ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದ ಡಾ. ರಾಜ್ ಪ್ರೀತಿಯ 'ಕಸ್ತೂರಿ ನಿವಾಸ'ಕ್ಕೆ 50 ವರ್ಷ!
ಡಾ.ರಾಜ್‌ಕುಮಾರ್ ಅಭಿನಯದ ಕಸ್ತೂರಿ ನಿಚಾದ ಚಿತ್ರ ರಿಲೀಸ್ ಆಗಿ 50 ವರ್ಷ ಪೂರೈಸಿದೆ.
ವರನಟ ಡಾ. ರಾಜ್‌ಕುಮಾರ್ ಅಭಿನಯಿಸಿರುವ ಅನೇಕ ಚಿತ್ರಗಳು ಈಗಾಗಲೇ 50 ವರ್ಷ ಪೂರೈಸಿದೆ. 1971ರಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿದ ಸಿನಿಮಾ 'ಕಸ್ತೂರಿ ನಿವಾಸ'ವೂ ಇದೀಗ 50 ಪೂರೈಸಿದೆ.
ಡಾ.ರಾಜ್ ಮಾರ್ಗದರ್ಶನದಲ್ಲಿ ನಡೆದ ದರ್ಶನ್; ಸಂಭಾವನೆ ಪಡೆಯದೆ ರಾಯಭಾರಿ!
ರಾಜಣ್ಣನ ವೃತ್ತಿ ಜೀವನದ ಎವರ್‌ಗ್ರೀನ್ ಸಿನಿಮಾ ಇದಾಗಿದ್ದು ಅನೇಕರ ಜೀವನ ಬದಲಾಯಿಸಿದೆ. ಉದ್ಯಮಿಯಾಗಿ, ಗೆಳಯ, ಪತಿ ಹಾಗೂ ಭಗ್ನಪ್ರೇಮಿ ರವಿ ಪಾತ್ರದಲ್ಲಿ ಮಿಂಚಿದ್ದಾರೆ. ಕೆಸಿಎಸ್ ಗೌಡ ನಿರ್ಮಾನದಲ್ಲಿ ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿಬಂದಿದ ಈ ಚಿತ್ರದಲ್ಲಿ ಜಯಂತಿ ಹಾಗೂ ಆರತಿ ನಟಿಸಿದ್ದಾರೆ. ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ 'ಆಡಿಸಿ ನೋಡು ಬೀಳಿಸಿ ನೋಡು','ನೀ ಬಂದು ನಿಂತಾಗಾ' ಹಾಗೂ 'ಆಡಿಸಿದಾತ ಬೇಸರ ಮೂಡಿ' ಈಗಲೂ ಎವರ್‌ಗ್ರೀನ್ ಹಾಡುಗಳಾಗಿ ಗುರುತಿಸಿಕೊಂಡಿದೆ. ಯಾವುದೇ ಕಾರ್ಯಕ್ರಮವಿರಲಿ ಕಸ್ತೂರಿ ನಿವಾಸ ಚಿತ್ರದ ಹಾಡು ಪ್ರಸಾರವಾಗದೆ ಅಂತ್ಯವಾಗುವುದಿಲ್ಲ.
ಕಸ್ತೂರಿ ನಿವಾಸ ಬಿಡುಗಡೆಯಾದ ದಿನ ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲ ಆದರೆ ದಿನ ಕಳೆಯುತ್ತಿದ್ದಂತೆ 16 ಚಿತ್ರಮಂದಿರಗಳಲ್ಲಿ 100 ವಾರ ಹಿಟ್ ಪೂರೈಸಿ ದಾಖಲೆ ಬರೆದಿದೆ. 2014ರಲ್ಲಿ ಕಲರಿಂಗ್ ಮಾಡಿ ರೀ ರಿಲೀಸ್ ಮಾಡಲಾಯಿತು. ಆಗಲೂ ಸಿನಿಮಾ 100 ದಿನ ಪೂರೈಸಿತ್ತು. ಕಸ್ತೂರಿ ನಿವಾಸ ಚಿತ್ರವನ್ನು ತೆಮಿಳು 'ಅವನ್‌ಧಾನ್ ಮಣಿಧನ್' ಎಂದು ಹಾಗೂ ಹಿಂದಿಯಲ್ಲಿ 'ಶಾಂದಾರ್' ಶೀರ್ಷಿಕೆಯಲ್ಲಿ ರಿಮೇಕ್ ಮಾಡಲಾಗಿದೆ.