ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಕೆಜಿಎಫ್ ಸಿನಿಮಾದಲ್ಲಿ ಪಂಚ್ ಡೈಲಾಗ್ ಹೊಡೆಯುವ ಮೂಲಕ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದ ಹಿರಿಯ ನಟ ಕೃಷ್ಣ ಜಿ.ರಾವ್ ನಿಧನ ಹೊಂದಿದರು.
ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಕೆಜಿಎಫ್ ಸಿನಿಮಾದಲ್ಲಿ ಪಂಚ್ ಡೈಲಾಗ್ ಹೊಡೆಯುವ ಮೂಲಕ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದ ಹಿರಿಯ ನಟ ಕೃಷ್ಣ ಜಿ.ರಾವ್ ನಿಧನ ಹೊಂದಿದರು. ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಕೃಷ್ಣ ಜಿ.ರಾವ್ ಇಂದು (ಡಿಸೆಂಬರ್ 7) ರಂದು ಇಹಲೋಕ ತ್ಯಜಿಸಿದರು. ಕೃಷ್ಣ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 5 ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೆ ಕೃಷ್ಣ ಅವರು ಬಾರದಲೋಕಕ್ಕೆ ಪಯಣ ಬೆಳೆಸಿದರು. 73 ವರ್ಷದ ನಟ ಕೃಷ್ಣ ಅವರಿಗೆ ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು.
ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಐದು ದಿನಗಳ ಹಿಂದೆ ಕೃಷ್ಣ ಅವರು ಸಂಬಂಧಿಕರ ಮನೆಗೆ ಹೋಗಿದ್ದಾಗ ಸುಸ್ತಾಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃಷ್ಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೃಷ್ಣ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಕೊಡಲಿಲ್ಲ. ಇಂದು ಕೃಷ್ಣ ಅವರು ಕೊನೆಯುಸಿರೆಳೆದರು.
KGF ತಾತ ಕೃಷ್ಣ ಜಿ.ರಾವ್ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ
ಕೆಜಿಎಫ್ ಸಿನಿಮಾದಲ್ಲಿ 'ನಿಮಗೊಂದು ಸಲಹೆ ಕೊಡ್ತೀನಿ. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋದಕ್ಕೆ ಹೋಗ್ಬೇಡಿ ಸಾರ್.. ' ಎಂದು ಡೈಲಾಗ್ ಹೇಳಿ ಖ್ಯಾತಿಗಳಿಸಿದ್ದರು. ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದರು. ಅವರ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರೇಕ್ಷಕರು ಕೃಷ್ಣ ಅವರನ್ನು ನೀವು ಮಾತ್ರ ಅಡ್ಡ ನಿಲ್ಲೋಕೆ ಹೋಗಬೇಡಿ ಎಂದು ಡೈಲಾಗ್ ಹೊಡೆದೇ ಮಾತನಾಡಿಸುತ್ತಿದ್ದರು. ಕೆಜಿಎಫ್ ಪಾರ್ಟ್ 2ನಲ್ಲೂ ತಾತ ನಟಿಸಿದ್ದರು. ಕೆಜಿಎಫ್ ಸಿನಿಮಾ ಬಳಿಕ ಕೃಷ್ಣ ಅವರನ್ನು ಕೆಜಿಎಫ್ ತಾತಾ ಅಂತನೇ ಕರೆಯಲಾಗುತ್ತಿತ್ತು.
ಈ ಸಿನಿಮಾ ಬಳಿಕ ಕೃಷ್ಣ ಅವರಿಗೆ ಸಿನಿಮಾರಂಗದಲ್ಲಿ ಆಫರ್ ಕೂಡ ಹೆಚ್ಚಾಗಿತ್ತು. ಕೆಜಿಎಫ್ ಯಶಸ್ಸಿನ ನಂತರ ಕಣ್ಣು ಕಾಣದ ಮುದುಕನ ಪಾತ್ರದಲ್ಲಿ ನಟಿಸಿದ್ದರು. ಕೃಷ್ಣ, ಕುಮಾರ್ ನಿರ್ದೇಶನದ ನ್ಯಾನೋ ನಾರಾಯಣಪ್ಪ ಎಂಬ ಹಾಸ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಈ ಹಿಂದೆ 'ಕೆಮಿಸ್ಟ್ರಿ ಆಫ್ ಕರಿಯಪ್ಪ', 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾಗಳನ್ನು ನಿರ್ದೇಶನ ಮಾಡಿ, ಭರವಸೆ ಮೂಡಿಸಿದ್ದ ಕುಮಾರ್ 'ನ್ಯಾನೋ ನಾರಾಯಣಪ್ಪ' ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ. ಕನ್ನಡ ಜೊತೆಗೆ ಈ ಸಿನಿಮಾ ತೆಲುಗಿನಲ್ಲೂ ತಯಾರಾಗುತ್ತಿದೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಕೃಷ್ಣ ನಿಧನ ಹೊಂದಿದರು.
