ದಚ್ಚುಗೆ ಥ್ಯಾಂಕ್ಸ್ ಹೇಳಿದ ಕರ್ನಾಟಕ ಅರಣ್ಯ ಇಲಾಖೆ ಪ್ರಾಣಿ, ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದ ನಟ

ಕರ್ನಾಟಕ ಅರಣ್ಯ‌ ಇಲಾಖೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಧನ್ಯವಾದ ಹೇಳಿದ್ದಾರೆ. ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಜನರಲ್ಲಿ ಮನವಿ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದ ಹಲವಾರು‌ ಜನ‌ ದರ್ಶನ್ ಅಭಿಮಾನಿಗಳು ಪ್ರಾಣಿ ಪಕ್ಷಿಗಳನ್ನ ದತ್ತು ಪಡೆದಿದ್ದಾರೆ. ರಾಜ್ಯ ಅರಣ್ಯ ಇಲಾಖೆ ರಾಯಭಾರಿ ಆಗಿರೋ ದಚ್ಚುಗೆ ಕರ್ನಾಟಕ ಅರಣ್ಯ ಇಲಾಖೆ ಧನ್ಯವಾದ ತಿಳಿಸಿದೆ.

ಕರ್ನಾಟಕದ Zooನಲ್ಲಿ ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್ ಮನವಿ!.

ಶ್ರೀ ದರ್ಶನ್ ತೂಗುದೀಪರವರು ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮತ್ತು ದೇಣಿಗೆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯಿಂದ ಅವರಿಗೆ ಧನ್ಯವಾದಗಳು ಎಂದು ಅರಣ್ಯ ಇಲಾಖೆ ಫೇಸ್‌ಬುಕ್ ಪೋಸ್ಟ್ ಮೂಲಕ ಧನ್ಯವಾದ ತಿಳಿಸಿದೆ.

ಕೋವಿಡ್‌ ಲಾಕ್‌ಡೌನ್‌ನಿಂದ ಮೃಗಾಲಯಗಳು ಮುಚ್ಚಲಾಗಿದೆ ಇದರಿಂದ ಪ್ರಾಣಿಗಳು ಹಾಗೂ ಜೂ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ನಮ್ಮ ಕರ್ನಾಟಕದಲ್ಲಿ ಒಟ್ಟು 9 ಜೂಗಳದ್ದು, ಅಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದು, ಒಂದು ವರ್ಷದ ಅವಧಿಗೆ ನೆರವಾಗಿ ನಿಲ್ಲಲು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿಕೊಂಡಿದ್ದರು.