ಮೊನ್ನೆ ಮೊನ್ನೆ ತುಂಬ ಹುಷಾರಿಲ್ಲ ಅಂತ ಎಫ್‌ಬಿಯಲ್ಲಿ ವೀಡಿಯೋ ಮಾಡಿದ್ದ ಮಾಳವಿಕಾ ಅವಿನಾಶ್ ಸಡನ್ನಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ ಹುಡುಗಿ ಥರದ ಲುಕ್ ನೋಡಿ ಕಣ್ಣೇ ಅದಿರಿಂದಿ ಅಂತಿದ್ದಾರೆ ಅವರ ಫ್ಯಾನ್ಸ್.
ನಿತ್ತಿಲೆ
ಮಾಳವಿಕಾ ಅವಿನಾಶ್ ಅಂದ ಕೂಡಲೇ ನೆನಪಾಗೋದು 'ಮಾಯಾಮೃಗ' ಸೀರಿಯಲ್. ಒಂದು ಜನರೇಶನ್ನೇ ಈ ಸೀರಿಯಲ್ ನೋಡಿಕೊಂಡು ಬೆಳೆದಿದೆ. ಅದಕ್ಕೂ ಮೊದಲು ಉದಯ ಟಿವಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು ಮಾಳವಿಕಾ. ಟಿ ಎನ್ ಸೀತಾರಾಂ ನಿರ್ದೇಶನದ ಮಾಯಾಮೃಗ ಸೀರಿಯಲ್, ಅದರಲ್ಲಿ ಅವರದೇ ಹೆಸರಿನ ಪಾತ್ರ ಅವರೊಳಗಿನ ನಟಿಯನ್ನು ಹೊರತಂದಿತು. ಅವರ ಇಮೇಜನ್ನು ಬೇರೆಯದೇ ಲೆವೆಲ್‌ಗೆ ಕೊಂಡೊಯ್ಯಿತು. ಆಮೇಲೆ ಸಿನಿಮಾ, ಸೀರಿಯಲ್ ಅಂತೆಲ್ಲ ಬ್ಯುಸಿ ಆಗಿಬಿಟ್ಟರು ಮಾಳವಿಕಾ. ಯಾವಾಗ ರಾಜಕೀಯ ಪ್ರವೇಶ ಮಾಡಿದರೋ ಆಗ ಎಂಟರ್‌ಟೈನರ್‌ಮೆಂಟ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಾಗಲಿಲ್ಲ. ಬಿಜೆಪಿ ಪಕ್ಷದ ಅನೇಕ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಾ ಪಕ್ಷದಲ್ಲೂ ರಾಜಕೀಯ ವಲಯದಲ್ಲೂ ತಮ್ಮದೇ ಛಾಪು ಮೂಡಿಸಿಕೊಂಡು ಮುನ್ನಡೆದರು ಮಾಳವಿಕಾ. ಇವತ್ತಿಗೂ ಮಾಳವಿಕಾ ಮುಂದೆ ನಿಂತು ವಾಗ್ವಾದ ಮಾಡಲು ಅಂಜುವವರು ಬಹಳ ಮಂದಿ ಇದ್ದಾರೆ. ಏಕೆಂದರೆ ಈ ಪ್ರತಿಭಾವಂತ ನಟಿ ಲಾ ಓದಿದ್ದಾರೆ.
ಹಳೇ ಫೋಟೋ ಶೇರ್ ಮಾಡಿದ ಮಾಳವಿಕಾ: ನಟಿಯ ಮನೆ, ಮನದಲ್ಲಿ ವಿಷ್ಣುವರ್ಧನ್!
