ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯಲ್ಲಿ ಖಳ ನಟನ ಪಾತ್ರದಲ್ಲಿ ಮಿಂಚಿದ ಕೆಜಿಎಫ್ ವಿಲನ್ ಗರುಡ ಕುಟುಂಬಕ್ಕೆ 21ರಂದು  ಮುದ್ದು ಮಗಳು ಬಂದಿದ್ದಾಳೆ.   ಅದನ್ನು ಡಿಸೆಂಬರ್‌ 1 ರಂದು ರಿವೀಲ್ ಮಾಡಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿತ್ಯಾ ರಾಮ್ ಮದುವೆ ಫೋಟೋಸ್!

'ವಿತ್‌ ಯೂ ಇನ್‌ ಅವರ್‌ ಲೈಫ್. ನಮ್ಮ ಕುಟುಂಬ ಈಗ ತುಂಬು ಕುಟುಂಬ. ನವೆಂಬರ್‌ 21 ರಂದು ಹೆಣ್ಣು ಮಗಳನ್ನು ಬರಮಾಡಿಕೊಂಡಿದ್ದೇವೆ' ಎಂದು ಫೋಟೋ ಮೂಲಕ ರಿವೀಲ್ ಮಾಡಿದ್ದಾರೆ. ಈಗಾಗಲೇ ಅವರಿಗೆ ಒಬ್ಬ ಗಂಡು ಮಗನಿದ್ದು ಅವನೊಂದಿಗೆ ಪ್ರೆಗ್ನೆನ್ಸಿ ಫೋಟೋ ಶೂಟ್‌ ಮಾಡಿಸಿದ್ದಾರೆ.

 

ರಾಮಚಂದ್ರ ರಾಜು ಅಲಿಯಾಸ್ ಗರುಡ ಈ ಹಿಂದೆ ಕೆಜಿಎಫ್‌ ಯಶಸ್ಸಿನ ಬೆನ್ನಲ್ಲೇ ಬಿಳಿ ಬಣ್ಣದ ಹೊಸ ಫಾರ್ಚೂನರ್‌ ಕಾರನ್ನು ಖರೀದಿಸಿದ್ದರು.  ಯಶಸ್ಸು ತಂದು ಕೊಟ್ಟಂತ ಗರುಡನ ಪ್ರತಿಮೆಯನ್ನು ಕಾರಿನ ಮೇಲೆ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಖರೀದಿಸಿದ ದಿನವೇ ರಾಕಿಂಗ್ ಸ್ಟಾರ್ ಯಶ್‌ರನ್ನು ಭೇಟಿ ಮಾಡಿ ಸ್ವೀಟ್‌ ಹಂಚಿ ಫೋಟೋ ತೆಗೆದುಕೊಂಡಿದ್ದಾರೆ. ಗರುಡನಾಗಿ ಮಿಂಚಲು ಅವಕಾಶ ಮಾಡಿಕೊಟ್ಟ ಯಶ್ ಮೇಲೆ ರಾಮ್‌ಗೆ ಅಪಾರ ಅಭಿಮಾನ ಮತ್ತ ಗೌರವ.