'ಜಪಾನ್' ಟೀಸರ್ ರಿಲೀಸ್ ಮಾಡಿ ತಮಿಳು ಸ್ಟಾರ್ ಕಾರ್ತಿಗೆ ವಿಶ್ ಮಾಡಿದ್ದಾರೆ 'ಕಾಂತಾರ' ಹೀರೋ ರಿಷಬ್ ಶೆಟ್ಟಿ.
ತಮಿಳಿನ ಖ್ಯಾತ ನಟ ಕಾರ್ತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಾರ್ತಿ 46ನೇ ವಸಂತಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ವಿಶ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಕಾರ್ತಿ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷೆಯ ಜಪಾನ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಜಪಾನ್ ಕಾರ್ತಿ ನಟನೆಯ 25ನೇ ಸಿನಿಮಾವಾಗಿದೆ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಕಾರ್ತಿ ಇದೀಗ ಜಪಾನ್ ಮೂಲಕ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಜಪಾನ್ ಸಿನಿಮಾದಲ್ಲಿ ಕಾರ್ತಿ ಹೀರೋ ಆಗಿ, ಕಮಿಡಿನ್ ಆಗಿ, ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗುಂಗುರು ಕೂದಲಿನಲ್ಲಿ ಕಾಣಿಸಿಕೊಂಡಿರುವ ಕಾರ್ತಿ ಕೈಯಲ್ಲಿ ಗನ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಜಪಾನ್ ಅಂದ ಮಾತ್ರಕ್ಕೆ ಇದು ಜಪಾನ್ ದೇಶದ ಬಗ್ಗೆ ಇರುವ ಸಿನಿಮಾ ಅಂತ ಅಂದ್ಕೋಬೇಡಿ. ಜಪಾನ್ ಎನ್ನುವುದು ಕಾರ್ತಿ ಪಾತ್ರದ ಹೆಸರು. 'ಜಪಾನ್ ಆದರೆ ಮೇಡ್ ಇನ್ ಇಂಡಿಯಾ' ಎನ್ನುವ ಟ್ಯಾಗ್ ಲೈನ್ ಕೂಡ ಇದೆ.
ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ ರಿಷಬ್ ಶೆಟ್ಟಿ;ಇದು ಕೆರಾಡಿ ಸ್ಟುಡಿಯೋಸ್!
ಅಂದಹಾಗೆ ಜಪಾನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಸೌತ್ ಸಿನಿಮಾರಂಗದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಕನ್ನಡಗಲ್ಲೂ ಜಪಾನ್ ದರ್ಶನ ಆಗಲಿದೆ. ಕಾರ್ತಿ ಸಿನಿಮಾದ ಟೀಸರ್ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದ್ದಾರೆ. ಕಾರ್ತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. 'ಜಪಾನ್ ಪ್ರೀತಿಯ ಸ್ನೇಹಿತ ಕಾರ್ತಿ 25ನೆ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು . ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ' ಎಂದು ಟ್ವೀಟ್ ಮಾಡಿದ್ದಾರೆ.
ಮುದ್ದಾದ ಕುಟುಂಬದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ ಪತ್ನಿ; ಕರ್ಲಿ ಫ್ಯಾಮಿಲಿ ಎಂದ ಫ್ಯಾನ್ಸ್
ಜಪಾನ್ ಸಿನಿಮಾಗೆ ರಾಜು ಮುರುಗನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆದ್ದು ಬೀಗಿದ್ದ ನಿರ್ದೇಶಕ ರಾಜು ಕಾರ್ತಿ ಜೊತೆ ಜಪಾನ್ ಸಿನಿಮಾಗೆ ಕೈಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಕಾರ್ತಿಗೆ ನಾಯಕಿಯಾಗಿ ಅನು ಇಮ್ಯಾನುಯೆಲ್ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಹಂತದಲ್ಲಿರುವ ಜಪಾನ್ ಸಿನಿಮಾ ದೀಪಾವಳಿಗೆ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.