ಆದರೆ ಸಡನ್ನಾಗಿ ಮಾಳವಿಕಾ ಲುಕ್ ಬದಲಿಸಿಕೊಂಡಿದ್ದಾರೆ. ಇದು ಅವರ ಅನೇಕ ಮಂದಿ ಫ್ಯಾನ್ಸ್‌ನ ಅಚ್ಚರಿಗೆ ಕೆಡವಿದೆ. ಸಡನ್ನಾಗಿ ಮಾಳವಿಕಾ ಈ ರೀತಿ ಆಗಲು ಕಾರಣ ಏನು ಅನ್ನೋ ವಿಚಾರ ಅವರ ತಲೆಗೆ ಹುಳ ಬಿಟ್ಟಂತಾಗಿದೆ. ಏಕೆಂದರೆ ಕೆಲವು ದಿನಗಳ ಕೆಳಗೆ ಮಾಳವಿಕಾ ತಾವು ಅನಾರೋಗ್ಯದಲ್ಲಿದ್ದ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ನೋಡಿ ಬಹಳ ಮಂದಿ ಗಾಬರಿಯಲ್ಲಿ ರಿಯಾಕ್ಟ್ ಮಾಡಿದ್ದರು. ಈಗ ಜೀವನೋತ್ಸಾಹ ಬಿಂಬಿಸೋ ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ ಜನ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಲುಕ್‌ನಲ್ಲಿ ಗಮನ ಸೆಳೆಯೋದು ಮಾಳವಿಕಾ ಹೇರ್‌ಸ್ಟೈಲ್. ಸಖತ್ ಸ್ಟೈಲಿಶ್ ಆಗಿ ಹೇರ್‌ಕಟ್ ಮಾಡಿಸ್ಕೊಂಡು ಲವ್ಲಿ ಲೇಡಿಯಂತೆ ಕಾಣ್ತಾರೆ. ಇನ್ನೊಂದು ಅಂದರೆ ಕಣ್ಣುಗಳ ಮೇಕಪ್. ಇದ್ಯಾಕೋ ಕೊಂಚ ಓವರಾಯ್ತು ಅಂದರೆ ಅವರ ಅಭಿಮಾನಿಗಳಿಗೆ ಬೇಜಾರಾಗಬಹುದೇನೋ. ಹೀಗಾಗಿ ಕಣ್ಣುಗಳನ್ನು ನೋಡಿದ್ರೆ ಬಾರ್ಬಿ ಡಾಲ್ ಕಣ್ಣುಗಳು ನೆನಪಾಗ್ತವೆ ಅನ್ನಬಹುದೇನೋ. ಬಹುಶಃ ಬಾರ್ಬಿ ಸ್ಟೈಲ್ ಅಂತ ಮಾಳವಿಕಾ ಈ ಲುಕ್ ಟ್ರೈ ಮಾಡಿರಬಹುದೇನೋ.
ಇನ್ನೊಂದು ವಿಷ್ಯ ಅಂದರೆ ಮಾಳವಿಕಾ ಮೊದಲಿಗಿಂತ ಸ್ಲಿಮ್ ಆಗಿರೋದನ್ನು ಗಮನಿಸಬಹುದು. ಇತ್ತೀಚೆಗೆ ಅವರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ತೆಗೆಸಿಕೊಂಡ ಫೋಟೋ ಎಫ್‌ಬಿಯಲ್ಲಿ ಶೇರ್ ಮಾಡಿದ್ದರು. ಅದರಲ್ಲೂ ಅವರು ಸಣ್ಣಗಾಗಿದ್ದು ಗಮನ ಸೆಳೆಯೋ ಹಾಗಿತ್ತು. ರಾಜಕೀಯಕ್ಕೆ ಬಂದಾಗ ಸಾಮಾನ್ಯವಾಗಿ ದೇಹದ ಕಡೆ ಗಮನ ಕಡಿಮೆಯಾಗುತ್ತಾ ಹೋಗುತ್ತೆ. ಸ್ಟ್ರೆಸ್, ಮೀಟಿಂಗ್‌ಗಳು, ಕಾರಲ್ಲೇ ಓಡಾಟ ಇತ್ಯಾದಿಗಳಿಂದ ಬೊಜ್ಜು ಇಲ್ಲದ ರಾಜಕಾರಣಿಗಳೇ ಇಲ್ಲ ಅನ್ನಬಹುದೇನೋ. ಕೃಷ್ಣ ಭೈರೇಗೌಡ, ನಯನಾ ಮೋಟಮ್ಮ ಥರದವರು ಅಲ್ಲೊಬ್ಬರು ಇಲ್ಲೊಬ್ಬರು ಕಾಣ ಸಿಗ್ತಾರೆ ಬಿಟ್ಟರೆ, ಹೆಚ್ಚಿನವರೆಲ್ಲ ಸ್ಥೂಲಕಾಯದವರೇ. ಮಾಳವಿಕಾ ಅವರೂ ರಾಜಕೀಯಕ್ಕೆ ಬಂದಮೇಲೆ ತೂಕ ಹೆಚ್ಚಿಸಿಕೊಂಡಿದ್ದು ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ಈಗ ತೂಕ ಇಳಿಸಿಕೊಂಡಿರೋದೂ ಸ್ಪಷ್ಟವಾಗಿ ಕಾಣ್ತಿದೆ. ಇದರಿಂದ ಯಂಗ್ ಯಂಗ್ ಆಗಿ ಕಾಣ್ತಿದ್ದಾರೆ. ಇದನ್ನು ನೋಡಿ ರಾಜಕೀಯ ಬಿಟ್ಟು ಸಿನಿಮಾದಲ್ಲೇ ಫುಲ್ ಟೈಮ್ ತೊಡಗಿಸಿಕೊಳ್ತೀರಾ ಮೇಡಂ ಅಂತ ಜನ ಕುತೂಹಲದಿಂದ ಪ್ರಶ್ನೆ ಮಾಡ್ತಿದ್ದಾರೆ.
ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ; ಆಪ್ತಮಿತ್ರನ ಮೇಲಿನ ಅಪಾರ ಪ್ರೀತಿ ಬಿಚ್ಚಿಟ್ಟ ಮಾಳವಿಕಾ-ಅವಿನಾಶ್
ಆದರೆ ಮಾಳವಿಕಾ ಇದ್ಯಾವುದಕ್ಕೂ ಉತ್ತರಿಸೋ ಗೋಜಿಗೆ ಹೋದಂತಿಲ್ಲ. ಸ್ಲಿಮ್ ಆದ ಮಾತ್ರಕ್ಕೆ ಅವರು ರಾಜಕೀಯದಿಂದ ನಿವೃತ್ತರಾಗಿಲ್ಲ ಅನ್ನೋದನ್ನು ಅವರ ಪೋಸ್ಟ್‌ಗಳೇ ಎತ್ತಿ ತೋರಿಸುತ್ತವೆ. ಯಾವ ಹುಡುಗಿಯೂ ಮದುವೆ ಆಗಲು ಒಪ್ಪದೇ ಆತ್ಮಹತ್ಯೆ ಮಾಡಿಕೊಂಡ ಯುವಕ ಫೋಟೋ ಹಾಕಿ ಈ ಅಂಶದ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಾರೆ. ಆಡಳಿತ ಪಕ್ಷದ ಕೆಲವು ನಿಲುವುಗಳನ್ನು ಪ್ರಶ್ನೆ ಮಾಡುತ್ತಾರೆ. ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಇದರ ಜೊತೆಗೆ ತಮ್ಮ ಪ್ರೀತಿಯ ಸಂಗೀತ, ನೃತ್ಯದ ಬಗೆಗಿನ ಪೋಸ್ಟ್‌ಗಳನ್ನೂ ಮಾಡುತ್ತಿರುತ್ತಾರೆ. ಸದ್ಯ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ಕಾರಣ ಮಾಳವಿಕಾ ಅವರಿಗೆ ಕೊಂಚ ಬಿಡುವು ಸಿಕ್ಕಂತಿದೆ. ಇದರಲ್ಲಿ ಸ್ವಲ್ಪ ಸಮಯವನ್ನು ತಮ್ಮ ಆರೋಗ್ಯ, ಫಿಟ್‌ನೆಸ್ ಕಾಯ್ದುಕೊಳ್ಳಲು, ನಟನಾ ಜಗತ್ತಿಗೆ ಹೆಚ್ಚು ಫೋಕಸ್ ಮಾಡಲು ಅವರು ಮೀಸಲಿಟ್ಟ ಹಾಗಿದೆ. ಏನೇ ಆಗಲಿ, ಮಾಳವಿಕಾ ನ್ಯೂ ಲುಕ್‌ನಲ್ಲಿ ಸಿನಿಮಾಗಳಲ್ಲಿ ಇನ್ನಷ್ಟು ಸಕ್ರಿಯವಾಗಲಿ ಅಂತ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ವಿಡಿಯೋ ಇಲ್ಲಿದೆ, ಕ್ಲಿಕ್ ಮಾಡಿ: https://www.facebook.com/reel/174848348797944
