಾನಯಪ್ರಿಯರ ಹೃದಯ ಗೆದ್ದಿತ್ತು. ಈ ಸಿನಿಮಾ ಮೂಲಕವೇ ನಟಿ ಶುಭಾ ಪೂಂಜಾ ಕೂಡ ಖ್ಯಾತಿಗಳಿಸಿದರು. 

ಮೊಗ್ಗಿನ ಮನಸು ಸಿನಿಮಾದಲ್ಲಿ ಯಶ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಆದರೀಗ ಯಶ್ ಮಾಸ್ ಹೀರೋ ಆಗಿ ಬೆಳೆದಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ 19ನೇ ಸಿನಿಮಾ ಯಾವಾಗ ಅನೌನ್ಸ್ ಮಾಡ್ತಾರೆ ಎಂದು ಎದುರು ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ  #Yash19 ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗುತ್ತಿದೆ. ಕೆಜಿಎಫ್ -2 ಸಿನಿಮಾ ರಿಲೀಸ್ ಆಗಿ 1 ವರ್ಷದ ಮೇಲಾಗಿದೆ. ಆದರೂ ಯಶ್ ಸಿನಿಮಾ ಅನೌನ್ಸ್ ಮಾಡಿಲ್ಲ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. 

'ಜವಾನ್' ಪಾತ್ರದ ತಯಾರಿಗೆ ಯಶ್ ಸಿನಿಮಾ ನೋಡಿರುವುದಾಗಿ ಬಹಿರಂಗ ಪಡಿಸಿದ ಶಾರುಖ್ ಖಾನ್
 
ಮೊಗ್ಗಿನ ಮನಸು ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಯಶ್​ ಮತ್ತು ರಾಧಿಕಾ ಪಂಡಿತ್​ ರಿಯಲ್​ ಲೈಫ್​ನಲ್ಲಿಯೂ ಒಂದಾದರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಮದುವೆ ಬಳಿಕ ರಾಧಿಕಾ ಒಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದರು. ಬಳಿಕ ನಟನೆಯಿಂದ ದೂರ ಇದ್ದಾರೆ. ಸದ್ಯ ಕುಟುಂಬ ಮತ್ತು ಮಕ್ಕಳ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.

ಕೆಜಿಎಫ್ ದೊರೆಗೆ ಚಿನ್ನದಂಥ ಸ್ವಾಗತ: ಯಶ್ ಮಲೇಷ್ಯಾ ವಿಡಿಯೋ ಹೇಗಿದೆ ನೋಡಿ..?

ನಿರ್ದೇಶಕ ಶಶಾಂಕ್ ಅವರಿಗೂ ಈ ಸಿನಿಮಾ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಅನೇಕ ಸ್ಟಾರ್ ಕಲಾವಿದರಿಗೆ ಸಿನಿಮಾ ಮಾಡಿದರು. ಸದ್ಯ ಅವರು ನಿರ್ದೇಶನ ಮಾಡಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್​ ಮುಂತಾದವರು ನಟಿಸಿದ್ದು, ಜುಲೈ 28ರಂದು ರಿಲೀಸ್​ ಆಗುತ್ತಿದೆ. 

Latest Videos
Follow Us:
Download App:
  • android
  • ios