ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ; ಆಪ್ತಮಿತ್ರನ ಮೇಲಿನ ಅಪಾರ ಪ್ರೀತಿ ಬಿಚ್ಚಿಟ್ಟ ಮಾಳವಿಕಾ-ಅವಿನಾಶ್
ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ ಇಟ್ಟು ಪೂಜೆ ಮಾಡುವ ಬಗ್ಗೆ ನಟ ಅವಿನಾಶ್ ಮತ್ತು ಮಾಳವಿಕಾ ದಂಪತಿ ಬಹಿರಂಗ ಪಡಿಸಿದ್ದಾರೆ.
ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ವೀಕೆಂಡ್ ವಿತ್ ರಮೇಶ್‌ನ ಈ ವಾರದ ಅತಿಥಿಗಳಾಗಿ ಅವಿನಾಶ್ ಮತ್ತು ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವೀಕೆಂಡ್ ಕುರ್ಚಿ ಮೇಲೆ 5 ಅತಿಥಿಗಳು ಕುಳಿತಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಪ್ರಭುದೇವ, ಡಾ.ಮಂಜುನಾಥ್, ಹಿರಿಯ ನಟ ದತ್ತಣ್ಣ ಹಾಗೂ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿ ಏರಿದ್ದಾರೆ. ಈ ಬಾರಿಯ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.
ಈಗಾಗಲ್ ನಟ ಅವಿನಾಶ್ ಅವರ ಪ್ರೋಮೋ ರಿಲೀಸ್ ಮಾಡಲಾಗಿದೆ. ವೀಕೆಂಡ್ ವಿತ್ ರಮೇಶ್ ಅಂದಮೇಲೆ ಸಾಕಷ್ಟು ವಿಚಾರಗಳು ಬಹಿರಂಗವಾಗಲಿದೆ. ಅಭಿಮಾನಿಗಳಿಗೆ ಗೊತ್ತಿರದ ಅನೇಕ ಇಂಟ್ರಸ್ಟಿಂಗ್ ವಿಚಾರಗಳು ತೆರೆದುಕೊಳ್ಳಲಿದೆ. ಅದರಂತೆ ಅವಿನಾಶ್ ಅವರ ಬಗ್ಗೆಯೂ ಸಾಕಷ್ಟು ವಿಚಾರಗಳು ಬಹಿರಂಗವಾಗಿದ್ದು ಅವಿನಾಶ್ ಸಂಚಿಕೆ ನೋಡಲು ಅಭಿಮಾನಿಗಳು ಕಾರತರಾಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಅವಿನಾಶ್ ಮತ್ತು ಪತ್ನಿ ಹಾಗೂ ನಟಿ ಮಾಳವಿಕಾ ಅವರು ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ್ದಾರೆ.
ಅವಿನಾಶ್ ಮತ್ತು ಮಾಳವಿಕಾ ಅವರಿಗೆ ವಿಷ್ಣುವರ್ಧನ್ ಎಂದರೆ ತುಂಬಾ ಪ್ರೀತಿ. ಅವರನ್ನು ದೇವರ ಹಾಗೆ ಪೂಜಿಸುತ್ತಾರೆ. ಡಾ.ವಿಷ್ಣುವರ್ಧನ್ ಅವರಿಗೆ ದೇವರ ಸ್ಥಾನ ನೀಡಿದ ಬಗ್ಗೆ ವೀಕೆಂಡ್ ಟೆಂಟ್ ನಲ್ಲಿ ಬಹಿರಂಗ ಪಡಿಸಿದ್ದಾರೆ ಅವಿನಾಶ್ ಮತ್ತು ಮಾಳವಿಕಾ. ವಿಷ್ಣುವರ್ಧನ್ ಫೋಟೋವನ್ನು ದೇವರಮನೆಯಲ್ಲಿ ಇರಿಸಿ ಪ್ರತಿದಿನ ಪೂಜೆ ಮಾಡುತ್ತಾರೆ. ಈ ಬಗ್ಗೆ ವೀಕೆಂಡ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಿರೂಪಕ ರಮೇಶ್ ಅರವಿಂದ್ ಈ ಬಗ್ಗೆ ಪ್ರಶ್ನೆ ಮಾಡಿದರು. 'ವಿಷ್ಣುವರ್ಧನ್ ಫೋಟೋ ದೇವರಮನೆಯಲ್ಲಿ ಇದೆ ನಿಜನಾ?' ಎಂದು ರಮೇಶ್ ಅರವಿಂದ್ ಕೇಳಿದರು.
Weekend With Ramesh: ಈ ವಾರ ಸಾಧಕರ ಕುರ್ಚಿಯಲ್ಲಿ ಇಬ್ಬರು ಅತಿಥಿಗಳು; ಯಾರೆಂದು ಗೆಸ್ ಮಾಡಿ
ಇದಕ್ಕೆ ಉತ್ತರಿಸಿದ ಅವಿನಾಶ್ ಹೌದು ಎಂದು ಹೇಳಿದರು. ಬಳಿಕ ಯಾಕೆಂದು ವಿವರಿಸಿದರು ಮಾಳವಿಕಾ. 'ಹೃದಯದಲ್ಲಿ ಇದ್ದವರನ್ನ ದೇವರ ಮನೆಯಲ್ಲಿ ಕೂರಿಸುವುದು ದೊಡ್ಡ ವಿಷಯವಲ್ಲ' ಎಂದು ಹೇಳಿದರು. 'ನಮ್ಮನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಪ್ರತಿ ಹೆಜ್ಜೆಯಲ್ಲೂ ಅವಳಿಗೆ ಫೋನ್ ಮಾಡೋರು' ಎಂದು ಅವಿನಾಶ್ ಹೇಳಿದರು. 'ತಂದೆ ಸ್ವರೂಪವಾಗಿ ನಮ್ಮ ಜೊತೆ ಇದ್ದರು. ಅವರ ನೆರಳು ನಮ್ಮ ಬಿಟ್ಟು ಹೋಗಿಲ್ಲ' ಎಂದು ಮಾಳವಿಕಾ ವಿವರಿಸಿದರು. ಬಳಿಕ ರಮೇಶ್ ಅರವಿಂದ್ ಮಾತನಾಡಿ, 'ಆಪ್ತ ರಕ್ಷಕ ಎನ್ನುವುದು ಕೇವಲ ಟೈಟಲ್ ಮಾತ್ರವಲ್ಲ, ಅವರ ಸ್ವಾಭಾವ' ಎಂದು ರಮೇಶ್ ಹೇಳಿದರು.
ಮಗನ ಜೊತೆ ದೇವರಿದ್ದಾನೆ; ವೀಕೆಂಡ್ ವಿತ್ ರಮೇಶ್‌ನಲ್ಲಿ ಅವಿನಾಶ್- ಮಾಳವಿಕಾ ವಿಶೇಷಚೇತನ ಪುತ್ರ
ಈ ಪ್ರೋಮೋಗೆ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ. ದಾದಾ ಅಭಿಮಾನಿಗಳು ಎಂದು ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಅವ್ರು ಅಭಿಮಾನಿಗಳು ಇರೋವರೆಗೂ ದಾದಾ ಅಜರಾಮರ ಎಂದು ಹೇಳುತ್ತಿದ್ದಾರೆ. ಅವನಾಶ್ ಅವರ ಬಗ್ಗೆ ಮತ್ತಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ವೀಕೆಂಡ್ ವಿತ್ ರಮೇಶ್ ಪ್ರಸಾರವಾಗಲಿದೆ.