ಸ್ಯಾಂಡಲ್‌ವುಡ್‌ ನಟಿ ಸಂಯುಕ್ತಾ ಹೆಗ್ಡೆ ಹಾಗೂ ಕವಿತಾ ರೆಡ್ಡಿ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟಿಸಿದೆ. ಕಣ್ಣಾರೆ ಸಾಕ್ಷಿ ವಿಡಿಯೋ ನೋಡಿದ  ನಂತರ ಸಂಯುಕ್ತಾ ಪರ ನಿಂತ ಚಿತ್ರರಂಗದ ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು, ಕವಿತಾ ರೆಡ್ಡಿ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದರು.

ನಿಜಕ್ಕೂ ನಟಿ ಸಂಯುಕ್ತಾ ಹೆಗ್ಡೆ- ಕವಿತಾ ರೆಡ್ಡಿ ನಡುವೆ ಏನಾಯ್ತು?

ಕವಿತಾ ರೆಡ್ಡಿ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಹಾಗೂ ಅನೇಕ ಕ್ರಿಡಾ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿದ್ದಾರೆ. ಅವರವರ ವೈಯಕ್ತಿಕ ಆಶಯದಂತೆ, ಜಿಮ್ ಮಾಡುವಾಗ ಹಾಗೂ ವಾಕಿಂಗ್ ಮಾಡುವಾಗ ಬೇರೆ ಬೇರೆ ರೀತಿಯ ಡ್ರೆಸ್ ಧರಿಸುತ್ತಾರೆ.  ಸಂಯುಕ್ತಾ ಸ್ಫೋರ್ಟ್ಸ್ ಬ್ರಾ ತೊಟ್ಟ ಕಾರಣ ಅವಾಚ್ಯ ಶಬ್ಧಗಳನ್ನು ಬಳಸಿ ಕವಿತಾ ಹಲ್ಲೆ ಮಾಡಿದ್ದಾರೆ, ಎಂದು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.

 

ಕವಿತಾ ಕ್ಷಮೆ:
'ಸೆಪ್ಟೆಂಬರ್ 4ರಂದು ಸಂಯುಕ್ತಾ ಮತ್ತು ಸ್ನೇಹಿತರು ಹಾಗೂ ನನ್ನ ನಡುವೆ ನಡೆದ ಘಟನೆ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಸಾರ್ವಜನಿಕರ ಜೊತೆಯೂ ಮಾತಿನ ಸಮರ ನಡೆದಿತ್ತು. ನೈತಿಕ ಪೊಲೀಸ್ ಗಿರಿ ಫಾಲೋ ಮಾಡುವ ನಾನು ಹಾಗೆ ಮಾಡಬಾರದಿತ್ತು,' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

'ನೈತಿಕ ಪೊಲೀಸ್ ಗಿರಿ ಯನ್ನು ವಿರೋಧಿಸುವ ವ್ಯಕ್ತಿ ನಾನು. ನಮ್ಮ ನಡುವೆ ವಿವಾದದ ಮಾತುಗಳು ಹೆಚ್ಚಾದ ಕಾರಣ ನಾನು ಕೋಪದಲ್ಲಿ ಹಾಗೆ ವರ್ತಿಸಿದೆ. ಭಾರತದ ಜವಾಬ್ದಾರಿಯುತ ಪ್ರಜೆ ಹಾಗೂ ಪ್ರಗತಿ ಪರ ಮಹಿಳೆಯಾಗಿ ನಾನು ನಡೆದ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ,' ಎಂದು ಕವಿತಾ ಬರೆದಿಕೊಂಡಿದ್ದಾರೆ. ಕ್ಷಮೆ ಕೇಳಿದ ನಂತರ ಪಬ್ಲಿಕ್‌ ಆಗಿದ್ದ  ಇನ್‌ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್‌ ಮಾಡಿದ್ದಾರೆ.