ಡಿ.17ರಂದು ಮುರಳಿ ಬರ್ತಡೇ ದಿನ ಫಸ್ಟ್‌ ಲುಕ್‌ ರಿಲೀಸ್‌ ಆಗಲಿದೆ. ಈ ವಿಚಾರವನ್ನು ಮುರಳಿ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

'ದಯವಿಟ್ಟು ವಿಡಿಯೋ ಲೀಕ್ ಮಾಡಬೇಡಿ' ಪರಿಪರಿಯಾಗಿ ಕೇಳಿಕೊಂಡ ಆಶಿಕಾ! 

‘ನನ್ನ ಗಾಡ್‌ಫಾದರ್‌ ಪ್ರಶಾಂತ್‌ ನೀಲ್‌. ಅವರಿಂದ ನನ್ನ ಮದಗಜ ಸಿನಿಮಾದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಮಾಡಿಸಲು ಖುಷಿಯಾಗುತ್ತಿದೆ. ಟೀಸರ್‌ ಬಿಡುಗಡೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ’ ಎಂದು ಶ್ರೀಮುರಳಿ ಬರೆದುಕೊಂಡಿದ್ದಾರೆ. ಮದಗಜ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ನ ವಿಡಿಯೋ ತುಣುಕು ಈಗಾಗಲೇ ಬಿಡುಗಡೆಯಾಗಿ ಚಿತ್ರದ ಬಗ್ಗೆ ಅಭಿಮಾನಗಳಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದೆ. 

ಶ್ರೀಮುರಳಿಯ 'ಮದಗಜ' ರಿಲೀಸ್‌ಗೆ ಡೇಟ್‌ ಫಿಕ್ಸ್! 

ಮಹೇಶ್‌ ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಉಮಾಪತಿ ಬಂಡಬಾಳ ಹಾಕುತ್ತಿದ್ದಾರೆ. ಮುರಳಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಆಶಿಕಾ ರಂಗನಾಥ್‌ ಕೆಲವು ದಿನಗಳ ಹಿಂದೆ ಬೇಸರ ವ್ಯಕ್ತ ಪಡಿಸಿದ್ದರು. ಮದಗಜ ಚಿತ್ರೀಕರಣದ ಕೆಲವೊಂದು ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದಯವಿಟ್ಟು ಇಂಥ ಕೆಲಸ ಮಾಡಬೇಡಿ ಎಂದು ಆಶಿಕಾ ಮನವಿ ಮಾಡಿಕೊಂಡಿದ್ದರು.

 

 
 
 
 
 
 
 
 
 
 
 
 
 
 
 

A post shared by SriiMurali (@sriimurali)