Salam Rocky Bhai Song Release: ಕೆಜಿಎಫ್ ಟೈಟಲ್ ಟ್ರ್ಯಾಕ್‌ನಲ್ಲಿ ಅಬ್ಬರಿಸಿದ ರಾಕಿ ಭಾಯ್
ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್' ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ಇದೀಗ ಪಾರ್ಟ್ 2 ಮೂಲಕ ಅದೇ ಅಬ್ಬರ ಮುಂದುವರಿಸೋಕೆ ರಾಕಿ ಭಾಯ್ ಸಜ್ಜಾಗಿದ್ದು, ಅದಕ್ಕೆ ಮುನ್ನಡಿಯಾಗಿ ಹೊಂಬಾಳೆ ಪ್ರೊಡಕ್ಷನ್ 'ಸಲಾಂ ರಾಕಿ ಭಾಯ್ ವಿಡಿಯೋ ಸಾಂಗ್' ಅನ್ನು ಬಿಡುಗಡೆ ಮಾಡಿದೆ.
ಸ್ಯಾಂಡಲ್‌ವುಡ್‌ನ (Sandalwood) ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' (KGF 2) ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆಕ್ಷನ್ ಕಟ್ ಹೇಳಿದ್ದಾರೆ. ಮುಖ್ಯವಾಗಿ 'ಕೆಜಿಎಫ್' (KGF) ಮೊದಲ ಭಾಗ ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ಇದೀಗ ಭಾಗ 2ರ ಮೂಲಕ ಅದೇ ಅಬ್ಬರ ಮುಂದುವರಿಸೋಕೆ ರಾಕಿ ಭಾಯ್ ಸಜ್ಜಾಗಿದ್ದು, ಅದಕ್ಕೆ ಮುನ್ನುಡಿಯಾಗಿ ಹೊಂಬಾಳೆ ಪ್ರೊಡಕ್ಷನ್ (Hombale Productions) 'ಸಲಾಂ ರಾಕಿ ಭಾಯ್ ವಿಡಿಯೋ ಸಾಂಗ್' (Salaam Rocky Bhai) ಅನ್ನು ಬಿಡುಗಡೆ ಮಾಡಿದೆ.
'ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ? ಸಲಾಮ್ ರಾಕಿ ಭಾಯ್' ಎಂಬ ಅಡಿಬರಹದೊಂದಿಗೆ ವಿಡಿಯೋ ಸಾಂಗ್ ಕುರಿತು ಹೊಂಬಾಳೆ ಪ್ರೊಡಕ್ಷನ್ ಕೂ (Koo) ಮಾಡಿದೆ. ವಿಡಿಯೋದ ಕೊನೆಯಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ತಿಳಿಸಲಾಗಿದ್ದು, ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್-2 ಸಿನಿಮಾ ಎಲ್ಲೆಡೆ ತೆರೆಕಾಣಲಿದೆ. ಈ ಹಾಡಿಗೆ ನಾಗೇಂದ್ರ ಪ್ರಸಾದ್ (Nagendra Prasad) ಸಾಹಿತ್ಯ ರಚಿಸಿದ್ದು, ವಿಜಯ್ ಪ್ರಕಾಶ್, ಮೋಹನ್ ಕೃಷ್ಣ, ಸಂತೋಷ್ ವೆಂಕಿ ಸೇರಿದಂತೆ ಹಲವಾರು ಗಾಯಕರು ದನಿಯಾಗಿದ್ದಾರೆ. ರವಿ ಬಸ್ರೂರು (Ravi Basrur) ಹಾಡಿಗೆ ಕ್ಯಾಚೀ ಟ್ಯೂನ್ ಹಾಕಿದ್ದಾರೆ.
KGF 2 Updates: ಅಧೀರ ಪಾತ್ರದ ಡಬ್ಬಿಂಗ್ ಮುಗಿಸಿದ ಸಂಜಯ್ ದತ್
ಇತ್ತೀಚೆಗಷ್ಟೇ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜಯ್ದತ್ ಅವರ ಡಬ್ಬಿಂಗ್ ಮುಕ್ತಾಯಗೊಳ್ಳುವ ಮೂಲಕ ಎಲ್ಲಾ ಭಾಷೆಗಳ ಡಬ್ಬಿಂಗ್ ಕೆಲಸ ಮುಕ್ತಾಯಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು. ಅಧೀರಾ ಈಸ್ ಬ್ಯಾಕ್ 'ಕೆಜಿಎಫ್ 2' ಚಿತ್ರದ ಅಧೀರನ ಪಾತ್ರಕ್ಕೆ ಡಬ್ಬಿಂಗ್ ಮುಗಿದಿದೆ. ದೊಡ್ಡ ಪರದೆ ಮೇಲೆ ಮುಂದಿನ ವರ್ಷ ಏಪ್ರಿಲ್ 24ಕ್ಕೆ ಸಿಗೋಣ ಎಂದು ಪ್ರಶಾಂತ್ ನೀಲ್ ಟ್ವೀಟ್ (Tweet) ಮಾಡಿದ್ದರು. ಹಾಗೂ ನಟ ಯಶ್ ಕೂಡ ಹಿಂದಿಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ.
'ಕೆಜಿಎಫ್ 2' ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ವಿಶ್ವದಾದ್ಯಾಂತ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ. ಈ ಹಿಂದೆ 2021ರ ಜುಲೈ 16 ಕ್ಕೆ 'ಕೆಜಿಎಫ್ 2' ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಕೊರೋನಾದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರ ರಿಲೀಸ್ ಆಗಲಿದೆ.
ರವೀನಾ ಟಂಡನ್‌ಗೆ ವಿಶೇಷವಾಗಿ ವಿಶ್ ಮಾಡಿದ ಪ್ರಶಾಂತ್ ನೀಲ್
ರವಿ ಬಸ್ರೂರ್ (Ravi Basrur) ಸಂಗಿತ ಸಂಯೋಜನೆ ಚಿತ್ರಕ್ಕಿದ್ದು, ಪ್ರಕಾಶ್ ರಾಜ್ (Prakash Raj), ತೆಲುಗು ನಟ ರಾವ್ ರಮೇಶ್ (Rao Ramesh) ಮತ್ತು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಚಿತ್ರದ ಆಕರ್ಷಣೆಯಾಗಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರಮೀಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಅಭಿನಯಿಸಿದ್ದಾರೆ. ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ (SriNidhi Shetty) ನಟಿಸಿದ್ದಾರೆ. ಇನ್ನು ಕೆಲ ತಿಂಗಳ ಹಿಂದಷ್ಟೇ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿ ಸಿನಿರಸಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.